ಬಂಟ್ವಾಳ: ಭಾರತದ ಚಂದ್ರಯಾನ-3 ಯಶಸ್ಸಿನ ನಂತರ ಬಾಹ್ಯಾಕಾಶ ಸಂಶೋಧನೆಯ ಸ್ಪರ್ಧೆ ವಿಶ್ವಮಟ್ಟದಲ್ಲಿ ಹೆಚ್ಚಾಗುತ್ತಿದೆ. ಭಾರತದಲ್ಲಿ ಬಾಹ್ಯಾಕಾಶದ ಸಂಶೋಧನೆಯು ಹಿಂದೆಂದಿಗಿಂತಲೂ ಅಭಿವೃದ್ಧಿಗೊಂಡಿದ್ದು, ಖ್ಯಾತ ವಿಜ್ಞಾನಿ ವಿಕ್ರಮ್ ಸಾರಾಭಾಯಿಯವರ ಪರಿಶ್ರಮದ ಫಲವಾಗಿ ಭಾರತದಲ್ಲಿ ಬಾಹ್ಯಾಕಾಶ ಸಂಶೋಧನೆಗಳು ಆರಂಭವಾದವು. ಇದರ ಫಲವಾಗಿ ಇಸ್ರೋ ಸಂಸ್ಥೆಯ ಸಾಧನೆಗಳು ಜಗತ್ತಿನ ಗಮನ ಸೆಳೆಯುತ್ತಿರುವುದನ್ನು ಕಾಣಬಹುದಾಗಿದೆ ಎಂದು ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅತುಲ್ ಭಟ್ ವಿವರಿಸಿದರು.
ಇವರು ಶ್ರೀ ವೆಂಕಟರಮಣ ಸ್ವಾಮಿ (ಎಸ್.ವಿ.ಎಸ್.) ಕಾಲೇಜಿನ ವಿಜ್ಞಾನ ವೇದಿಕೆ ಹಾಗೂ ಐ.ಕ್ಯೂ.ಎ.ಸಿ. ಯ ಸಂಯುಕ್ತಾಶ್ರಯದಲ್ಲಿ ಸರ್ ಸಿ.ವಿ. ರಾಮನ್‌ರವರ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ 'ಪ್ರಸ್ತುತ ಹಾಗೂ ಭವಿಷ್ಯದಲ್ಲಿ ಬಾಹ್ಯಾಕಾಶ ಸಂಶೋಧನೆಯ ಹೊಸ ಆಯಾಮಗಳು' ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಡಾ. ಸುಯೋಗ ವರ್ಧನ್ ಡಿ.ಎಂ. ರವರು ಪ್ರಸ್ತುತ ಕಾಲಘಟ್ಟದಲ್ಲಿ ಬಾಹ್ಯಾಕಾಶ ಸಂಶೋಧನೆಗಳ ಅಗತ್ಯತೆ ಮತ್ತು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ಪ್ರಾಮುಖ್ಯತೆಯನ್ನು ತಿಳಿಸಿದರು.
ಎಸ್.ವಿ.ಎಸ್. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುದರ್ಶನ್ ಬಿ ಹಾಗೂ ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ. ಟಿ.ಕೆ. ರವೀಂದ್ರನ್ ಉಪಸ್ಥಿತರಿದ್ದರು.
ವಿಜ್ಞಾನವೇದಿಕೆಯ ಅಧ್ಯಕ್ಷರಾದ ಡಾ.ವಿನಾಯಕ ಕೆ.ಎಸ್. ಸ್ವಾಗತಿಸಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಶಶಿಕಲಾ ಎಂ.ಪಿ. ವಂದಿಸಿದರು. ವಿದ್ಯಾರ್ಥಿಗಳಾದ ಹೇಮಲತಾ ಮತ್ತು ಅನುಷಾ ಪ್ರಾರ್ಥಿಸಿ, ಯಶ್ವಿತಾ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ