ಮಾತೇ ರೇಡಿಯೋದ ಜೀವಾಳ: ಉಷಾಲತಾ ಸರಪಾಡಿ

Upayuktha
0

ವಿವಿ ಕಾಲೇಜಿನಲ್ಲಿ ರೇಡಿಯೋ ಪ್ರತಿ ಬರವಣಿಗೆ ಮತ್ತು ತಂತ್ರಗಳು ಕುರಿತ ಕಾರ್ಯಾಗಾರ



ಮಂಗಳೂರು: ಜನರ ಗಮನ ಸೆಳೆಯುವುದು ಮಾತ್ರವಲ್ಲದೇ ಶಾಶ್ವತವಾಗಿ ಹಿಡಿದಿಟ್ಟುಕೊಳ್ಳುವ ವಿಶೇಷ ತಂತ್ರಜ್ಞಾನ ಇರುವ ಮಾಧ್ಯಮ ಯುಗದಲ್ಲಿ ನಾವಿದ್ದೇವೆ. ರೇಡಿಯೋ ಕೂಡ ಒಂದು ಮಾಧ್ಯಮ ಆಗಿದ್ದು, ಧ್ವನಿಗೆ ಸಂಗೀತ ಸೇರಿಸುವ ಮೂಲಕ ರೇಡಿಯೋದಲ್ಲಿ ಸ್ವರ್ಗ ಸೃಷ್ಟಿಸಬಹುದು. ಆದ್ದರಿಂದ ಮಾತೇ ರೇಡಿಯೋದ ಜೀವಾಳ ಎಂದು ಮಂಗಳೂರು ಆಕಾಶವಾಣಿ ಕೇಂದ್ರದ ನಿವೃತ್ತ ಸಹಾಯಕ ನಿರ್ದೇಶಕಿ ಉಷಾಲತಾ ಸರಪಾಡಿ ಹೇಳಿದರು.



ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಮಾಧ್ಯಮ ವೇದಿಕೆ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶದ ವತಿಯಿಂದ ಹಮ್ಮಿಕೊಂಡಿದ್ದ ರೇಡಿಯೋ ಪ್ರತಿ ಬರವಣಿಗೆ ಮತ್ತು ತಂತ್ರಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. 



ರೇಡಿಯೋ ಬರವಣಿಗೆಯು ಎಂಬುದು ಶ್ರೋತೃಗಳಲ್ಲಿ ಸಂಪೂರ್ಣ ಚಿತ್ರಣ ಕಲ್ಪಿಸುವ ಚಾಕಚಕ್ಯತೆ ಹೊಂದಿರಬೇಕು. ಸರಳ ವಾಕ್ಯ, ಭಾವಭರಿತ ಉಚ್ಚಾರ, ವಿಚಾರ ಸ್ಪಷ್ಟವಾಗಿದ್ದರೆ ಪ್ರಸಾರವೂ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.



ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿಶೇಷ ವ್ಯಕ್ತಿತ್ವಗಳನ್ನು ಪರಿಚಯಿಸಿ, ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸುವಲ್ಲಿ ಪತ್ರಿಕೋದ್ಯಮ ವಿಭಾಗವು ಸದಾ ಕಾರ್ಯನಿರತವಾಗಿದೆ ಎಂದು ಪ್ರಾಂಶುಪಾಲೆ ಡಾ. ಅನಸೂಯ ರೈ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಪ್ರೊ. ಶಾನಿ ಕೆ. ಆರ್., ಉಪನ್ಯಾಸಕಿ ಡಾ. ಸೌಮ್ಯ ಕೆ.ಬಿ. ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top