ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಮುಕ್ಕ ಅಕ್ಟೋಬರ್ 29-30 ರಂದು ಶ್ರೀನಿವಾಸ ವಿಶ್ವವಿದ್ಯಾಲಯದ ಮುಕ್ಕ ಕ್ಯಾಂಪಸ್‌ನಲ್ಲಿ “24 ಗಂಟೆಗಳ ಹ್ಯಾಕಥಾನ್ 2023” ಅನ್ನು ಆಯೋಜಿಸಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀನಿವಾಸ ವಿಶ್ವವಿದ್ಯಾಲಯದ ರಿಜಿಸ್ಟರ್ ಡಾ. ಅನಿಲ್ ಕುಮಾರ್ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಈ ಹ್ಯಾಕಥಾನ್ ಕಲಿಕೆಯ ಅನುಭವವಾಗಿದ್ದು, ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬಹುದು ಮತ್ತು ಪರಿಹಾರವನ್ನು ಅಭಿವೃದ್ಧಿಪಡಿಸಬಹುದು. ತಪ್ಪುಗಳನ್ನು ಮಾಡಿ ಅದರಿಂದ ಪಾಠ ಕಲಿಯುವ ಆತ್ಮವಿಶ್ವಾಸವನ್ನು ವಿದ್ಯಾರ್ಥಿಗಳು ಹೊಂದಬೇಕು ಎಂದು ಸಲಹೆ ನೀಡಿದರು.
ಎಸ್ ಯುಐಇ ಟಿ ಡೀನ್ ಡಾ. ಥಾಮಸ್ ಪಿಂಟೋ, ಶ್ರೀನಿವಾಸ ವಿಶ್ವವಿದ್ಯಾಲಯದ ವೆಬ್‌ಫ್ಲೋ ಕಮ್ಯೂನಿಟಿ ಮಾರ್ಗದರ್ಶಕಿ ಡಾ. ಸುಷ್ಮಾ ಅಕ್ಕರಾಜು, ಕಾರ್ಯಕ್ರಮದ ಸಂಚಾಲಕ ಶ್ರೀ ರಂಜಿತ್ ಕೋಲ್ಕಾರ್ ಉಪಸ್ಥಿತರಿದ್ದರು.
ಮೊದಲ ಬಹುಮಾನವನ್ನು ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು, ದ್ವಿತೀಯ ಶ್ರೀ ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ ಹಾಗೂ ತೃತೀಯ ಬಹುಮಾನವನ್ನು ಶ್ರೀನಿವಾಸ ಯೂನಿವರ್ಸಿಟಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯು ತಮ್ಮದಾಗಿಸಿಕೊಂಡಿತು.
ಉದ್ಯೋಗಗಳ ಪಟ್ಟಿ ಮತ್ತು ನಿಧಿ ಸಂಗ್ರಹವನ್ನು ಒಳಗೊಂಡಿರುವ ಕಾಲೇಜು ವೆಬ್‌ಸೈಟ್ ರಚಿಸಿ SUIET ಕಾಲೇಜಿನ ಟೀಮ್ ಡೆವಲಪರ್‌ಗಳು ಪೊಟೇನ್ಶಿಯಲ್ ಪ್ರಾಡಕ್ಟ್ ಬಹುಮಾನವನ್ನು ಪಡೆದುಕೊಂಡರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


