ಪುತ್ತೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಕೊಡಿಯಾಲ್‍ಬೈಲು, ಮಂಗಳೂರು ದ.ಕ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇವರ ಸಹಯೋಗದಲ್ಲಿ ಪ್ರೌಡಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ವಿಜ್ಞಾನ ವಸ್ತುಪ್ರದರ್ಶನವನ್ನು ದಿನಾಂಕ 10.11.2023ರಂದು ಆಯೋಜಿಸಿತ್ತು.
ಗುಂಪು ವಿಭಾಗದಲ್ಲಿ ಅವನಿ ರೈ (9ನೇ) [ರೋಹಿತಾಕ್ಷ. ಕೆ ಮತ್ತು ಆರತಿ ಅವರ ಪುತ್ರಿ] ಮತ್ತು ಅನಿಶಾ ಜಿ.ಎ (9ನೇ) [ಗಂಗಾಧರ ಎ ಮತ್ತು ರಂಜಿತಾ ಅವರ ಪುತ್ರಿ]. ‘ಲಿಕ್ವಿಡ್ ಟ್ರೀ’ ಎಂಬ ಮಾದರಿಯನ್ನು ಪ್ರದರ್ಶಿಸಿದರು ಈ ಮಾದರಿಯು ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿರುತ್ತದೆ.
ಈ ಮಾದರಿಗೆ ವಿಜ್ಞಾನ ಶಿಕ್ಷಕಿಯರಾದ ರೇಖಾಮಣಿ ಮತ್ತು ಶಾರದಾ. ಪಿ ರವರು ಮಾರ್ಗದರ್ಶನ ನೀಡಿರುತ್ತಾರೆ. ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ವಿದ್ಯಾರ್ಥಿಗಳಿಗೆ ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್ ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ಶೋಭಾ ನಾಗರಾಜ್ ರವರು ಅಭಿನಂದನೆಗಳೊಂದಿಗೆ ಶುಭಹಾರೈಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ