ಸುಕ್ಷೇತ್ರ ಚಿತ್ತರಗಿ: ಶರಣ ಸಂಸ್ಕೃತಿ ಮಹೋತ್ಸವಕ್ಕೆ ನ.27ರಂದು ತೆರೆ

Upayuktha
0

 



ತಿಮ್ಮಾಪೂರ: ಹುನಗುಂದ ತಾಲೂಕಿನ ಸುಕ್ಷೇತ್ರ ಚಿತ್ತರಗಿಯ ಶ್ರೀ ವಿಜಯ ಮಹಾಂತೇಶ್ವರ ಮೂಲಮಠದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಶರಣ ಸಂಸ್ಕೃತಿ ಮಹೋತ್ಸವ ನ.27 ರಂದು ಸೋಮವಾರ ಮುಕ್ತಾಯಗೊಳ್ಳಲಿದೆ.


ಉತ್ಸವದ ಭಾಗವಾಗಿ ನ.24ರಂದು ಶುಕ್ರವಾರ ಅನುಭವ ಗೋಷ್ಠಿ ದಿ.25ರಂದು ಶನಿವಾರ ಮಹಿಳಾ ಗೋಷ್ಠಿಗಳು ನಡೆದವು.


ದಿ.26ರಂದು ಕೃಷಿಗೋಷ್ಠಿ ದಿ.27ರಂದು ಅಡ್ಡಪಲ್ಲಕ್ಕಿ ಉತ್ಸವ ಹಾಗೇ ರಥೋತ್ಸವ ಜರುಗಲಿದೆ ಎಂದು ಯಾತ್ರಾ ಸಮಿತಿ ಅಧ್ಯಕ್ಷರಾದ ಶಿವಕುಮಾರ ಗಂಗಾಧರ ಶಾಸ್ತ್ರಿಗಳು, ಹಿರೇಮಠ, ಕಾರ್ಯಧ್ಯಕ್ಷರಾದ ಕುಮಾರಸ್ವಾಮಿ ಮಲ್ಲಪ್ಪಯ್ಯ ಹಿರೇಮಠ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



ದಿ.24\11\2023 ರಂದು ಸಂಜೆ ನಡೆದ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಚಿತ್ತರಗಿ ಸಂಸ್ಥಾನಮಠದ ಮ.ನಿ.ಪ್ರ ಗುರುಮಹಾಂತ ಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಹುನಗುಂದ ಶಾಸಕರಾದ ವಿಜಯಾನಂದ ಎಸ್.ಕಾಶಪ್ಪನವರ ವಹಿಸಿದ್ದರು. ಯಾತ್ರಾ ಸಮಿತಿ ಅಧ್ಯಕ್ಷರಾದ ಶಿವಕುಮಾರ ಗಂಗಾಧರ ಶಾಸ್ತ್ರಿಗಳು ಹಿರೇಮಠ, ಕಾರ್ಯಾಧ್ಯಕ್ಷ ಕುಮಾರ ಸ್ವಾಮಿ ಮುಪ್ಪಯ್ಯ ಹಿರೇಮಠ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿಜಯಪುರ- ಬಾಗಲಕೋಟೆಯ ಜಿಲ್ಲಾ ಹಾಲು ಬಕ್ಕೊಟದ ಉಪ ವ್ಯವಸ್ಥಾಪಕರಾದ ಡಾ|| ಯಂಕಣ್ಣ ಆರ್.ಯಡಹಳ್ಳಿ ಗೌರವ ಸತ್ಕಾರ ಜರುಗಿತು.


ದಿ.26\11\2023 ರಂದು ರವಿವಾರ ಸಂಜೆ 7:30ಕ್ಕೆ ಕೃಷಿಗೋಷ್ಠಿ ಜರುಗಲಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹಾಲಕೆರೆ ಅನ್ನದಾನೇಶ್ವರ  ಮಠದ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು, ಸಂತೆಕಲೂರನ ಘನ ಮಠೇಶ್ವರ ಮಠದ ಮ.ನಿ.ಪ್ರ ಗುರುಬಸವ ಮಹಾಸ್ವಾಮಿಗಳು ವಹಿಸಲಿದ್ದಾರೆ. ನೇತೃತ್ವನ್ನು ಚಿತ್ತರಗಿ ಸಂಸ್ಥಾನಮಠದ ಮ.ನಿ.ಪ್ರ ಗುರುಮಹಾಂತ ಮಹಾಸ್ವಾಮಿಗಳು, ಕಮತಗಿ ಕೋಟೆಕಲ್ಲದ ಹೂಳೆ ಹುಚ್ಚೇಶ್ವರ ಶ್ರೀಗಳು, ಅಮೀನಗಡ ಶಂಕರ ರಾಜೇಂದ್ರ ಶ್ರೀಗಳು, ಕೆಲೂರ ಡಾ||ಮಲಯ ಶಾಂತಮುನಿ ದೇಶಿಕೇಂದ್ರ ಶ್ರೀಗಳು, ಮೊಳಕಾಲ್ಮೂರು ಬಸವಲಿಂಗ ಶ್ರೀಗಳು ವಹಿಸಲಿದ್ದಾರೆ.


ಕಾರ್ಯಕ್ರಮ ಅಧ್ಯಕ್ಷತೆಯನ್ನ ಹುನಗುಂದದ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರಾದ ಡಾ|| ಮಲ್ಲಣ್ಣ ನಾಗರಾಳ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನರಗುಂದ ತಾಲೂಕಿನ ವಾಸನ ಗ್ರಾಮದ ಪಾರಂಪರಿಕ ವೈದ್ಯರಾದ ನಿಸರ್ಗ ಚಿಕಿತ್ಸೆಕ ಹನುಮಂತ ಮಳಲಿ ಹಾಗೂ ಹುನಗುಂದದ ಸಾಹಿತಿ ಡಾ||ನಾಗರಾಜ ನಾಡಗೌಡ ಆಗಮಿಸಲಿದ್ದಾರೆ.


ಗ್ರಂಥ ಬಿಡುಗಡೆ: ಚಿತ್ತರಗಿ ಗ್ರಾಮದ ಲೇಖಕರಾದ ಶೇಖರಗೌಡ ಎಸ್. ಗೌಡರವರು ಬರೆದಿರುವ “ಸ್ವಯಂಕೃತ ಪ್ರವರಗಳಿಂದ” ಎಂಬ ಪುಸ್ತಕವನ್ನು ಬಿಡುಗಡೆಗೊಳ್ಳಲಿದೆ. ಈ ಕೃತಿಯು ಶ್ರೀ ರಾಚಪ್ಪ ಸಂಗಪ್ಪ ಮಿಟ್ಟಲಕೋಡ ಇವರ ಸಂಸ್ಮರಣೆಯಲ್ಲಿ ಜರುಗಲಿದೆ.


ದಿ. 27\11\2023 ರಂದು ಸೋಮವಾರ ಮುಂಜಾನೆ 11:00 ಗಂಟೆಗೆ ಅಡ್ಡಪಲ್ಲಕ್ಕಿ ಉತ್ಸವ ಜರುಗಲಿದ್ದು ಕಾರ್ಯಕ್ರಮದ ದಿವ್ಯ ಸಾನಿರ್ಧಯವನ್ನು ಚಿತ್ತರಗಿ ಸಂಸ್ಥಾನಮಠದ ಮ.ನಿ.ಪ್ರ ಗುರು ಮಹಾಂತ ಶ್ರೀಗಳು ವಹಿಸಲಿದ್ದಾರೆ.


ಮ.ನಿ.ಪ್ರ ಕಾರ್ಯಕ್ರಮದ ನೇತೃತ್ವವನ್ನು ಹಡಗಲಿ ನಿಡಗುಂದಿಯ ರುದ್ರಮುನಿ ಶ್ರೀಗಳು ಹರನಾಳ ಮ.ನಿ.ಪ್ರ ಸಂಗನಬಸವ ಶ್ರೀಗಳು ಲಿಂಗಸೂರನ ಮ.ನಿ.ಪ್ರ ಸಿದ್ದಲಿಂಗ ಶ್ರೀಗಳು, ಪಾಂಡೇ ಮಟ್ಟ ಗುರುಬಸವ ಶ್ರೀಗಳು ರಾಣೆ ಬೆನ್ನೂರ ಗುರುಬಸವ ಶ್ರೀಗಳು, ಶರಸಂಗಿ ಮಹಾಂತ ಸ್ವಾಮಿಗಳು ತಿಕೋಟಾದ ಚನ್ನ ಮಲ್ಲಿಕಾರ್ಜುನ ಶ್ರೀಗಳು ಶಿರೂರ ಬಸವಲಿಂಗ ಶ್ರೀಗಳು ಶಶಿನಾಳ ಗ್ರಾಮ ಕೇಳಗಲ್ಲ ಹಿರೇಮಠದ ಶಿವಲಿಂಗ ಸ್ವಾಮಿಗಳು ವಹಿಸಲಿದ್ದಾರೆ. ಅಂದು 6:00 ಗಂಟೆಗೆ ರಥೋತ್ಸವ ಜರುಗಲಿದೆ. ನಂತರ ಕಾರ್ಯಕ್ರಮ ಜರುಗಲಿದೆ. ಮುಖ್ಯ ಅತಿಥಿಗಳಾಗಿ ಹುನಗುಂದ ಮಾಜಿ ಸಚಿವ ಶಾಸಕರಾದ ಇಲಕಲ್ಲಿನ ದೊಡ್ಡ ಬಸವನಗೌಡ ಜಿ.ಪಾಟೀಲ ಮಾಜಿ ಸಚಿವರಾದ ಬಾಗಲಕೋಟೆಯ ಎಸ್.ಆರ್. ಪಾಟೀಲ್ (ಬಾಡಗಂಡಿ), ಬಾಗಲಕೋಟೆಯ ಮಾಜಿ ಶಾಸಕರಾದ ಡಾ|| ವೀರಣ್ಣ ಚರಂತಿಮಠ, ಬಾಗಲಕೋಟ ಸಂಸದ ಪಿ.ಸಿ.ಗದ್ದಿಗೌಡರ, ನಾಂತವಾಡದ ಪ್ರಥಮ ದರ್ಜೆ ಗುತ್ತಿಗದಾರರಾದ ರಾಯನಗೌಡ ಮಲ್ಲನಗೌಡ ತಾತರಡ್ಡಿ ಹಾಗೂ ಬೆಂಗಳೂರ ಜಿ.ಕೆ ಗ್ರೂಪ್ ಆಫ್ ಸಕ್ಸಸ್ ಕಂಪನಿಯ ವ್ಯವಸ್ಥಾಪಕರು ಆಗಮಿಸಲಿದ್ದಾರೆ.


ಸಂಗೀತ ಸಂಜೆ: ಇಲಕಲ್ಲಿನ ನಾಗರಾಜ ವಣೇಕರರವರಿಂದ ವಚನ ಸಂಗೀತ ಗಾಯನ ಜರುಗಲಿದೆ ಹಾಗೂ ಗುರುಮಹಾಂತ ಮೇಲೋಡಿಸ್ ಇದರಿಂದ ಕರ್ನಾಟಕ ಸುವರ್ಣನ ಗಾಯನ ಸಂಭ್ರಮ ಜರುಗಲಿದೆ.


ಈ ಎಲ್ಲಾ ಧಾರ್ಮಿಕ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುತ್ತಮುತ್ತಲಿನ ಸಧ್ಭಕ್ತರು ಪಾಲ್ಗೊಂಡು ಶ್ರೀ ವಿಜಯ ಮಹಾಂತೇಶ್ವರ ಶ್ರೀಗಳವರ ಕೃಪಗೆ ಪಾತ್ರರಾಗಬೇಕೆಂದು ಯಾತ್ರಾ ಮಹೋತ್ಸವದ ಸಮಿತಿಯ ಅಧ್ಯಕ್ಷರಾದ ಶಿವಕುಮಾರ ಗಂಗಾಧರ ಶಾಸ್ತ್ರಿಗಳು ಹಿರೇಮಠ ಕಾರ್ಯಾಧ್ಯಕ್ಷರಾದ ಕುಮಾರ ಸ್ವಾಮಿ ಮಲ್ಲಪ್ಪಯ್ಯ ಹಿರೇಮಠರವರು ಪ್ರಕಟನೆಯಲ್ಲಿ ಕೋರಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top