ಉಡುಪಿ: ಉಡುಪಿಯ ಅತ್ಯಂತ ಪ್ರಾಚೀನ ದೇವಸ್ಥಾನಗಳಲ್ಲಿ ಒಂದಾಗಿರುವ ಸುಮಾರು 13 ಶತಮಾನಗಳ ಇತಿಹಾಸ ಹೊಂದಿರುವ ಕೀಳಂಜೆ ಶ್ರೀ ಮಹಾವಿಷ್ಣು ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾಗಿ ಮಾರ್ಗದರ್ಶನಗೈಯಲು ಉಡುಪಿ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸಮ್ಮತಿಸಿದ್ದಾರೆ.
ಬುಧವಾರ ಸಂಜೆ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಮಂಗಳಾರತಿ ಬೆಳಗಿ ಗ್ರಾಮದ ಭಕ್ತರು ನೀಡಿದ ಗುರುವಂದನೆಯನ್ನು ಸ್ವೀಕರಿಸಿ ಸಂದೇಶ ನೀಡಿದರು.
ಆಹಾ! ಅದೆಂಥ ಸೊಬಗು; ಅದೆಂಥ ದೈವೀ ಸೆಲೆ! ಶ್ರೀಗಳ ಉದ್ಗಾರ!
ದೇವಳದ ಒಳಗೆ ಕಾಲಿಡುತ್ತಲೇ ಅಲ್ಲಿನ ಶುದ್ಧ ಪ್ರಾಕೃತಿಕ ಸೌಂದರ್ಯವನ್ನು ಕಂಡು ಮನಸಾ ಸಂತಸಪಟ್ಟರು. ಇವತ್ತಿನ ಕಾಲಕ್ಕೆ ನಮ್ಮ ನಡುವೆ ಇಷ್ಟು ಪ್ರಶಾಂತವಾದ ಶುದ್ಧ ಪ್ರಾಕೃತಿಕ ಸೊಬಗಿನ ದಿವ್ಯ ಕ್ಷೇತ್ರ ಇದೆ ಎನ್ನುವುದೇ ಅಚ್ಚರಿ. ಇಲ್ಲಿನ ದೈವೀ ಸಾನ್ನಿಧ್ಯಕ್ಕೆ ಬೇರೆ ಸಾಕ್ಷಿ ಬೇಡ. ಇಲ್ಲಿನ ಪುಷ್ಕರಿಣಿ ತೀರ್ಥದ ನೆಲೆ ಅತ್ಯಂತ ಸುಂದರವಾಗಿ ಮನಸ್ಸಿಗೆ ಮುದ ನೀಡುತ್ತದೆ. ಆದ್ದರಿಂದ ನವೀಕರಣ ಕಾರ್ಯದಿಂದ ಈ ಪ್ರಾಕೃತಿಕ ಸೊಬಗಿಗೆ ಮತ್ತು ಪ್ರಶಾಂತವಾತಾವರಣಕ್ಕೆ ಯಾವುದೇ ಹಾನಿಯಾಗದೇ ಅದನ್ನು ಮತ್ತಷ್ಟು ಹೆಚ್ಚಿಸುವ ರೀತಿಯಲ್ಲಿ ಎಷ್ಟು ಅವಶ್ಯವೋ ಅಷ್ಟು ಮಾತ್ರ ಮಾಡುವಂತಾಗಲಿ ಅದರಿಂದ ಇಲ್ಲಿ ಸಾನ್ನಿಧ್ಯ ಮತ್ತಷ್ಟು ವೃದ್ಧಿಯಾಗಿ ಭಕ್ತರಿಗೆ ಗ್ರಾಮಕ್ಕೆ ಒಳಿತಾಗಲಿ ಎಂದು ಹಾರೈಸಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯವ ಉದ್ಯಮಿ, ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ನಿರ್ದೇಶಕ ಸಿದ್ಧಾರ್ಥ್ ಶೆಟ್ಟಿ ಶ್ರೀಗಳ ಆಶೀರ್ವಾದದ ಶಕ್ತಿಯಿಂದ ನವೀಕರಣ ಕಾರ್ಯಕ್ಕೆ ಹೊಸ ಸ್ಫೂರ್ತಿ ದೊರೆತಿದೆ ಎಂದರು. ಪ್ರಧಾನ ಕಾರ್ಯದರ್ಶಿ ಹರೀಶ್ ಶೆಟ್ಟಿ, ಕೋಶಾಧಿಕಾರಿ ವಿಕ್ರಾಂತ್ ಶೆಟ್ಟಿ, ಅರ್ಚಕ ರವೀಂದ್ರ ಭಟ್, ವಾಸುದೇವ ಭಟ್ ಪೆರಂಪಳ್ಳಿ ಮತ್ತು ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ