ಪ್ರಾಥಮಿಕ ಶಿಕ್ಷಣದ ಮಹತ್ವ ಮತ್ತು ಸೈನಾಪ್ಸ್ ಎಂಬ ನಿರ್ಣಾಯಕ ಅಂಶ

Upayuktha
0


ಕ್ಕಳು ಪ್ರಾಥಮಿಕವಾಗಿ ಕಲಿಯುವಾಗ ನೂರಾರು ಹಾಡುಗಳನ್ನು, ಚುಟುಕುಗಳನ್ನು, ಎಂದೋ ಯಾರೋ ಮಾತನಾಡಿದ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಒಂದೊಮ್ಮೆ ಮಕ್ಕಳ ನೆನಪಿನ ಶಕ್ತಿಯನ್ನು ಕಂಡು ಪಾಲಕರು ದಿಗ್ಭ್ರಮಿತರಾಗುತ್ತಾರೆ. ಮಗುವಿನ ಗ್ರಹಣ ಶಕ್ತಿಯ ಕುರಿತ ಅಚ್ಚರಿ ಅವರಲ್ಲಿ ಮನೆ ಮಾಡಿರುತ್ತದೆ. ಇದಕ್ಕೆಲ್ಲ ಏನು ಕಾರಣ ಗೊತ್ತೇ??


ನಿಜ.... ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಸರಿಯಾದ ಸಮಯ 5 ರಿಂದ 13 ವರ್ಷ. ಈ ಸಮಯದಲ್ಲಿ ಮಕ್ಕಳ ಅರಿವಿನ, ಗ್ರಹಿಕೆಯ, ಭಾವನಾತ್ಮಕ, ಸಾಮಾಜಿಕ ಮತ್ತು ಚಟುವಟಿಕೆಗಳಲ್ಲಿ ಹೆಚ್ಚು ಕ್ರಿಯಾಶೀಲತೆ ಕಂಡು ಬರುತ್ತದೆ. ಕಾರಣವಿಷ್ಟೆ.... ಆ ಮಕ್ಕಳ ಮೆದುಳಿನಲ್ಲಿರುವ ಸೈನಾಪ್ಸ ಎಂದು ಕರೆಯಲ್ಪಡುವ ಒಂದು ವಿಶಿಷ್ಟವಾದ ಮತ್ತು ನಿರ್ಣಾಯಕವಾದ ವಸ್ತು. ಈ ಸೈನಾಪ್ಪ್ಸ್ ಎಂಬ ವಸ್ತು ಮೆದುಳಿನ ನ್ಯೂರಾನ್ಗಳ ಮಧ್ಯದಲ್ಲಿ ತಂತುವಾಹಕವಾಗಿ ಕಾರ್ಯನಿರ್ವಹಿಸುತ್ತದೆ. ಒಂದು ನ್ಯೂರಾನನಿಂದ ಇನ್ನೊಂದು ನ್ಯೂರಾನನ ನಡುವೆ ಮಾಹಿತಿಗಳ ಸಂದೇಶವಾಹಕವಾಗಿ ಕಾರ್ಯ ನಿರ್ವಹಿಸುತ್ತದೆ. ಸೈನಾಪ್ಸ್ ಮಗುವಿನ ಮೆದುಳಿನ ಮಾನಸಿಕ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದು, ಏಕೆಂದರೆ ಮಗುವಿನ ಯೋಚನಾ ಶಕ್ತಿ, ಬುದ್ಧಿಮಟ್ಟ, ಗ್ರಹಿಕೆಯ ಮಟ್ಟ ಮತ್ತು ನಿರ್ವಹಣಾ ಸಾಮರ್ಥ್ಯವನ್ನು  ನಿರ್ಣಯಿಸುವುದು ಈ ಸೈನಾಪ್ಸ್ ಗಳು. ಮಗುವಿನ ಕಲಿಕೆಯ ಗುಣಮಟ್ಟ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುವ ಎಲ್ಲ ನಿರ್ಣಾಯಕ ಶಕ್ತಿ ಇರುವುದು ಈ ಸೈನಾಪ್ಸ್ ಗಳಿಗೆ ಮಾತ್ರ.


ಒಂದರಿಂದ ಐದರ ವಯಸ್ಸಿನಲ್ಲಿ ಮಗುವಿನ ಮೆದುಳಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವ ಈ ಸೈನಾಪ್ಸ್ ಗಳು ಮಗುವಿನ ಆಂತರಂಗಿಕ ಮತ್ತು ಬಾಹ್ಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಐದರಿಂದ ಹತ್ತರ ವಯಸ್ಸಿನಲ್ಲಂತೂ ಅತ್ಯಂತ ತ್ವರಿತವಾಗಿ ಇನ್ನೂ ಹೇಳಬೇಕೆಂದರೆ ಅಲಾರ್ಮಿಂಗ್ ರೇಟ್ನಲ್ಲಿ ಕಾರ್ಯನಿರ್ವಹಿಸುತ್ತವೆ. ಆದ್ದರಿಂದಲೇ ಮಕ್ಕಳಿಗೆ ಐದರಿಂದ ಹತ್ತು ವಯಸ್ಸಿನವರೆಗೆ ಸಕಾರಾತ್ಮಕತೆಯನ್ನು ಬಿಂಬಿಸುವ ಹಾಡು, ನೃತ್ಯ, ಚಿತ್ರಕಲೆ, ರಂಗ ಚಟುವಟಿಕೆ, ಅಬಾಕಸ್ ಮತ್ತು ವಿವಿಧ ಬಗೆಯ ಆಟೋಟಗಳು ಮುಂತಾದ ಹಲವಾರು ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಬೇಕು.


10ರಿಂದ 13 ವರ್ಷಗಳ ಮಧ್ಯದ ಅವಧಿಯಲ್ಲಿ ಮಕ್ಕಳು ಶಾಲಾ ಪಠ್ಯದ ಜೊತೆಗೆ ತಮಗೆ ಬೇಕಾದ ಎರಡು ಮೂರು ಕೌಶಲ್ಯವಿದ್ಯೆಗಳನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ಮುಂದೆ 13 ರಿಂದ 15 ವರ್ಷ ವಯಸ್ಸಿನ ಅವಧಿಯಲ್ಲಿ ಮಕ್ಕಳು ಶಾಲಾ ಪಠ್ಯದ ಜೊತೆಗೆ ಕೇವಲ ಒಂದು ಆಸಕ್ತಿಯ ವಿಷಯದ ಕಲಿಕೆಯನ್ನು ಮುಂದುವರಿಸಿಕೊಂಡು ಹೋಗುತ್ತಾರೆ.


ಇತ್ತೀಚಿನ ದಿನಗಳಲ್ಲಿ ಪಾಲಕರಲ್ಲಿ ಮಕ್ಕಳ ಮನೋ ದೈಹಿಕ ಬೆಳವಣಿಗೆಯ ಕುರಿತ ಜಾಗೃತಿ ಹೆಚ್ಚಾಗುತ್ತಿದ್ದು ಮಕ್ಕಳು ವಿವಿಧ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುವಾಗುವಂತೆ ಪ್ರಾಥಮಿಕ ಶಿಕ್ಷಣ ಸಂಸ್ಥೆಯು ಮಕ್ಕಳಿಗೆ ಆಟದ ಮೂಲಕ ಕಲಿಕೆಯ ವಿಧಾನಗಳನ್ನು ಅಳವಡಿಸಿಕೊಂಡಿವೆ. ಹಾಡು ಆಡು, ಕಲಿ ನಲಿ, ಅಭಿನಯ ಗೀತೆಗಳು, ಪ್ರತಿಭಾ ಕಾರಂಜಿ, ಚಿಗುರು ಕಲಿಕಾ ಉತ್ಸವ ಮುಂತಾದ  ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಹುದುಗಿರುವ ಅನನ್ಯ ಜಾಣ್ಮೆ ಮತ್ತು ಕಾರ್ಯದಕ್ಷತೆಯನ್ನು ಹೊರ ತರುವಲ್ಲಿ ಅದ್ವಿತೀಯ ಕಾರ್ಯ ನಿರ್ವಹಿಸುತ್ತಿವೆ. ಇದರ ಜೊತೆ ಜೊತೆಗೆ ಪ್ರತಿ ಶಾಲೆಗಳು ತಮ್ಮ ಶಾಲಾ ಮಕ್ಕಳಿಗಾಗಿ ವಿವಿಧ ಬಗೆಯ ಸ್ಪರ್ಧೆಗಳನ್ನು ಏರ್ಪಡಿಸಿ ಮಕ್ಕಳಲ್ಲಿರುವ ಕಲಿಕಾ ಕೌಶಲ್ಯ ಪ್ರದರ್ಶನಕ್ಕೆ ವೇದಿಕೆಯನ್ನು ಕಲ್ಪಿಸುತ್ತಾರೆ. ದೂರದರ್ಶನದಲ್ಲಿ ಪ್ರಸಾರವಾಗುವ ಅನೇಕ ರಿಯಾಲಿಟಿ ಶೋಗಳಲ್ಲಿಯೂ ಕೂಡ ಪುಟ್ಟ ಮಕ್ಕಳ ಟ್ಯಾಲೆಂಟ್ ಶೋ ಮೂಲಕ ಮಕ್ಕಳ ಸ್ವಾಭಾವಿಕ ಆಸ್ತೆಯನ್ನು ಎತ್ತಿ ಹಿಡಿಯಲಾಗುತ್ತದೆ.ಇಲ್ಲೂ ಕೂಡ ಕೆಲವು ವಿರೋಧಾಭಾಸಗಳಿವೆ. ಮಗುವಿನ ಮೇಲೆ ಪಾಲಕರು ಒತ್ತಡ ಹೇರುತ್ತಾರೆ ಎಂಬ ಅಪವಾದಗಳಿದ್ದರೂ ಕೂಡ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಕೂಡ ತಮ್ಮನ್ನು ತಾವು ಸ್ಪರ್ಧೆಯಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ತೋರಿಸುತ್ತವೆ. ಅದು ಅಲ್ಲದೆ ಪುಟ್ಟ ವಯಸ್ಸಿನಲ್ಲಿಯೇ ಅವರಿಗೆ ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು, ಕಲೆಗಳನ್ನು ಪ್ರದರ್ಶಿಸಲು ವೇದಿಕೆಗಳು ದೊರೆಯುತ್ತಿರುವುದು ಅವರ ಆಸಕ್ತಿಗೆ ನೀರೆರೆದಂತಾಗುತ್ತದೆ.


ನಗರಗಳಲ್ಲಂತೂ ಪಾಲಕರು ತಮ್ಮ ಮಕ್ಕಳು ಎಲ್ಲಾ ವಿಷಯಗಳಲ್ಲಿ ಅತ್ಯುನ್ನತ ಸ್ಥಾನ ಗಳಿಸಲಿ ಎಂಬ ಆಶಯದಿಂದ ತಮ್ಮೆಲ್ಲ ವೈಯುಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಪಾಲಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹ ಎಲ್ಲ ಮಕ್ಕಳ ಆಂತರಿಕ ಬೆಳವಣಿಗೆಯ ಹಿಂದಿರುವ ನಿರ್ಣಾಯಕವಾದ ವಸ್ತು ಸಿನಾಪ್ಸ್ ನ ಕುರಿತು ಹೆಚ್ಚಿನ ಜ್ಞಾನವನ್ನು ಸಂಪಾದಿಸಿ... ಅದಕ್ಕೆ ಪೂರಕವಾಗಿ ಮಕ್ಕಳನ್ನು ಬೆಳೆಸುವ ಎಂಬ ಆಶಯದೊಂದಿಗೆ.


-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top