ಯೋಗೀಶ್ ಹೊಸೋಳಿಕೆ ಸಂಪಾದನೆಯ “ಎಲಾಡಿಕೆ” ಕೃತಿ ಬಿಡುಗಡೆ

Upayuktha
0

ಸುಳ್ಯ: ಮದುವೆ ಕುರಿತ ಮೊಟ್ಟಮೊದಲ ಅರೆಭಾಷೆ ಕೃತಿ ನ.14 ರಂದು ಹೊಸೋಳಿಕೆ ಕಟ್ಟೆಮನೆ ದೈವಸ್ಥಾನದಲ್ಲಿ ದೀಪಾವಳಿ ಆಚರಣೆಯೊಂದಿಗೆ ಕುಟುಂಬಸ್ಥರು ಹಾಗೂ ಬಂಧು-ಮಿತ್ರರ ಸಮ್ಮುಖದಲ್ಲಿ ಬಿಡುಗಡೆಗೊಂಡಿತು.


ಯೋಗೀಶ್ ಹೊಸೋಳಿಕೆ ಹಾಗೂ ಶ್ರೀಮತಿ ಜಯಶ್ರೀ ಹೊಸೋಳಿಕೆಯವರ ಮದುವೆ ಕವಿಗೋಷ್ಠಿ, ಅರೆಭಾಷೆ ಪುಣ್ಯಕೋಟಿ ಪುಸ್ತಕ ಬಿಡುಗಡೆ, ಅರೆಭಾಷೆ ಮದುವೆ ಕಾಗದ, ಸಂಪ್ರದಾಯಬದ್ಧ ಮದುವೆ 1100 ಕ್ಕಿಂತಲೂ ಹೆಚ್ಚಿನ ಪುಸ್ತಕ ಒಂದೇ ದಿನ ವಿತರಣೆ ಹೀಗೆ ಹಲವು ದಾಖಲೆಗಳನ್ನು ಬರೆದು ಆಪಾರ ಜನಮೆಚ್ಚುಗೆ ಗಳಿಸಿತ್ತು. ಈ ಎಲ್ಲಾ ದಾಖಲೆಗಳನ್ನು ಸಾಹಿತಿ ಯೋಗೀಶ್ ಹೊಸೋಳಿಕೆಯವರು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. 



ಕಿರಣ ರಂಗ ಅಧ್ಯಯನ ಸಂಸ್ಥೆ ಗುತ್ತಿಗಾರು ಈ ಪುಸ್ತಕ ಪ್ರಕಟಿಸಿದ್ದು, ಕುಟುಂಬದ ಹಿರಿಯರಾದ ವಿಶ್ವನಾಥ್ ಹೊಸೋಳಿಕೆ ಪುಸ್ತಕ ಬಿಡುಗಡೆಗೊಳಿಸಿದರು. ಕುಟುಂಬದ ಅಧ್ಯಕ್ಷರಾದ ಎಚ್.ಬಿ ಕೇಶವ ಹೊಸೋಳಿಕೆ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.


ಕಿರಣ ರಂಗ ಸಂಸ್ಥೆಯ ಅಧ್ಯಕ್ಷ ಪುಸ್ತಕ ಸಂಪಾದಕ ಯೋಗೀಶ್ ಹೊಸೋಳಿಕೆ, ಶ್ರೀಮತಿ ಜಯಶ್ರೀ ಯೋಗೀಶ್ ಹೊಸೋಳಿಕೆ, ವಿದ್ವತ್ ವೈ ಹೊಸೋಳಿಕೆ, ಕುಟುಂಬದ ಮುಖ್ಯಸ್ಥರಾದ ಎಚ್.ಬಿ ತೀರ್ಥರಾಮ ಹೊಸೋಳಿಕೆ, ರಾಧಾಕೃಷ್ಣ ಹೊಸೋಳಿಕೆ, ಕುಟುಂಬದ ಮುಖ್ಯಸ್ಥರಾದ ಕಿರಣ ಸಂಸ್ಥೆಯ ಹಿತೈಷಿಗಳಾದ ಎಚ್.ಬಿ ಚಂದ್ರಶೇಖರ ಹೊಸೋಳಿಕೆ, ರವೀಂದ್ರ ಹೊಸೋಳಿಕೆ ಸೇರಿದಂತೆ ಕುಟುಂಬಸ್ಥರು, ಬಂಧು-ಮಿತ್ರರು ಉಪಸ್ಥಿತರಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
To Top