ಬೃಹತ್‌ ಗಾತ್ರದ ಹೆಬ್ಬಾವನ್ನು ಹಿಡಿದ ಉಡುಪಿಯ ಬಾಲಕ..!

Upayuktha
0

ಉಡುಪಿ: ಹನ್ನೆರಡು ವರ್ಷದ ಬಾಲಕನೋರ್ವ ಅತ್ಯಂತ ದೊಡ್ಡದಾದ ಹೆಬ್ಬಾವಿನ ತಲೆಗೇ ಕೈಹಾಕಿ ಹಿಡಿದಿರುವ ಘಟನೆ ಉಡುಪಿ ತಾಲೂಕಿನ ಸಾಲಿಗ್ರಾಮ ದೇವಾಡಿಗರಬೆಟ್ಟು ಗ್ರಾಮದಲ್ಲಿ ನಡೆದಿದೆ.


ಹೆಬ್ಬಾವನ್ನು ಹಿಡಿದ ಬಾಲಕನ ಹೆಸರು ಧೀರಜ್‌ ಐತಾಳ್‌. ಅವನ ತಂದೆ ಬೇರೆ ಯಾರೂ ಅಲ್ಲ, ಉಡುಪಿ ಭಾಗದ ಖ್ಯಾತ ಉರಗ ತಜ್ಞ ಸುಧೀಂದ್ರ ಐತಾಳ್‌.


ಪುಟ್ಟ ಬಾಲಕನ ಈ ಸಾಹಸದ ವಿಡಿಯೊ ಜಾಲತಾಣದಲ್ಲಿ ವೈರಲ್‌ ಆಗಿದ್ದ ಜನರ ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ.


 


ಸಾಲಿಗ್ರಾಮ ದೇವಾಡಿಗರಬೆಟ್ಟು ಗ್ರಾಮದಲ್ಲಿ ಹೆಬ್ಬಾವೊಂದು ಬಂದಿದೆ ಎಂಬ ಮಾಹಿತಿ ಪಡೆದ ಧೀರಜ್‌ ತನ್ನ ತಂದೆಯೊಂದಿಗೆ ಅಲ್ಲಿಗೆ ಹೋಗಿದ್ದ. ಪೊದೆಯಲ್ಲಿ ಅಡಗಿಕೊಂಡಿದ್ದ ಹಾವನ್ನು ಅಪ್ಪ ಬಾಲದಲ್ಲಿ ಹಿಡಿದರೆ ಮಗ ತಲೆಗೇ ಕೈ ಹಾಕಿ ದರದರನೆ ಎಳೆದುಕೊಂಡು ಬಂದಿದ್ದಾನೆ.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top