ಡಿ. ವೀರೇಂದ್ರ ಹೆಗ್ಗಡೆಯವರು ನಾಡಿನ ಬೆಳಕು: ಬಿ. ಸೋಮಶೇಖರ ಶೆಟ್ಟಿ

Upayuktha
0


ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 75ನೇ ವರ್ಷದ ಜನ್ಮದಿನಾಚರಣೆ ಸಮಾರಂಭವನ್ನು ಎಸ್.ಡಿ.ಎಂ. ಡಿ.ಎಲ್.ಇಡಿ. ಕಾಲೇಜಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. 


ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ (ರಿ) ಉಜಿರೆಯ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ  ಬಿ. ಸೋಮಶೇಖರ ಶೆಟ್ಟಿಯವರು ಆಗಮಿಸಿ ಪೂಜ್ಯ ಹೆಗ್ಗಡೆಯವರು ನಾಡಿನ ಬೆಳಕು ಎಂದು ತಿಳಿಸಿದರು.  ಕಡಿಮೆ ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ಎಲ್.ಕೆ.ಜಿ. ಯಿಂದ ಉನ್ನತ ಶಿಕ್ಷಣದವರೆಗೆ ವಿದ್ಯಾದಾನ ಮಾಡುತ್ತಿದ್ದಾರೆ.  ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಅವರ್ಣನೀಯ.  ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದವರು ಹೆಗ್ಗಡೆಯವರು ಎಂದು ತಿಳಿಸಿದರು.


ಸಂಸ್ಥೆಯ ಪ್ರಾಂಶುಪಾಲ ಸ್ವಾಮಿ ಕೆ ಎ ಯವರು ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿ, ಹೆಗ್ಗಡೆಯವರು ದೂರದೃಷ್ಠಿಯುಳ್ಳ ವರು, ಆಧ್ಯಾತ್ಮ ಚಿಂತಕರು, ಅಭಿವೃದ್ಧಿಯ ಹರಿಕಾರ. ಆವರ ಮಾರ್ಗದರ್ಶನದಡಿಯಲ್ಲಿ ನಾವೆಲ್ಲ ಕೆಲಸ ನಿರ್ವಹಿಸುತ್ತಿರುವುದು ನಮಗೆ ಹೆಮ್ಮೆ ಎಂದು ಹೇಳಿದರು. 


ಡಾ. ಡಿ. ವೀರೇಂದ್ರ ಹೆಗ್ಗಡೆಯವರ 75 ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ ಆಶುಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಡಿ.ಇಲ್.ಇಡಿ.ಯ ಪ್ರಶಿಕ್ಷಣಾರ್ಥಿ ಯತೀಕ್ಷಾ ಪ್ರಥಮ ಬಹುಮಾನವನ್ನು ಹಾಗೂ ಪ್ರಥಮ ಡಿ.ಇಲ್.ಇಡಿ.ಯ ಪ್ರಶಿಕ್ಷಣಾರ್ಥಿ ಅಂಬಿಕಾ ದ್ವಿತೀಯ ಬಹುಮಾನವನ್ನು ಪಡೆದುಕೊಂಡರು.  


ಹಾಗೆಯೇ ಶಿಕ್ಷಣ ಕ್ಷೇತ್ರದಲ್ಲಿ ಪೂಜ್ಯ ಖಾವಂದರ ಕೊಡುಗೆಗಳು ಎಂಬ ವಿಷಯದಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಡಿ.ಇಲ್.ಇಡಿ.ಯ ಪ್ರಶಿಕ್ಷಣಾರ್ಥಿಗಳಾದ ಅನುಷಾ ಪ್ರಥಮ ಬಹುಮಾನವನ್ನು ಮತ್ತು  ಮುಜೈನಾ ದ್ವಿತೀಯ ಬಹುಮಾನವನ್ನು ಪಡೆದುಕೊಂಡರು. 

 ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದ ಹಾಗೂ ಎಲ್ಲಾ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಜಲಜಾಕ್ಷಿ ಸ್ವಾಗತಿಸಿ, ಆರತಿ ವಂದಿಸಿ,  ಅಶ್ವಿನಿ ಪಿ ಹೆಚ್ ನಿರೂಪಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top