ಸುರತ್ಕಲ್‍ ಆಶ್ರಯದಲ್ಲಿ ಉದಯರಾಗ–46 ಶಾಸ್ತ್ರೀಯ ಸಂಗೀತ ಸರಣಿ ಕಾರ್ಯಕ್ರಮ

Upayuktha
0



ಸುರತ್ಕಲ್‍:  ಯುವ ಜನತೆ ಶಾಸ್ತ್ರೀಯ ಸಂಗೀತ ಕಲೆಗಳತ್ತ ಆಕರ್ಷಿತರಾಗಬೇಕಾದ ಅವಶ್ಯಕತೆಯಿದೆ. ಉದಯರಾಗದಂತಹ ಶಾಸ್ತ್ರೀಯ ಸಂಗೀತ ಕಛೇರಿಗಳಿಂದ ಯುವಕಲಾವಿದರಿಗೆ ಪ್ರೋತ್ಸಾಹ ದೊರೆಯುತ್ತದೆ ಎಂದು ಕಲಾವಿದೆ ಗೀತಾ ಸುರತ್ಕಲ್ ನುಡಿದರು.


ಅವರು ಮಣಿಕೃಷ್ಣ ಸ್ವಾಮಿ ಅಕಾಡೆಮಿ(ರಿ) ಮತ್ತು ನಾಗರಿಕ ಸಲಹಾ ಸಮಿತಿ(ರಿ) ಸುರತ್ಕಲ್‍ ಆಶ್ರಯದಲ್ಲಿ ಅನುಪಲ್ಲವಿಯಲ್ಲಿ ನಡೆದ ಉದಯರಾಗ–46 ಶಾಸ್ತ್ರೀಯ ಸಂಗೀತ ಸರಣಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಮಣಿಕೃಷ್ಣ ಸ್ವಾಮಿ ಅಕಾಡೆಮಿ(ರಿ) ಅಧ್ಯಕ್ಷ ಕ್ಯಾ.ಗಣೇಶ್‍ ಕಾರ್ಣಿಕ್ ಮಾತನಾಡಿ ಆಂತರಾಂಗಿಕ ಜ್ಞಾನದ ಬೆಳಕನ್ನು ಹೊರಹೊಮ್ಮಿಸುವ ಶಾಸ್ತ್ರೀಯ ಸಂಗೀತಾಸ್ವದನೆ ವಿಶಿಷ್ಟ ಅನುಭವ ಎಂದರು.


ಗಾರ್ಗಿ ಶಬರಾಯ ಅವರಿಂದ ಹಾಡುಗಾರಿಕೆ ನಡೆಯಿತು. ವಯಲಿನ್‍ನಲ್ಲಿ ಧನ್ಯಶ್ರೀ ಶಬರಾಯ ಹಾಗೂ ಮೃದಂಗದಲ್ಲಿ ಸುಮುಖ ಕಾರಂತ್ ಸುರತ್ಕಲ್‍ ಸಹಕರಿಸಿದರು.

ಮಣಿ ಕೃಷ್ಣ ಸ್ವಾಮಿ ಅಕಾಡೆಮಿಯ(ರಿ) ಕಾರ್ಯದರ್ಶಿ ಪಿ.ನಿತ್ಯಾನಂದರಾವ್‍ ಕಾರ್ಯಕ್ರಮ ನಿರೂಪಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top