ಉಡುಪಿ: ನೃತ್ಯನಿಕೇತನ ಕೊಡವೂರು ಸಂಸ್ಥೆಯ ವತಿಯಿಂದ ಕೊಡಲ್ಪಡುವ ಐದನೇ ವರುಷದ ಕೃಷ್ಣಪ್ರೇಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 19- ನವೆಂಬರ್ 23 ಆದಿತ್ಯವಾರದಂದು ಕೊಡವೂರಿನ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತಮಂಟಪದಲ್ಲಿ ಸಂಜೆ 5-30 ರಿಂದ ನಡೆಯಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತ್ಯ ವಿಮರ್ಶಕರಾದ ಪ್ರೊ|| ಮುರಳೀಧರ ಉಪಾಧ್ಯ ಹಿರಿಯಡ್ಕ ವಹಿಸಿಕೊಳ್ಳಲಿದ್ದಾರೆ. ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಉದ್ಯಮಿಗಳಾದ ಸಾಧು ಸಾಲ್ಯಾನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಮತ್ತು ಉಡುಪಿಯ ಹಿರಿಯ ಉದ್ಯಮಿಗಳಾದ ವಿಶ್ವನಾಥ್ ಶೆಣೈ ಯವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಬಾರಿಯ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಹಲವು ಸಾಧನೆಗಳನ್ನು ಮಾಡಿದ ನೃತ್ಯಸಾಹಿತ್ಯ ಕ್ಷೇತ್ರದ ಸಾಧಕಿ ವಿದುಷಿ ಬಿ.ಸುಮಂಗಲಾ ರತ್ನಾಕರ್ ಮಂಗಳೂರು, ನೃತ್ಯವಾದ್ಯಸಂಗೀತ ಕ್ಷೇತ್ರದ ಸಾಧಕರಾದ ಬಾಲಚಂದ್ರ ಭಾಗವತ್ ಉಡುಪಿ, ನೃತ್ಯವರ್ಣಾಲಂಕಾರ ಕ್ಷೇತ್ರದ ಸಾಧಕ ರಮೇಶ್ ಕೆ ಪಣಿಯಾಡಿ, ನಾಟಕ, ಸಂಗೀತ, ನಿರ್ದೇಶನದ ಸಾಧಕ ಗುರುರಾಜ್ ಮಾರ್ಪಳ್ಳಿ,ನಾಟಕದ ನಟನಾ ಕ್ಷೇತ್ರದ ಗೋವಿಂದ ಐತಾಳ್ ಕೊಡವೂರು ಮತ್ತು ಕಾಳು ಶೇರಿಗಾರ್ ಕೊಡವೂರು ಇವರಿಗೆ ಪ್ರದಾನ ಮಾಡಲಾಗುವುದು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ