ನ. 19ಕ್ಕೆ ಎಡ್ವಿನ್ ಡಿ’ಸೋಜಾ ನುಡಿನಮನ ಕಾರ್ಯಕ್ರಮ

Upayuktha
0



ಮಂಗಳೂರು: ಇತ್ತೀಚೆಗೆ ನಿಧನರಾದ, ತಮ್ಮ ’ಕಾಳೆಂ ಭಾಂಗಾರ್’ ಕಾದಂಬರಿಗೆ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದ, ಹಿರಿಯ ಕೊಂಕಣಿ ಸಾಹಿತಿ ಎಡ್ವಿನ್ ಜೆ. ಎಫ್. ಡಿ’ಸೋಜಾ  ಇವರಿಗೆ, ಸಂತ ಎಲೋಶಿಯಸ್ ಕಾಲೇಜು (ಸ್ವಾಯತ್ತ) ಕೊಂಕಣಿ ಸಂಸ್ಥೆಯ ನೇತೃತ್ವದಲ್ಲಿ, ಸಾಹಿತ್ಯ ಅಕಾಡೆಮಿ, ಹೊಸ ದೆಹಲಿ, ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರ, ಮೈಕಲ್ ಡಿಸೋಜಾ ವಿಶನ್ ಕೊಂಕಣಿ ಮತ್ತು ರಾಕ್ಣೊ ವಾರಪತ್ರಿಕೆ ಸಹಯೋಗದಲ್ಲಿ, ಕೊಂಕಣಿ ಸಂಘಟನೆಗಳ ವತಿಯಿಂದ ದಿನಾಂಕ 19, ಭಾನುವಾರ, ಬೆಳಗ್ಗೆ 10 ಕ್ಕೆ, ಸಂತ ಅಲೋಶಿಯಸ್ ಕಾಲೇಜಿನ ಸಾನಿಧ್ಯ ಸಭಾಂಗಣದಲ್ಲಿ ನುಡಿನಮನ ಸಲ್ಲಿಸಲಾಗುವುದು.



ಗೋವಾ ವಿಶ್ವವಿದ್ಯಾಲಯದ, ಕೊಂಕಣಿ ವಿಭಾಗ ವಿಶ್ರಾಂತ ಮುಖ್ಯಸ್ಥೆ ಡಾ| ಚಂದ್ರಲೇಖಾ ಡಿ’ಸೊಜಾ ಹಾಗೂ ಜ್ಞಾನಪೀಠ ಪುರಸ್ಕೃತ ಕೊಂಕಣಿ  ಸಾಹಿತಿ ದಾಮೋದರ್ ಮಾವ್ಜೋ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಕವಿ-ಕಥೆಗಾರ ಕಿಶೂ, ಬಾರ್ಕೂರು ಎಡ್ವಿನ್ ಡಿ'ಸೋಜಾ ಇವರಿಗೆ ನುಡಿನಮನ ಸಲ್ಲಿಸಲಿದ್ದಾರೆ. ಸಂತ ಅಲೋಶಿಯಸ್ ಕಾಲೇಜಿನ, ಕೊಂಕಣಿ ಸಂಸ್ಥೆಯ ಮುಖ್ಯಸ್ಥ ವಂ| ಡಾ| ಮೆಲ್ವಿನ್ ಪಿಂಟೊ, ನೀರುಡೆ ಗೌರವಾರ್ಪಣೆ ಮಾಡಲಿದ್ದಾರೆ.



ಕೊಂಕಣಿ ಸಾಹಿತ್ಯ ಸಂಘಟನೆಗಳು, ಕೊಂಕಣಿ ಸಾಹಿತ್ಯದ ವಿದ್ಯಾರ್ಥಿಗಳು ಮತ್ತು ಎಡ್ವಿನ್ ಜೆ. ಎಫ್. ಡಿ ಸೋಜಾ ಅವರ ಅಭಿಮಾನಿಗಳಿಗೆ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಷ್ಪನಮನ ಸಲ್ಲಿಸಲು ಅವಕಾಶವಿದೆ ಎಂದು ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಕೊಂಕಣಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top