ಚಿತ್ರಕಲೆಯಲ್ಲೊಂದು ಹೊಸ ಭರವಸೆ- ಗೌತಮಿ ಕಲ್ಚರ್

Upayuktha
0

ನ್ನ ಸಣ್ಣ ವಯಸ್ಸಿನಲ್ಲಿಯೇ ಕಲೆಯ ಮೇಲೆ ಆಸಕ್ತಿಯನ್ನು ಇಟ್ಟುಕೊಂಡು ಸಾಧನೆಯ ಎರೆಮರೆಯಲ್ಲಿ ಉಳಿದಿರುವ ಯುವ ಕಲಾವಿದೆ ಗೌತಮಿ ಕಲ್ಚರ್. ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ಕಲ್ಚರ್ ನವರು.


ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಪ್ರಾಥಮಿಕ ಶಾಲೆ ಪಂಬೆತ್ತಾಡಿ, ಪ್ರೌಢ ಶಿಕ್ಷಣವನ್ನು ಎಣ್ಮೂರು, ಪದವಿ ಪೂರ್ವ ಶಿಕ್ಷಣ ಪಂಜ ದಲ್ಲಿ ಪೂರೈಸಿ ಈಗ ಪದವಿ ಶಿಕ್ಷಣವನ್ನು ಮಂಗಳೂರು ಮಹಾಲಸಾ ಕಾಲೇಜ್ ಆಫ್ ಆರ್ಟ್ಸ್‌ನಲ್ಲಿ ಪಡೆಯುತ್ತಿದ್ದಾರೆ. ಇವರ ಚಿತ್ರಕಲಾ ಆಸಕ್ತಿಯನ್ನು ಗುರುತಿಸಿದ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ಮೋಹನ್ ಗೌಡ ಇವರ ಹೆಚ್ಚಿನ ಪ್ರೋತ್ಸಾಹ ನೀಡಿ ಕಲೆಯೇ ಜೀವನ ಎಂದು ತಿಳಿಸಿದ್ದರು.


ಮೋಹನ್ ಸರ್ ಮತ್ತು ಮನೆಯವರ ಪ್ರೋತ್ಸಾಹದ ಮೇರೆಗೆ ಮಹಾಲಸಾ ಕಾಲೇಜಿನಲ್ಲಿ ದಾಖಲಾತಿ ಪಡೆದುಕೊಂಡರು.

8ನೇ ತರಗತಿಯಿಂದ 10ನೇ ತರಗತಿ ವರೆಗೂ ನನ್ನ ಚಿತ್ರ ಕಲೆ ಸ್ಪರ್ಧೆಗೆ ಏನೆಲ್ಲಾ ತಯಾರಿ ಬೇಕೋ ಅದನ್ನೆಲ್ಲಾ ಹೇಳಿಕೊಟ್ಟು ಸ್ಪರ್ಧೆಗೆ ಕರೆದುಕೊಂಡು ಹೋಗಿ, ಸ್ಪರ್ಧೆ ಮುಗಿಯುವರೆಗೆ ಜೊತೆಗೆ ಇದ್ದು ಮರಳಿ ಕರೆದುಕೊಂಡು ಬರುತ್ತಿದ್ದರು. ಅವರು ಯಾವುದೇ ಸ್ಪರ್ಧೆಗೆ ತೆರಳುವಾಗ ಹೇಳುತ್ತಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ ಬಹುಮಾನ ಸಿಗುವುದು ಬಿಡುವುದು ನಂತರದ ವಿಷಯ ಎಂದು. ಸರ್ ಪ್ರೋತ್ಸಾಹಿಸುತ್ತಿದ್ದರು ಎಂದು ಗೌತಮಿಯವರು ಹೇಳುತ್ತಾರೆ.


Traditional art exibition ನಲ್ಲಿ ಜ್ಞಾನ ದೀಪ ಎಲಿಮಲೆ ಸನ್ಮಾನಿಸಿದರು. Live speed painting ನಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಸನ್ಮಾನಿಸಿದರು. ಹೀಗೆ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಮತ್ತು ಇವರ ಸಾಧನೆಯನ್ನು ಅನೇಕ ಸಂಘ ಸಂಸ್ಥೆಗಳು ಗುರುತಿಸಿ, ಸನ್ಮಾನಗಳನ್ನು ಮುಡಿಗೇರಿಸಿಕೊಂಡಿರುತ್ತಾರೆ. ಹಲವು ನಾನಾ ರೀತಿಯ ಅದ್ಭುತ ಚಿತ್ರಕಲೆಗಳನ್ನು ಬಿಡಿಸಿ ಅವುಗಳಿಗೆ ಬಣ್ಣ ಬಳಿದು ಜೀವ ತುಂಬಿಸುತ್ತಿರುವವರು.


ಪ್ರಾಥಮಿಕ ಶಾಲೆ ಎಣ್ಣೆಮಜಲು ಬಳ್ಪ, ಪ್ರಾಥಮಿಕ ಶಾಲೆ ಕಲ್ಮಡ್ಕ ಹೀಗೆ ಕೆಲವು ಸರಕಾರಿ ಶಾಲೆಗಳ ಗೋಡೆಗಳಲ್ಲಿ ತಮ್ಮ ಕೈ ಚಳಕವನ್ನು ತೋರಿಸಿದ್ದಾರೆ. ಯಕ್ಷಗಾನ ಕಲಾವಿದೆಯಾಗಿ ರಾರಾಜಿಸಬೇಕೆಂದು ಕನಸು ಕಾಣುತ್ತಿದ್ದಾರೆ ಬ್ರಹ್ಮ, ಬಲರಾಮ ಹೀಗೆ ನಾನಾ ತರದ ಬಣ್ಣಗಳಲ್ಲಿ ರಾರಾಜಿಸಿದ್ದಾರೆ. ಇವರು ನಾರಾಯಣ ಗೌಡ ಹಾಗೂ ಹೇಮಲತಾ ದಂಪತಿಗಳ ಪುತ್ರಿ.

 


- ಜಯಶ್ರೀ ಸಂಪ 

ತೃತೀಯ ಬಿ.ಎ ಪತ್ರಿಕೋದ್ಯಮ ವಿಭಾಗ

ಅಂಬಿಕಾ ಮಹಾವಿದ್ಯಾಲಯ ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top