ರಾಯಚೂರು: ಜವಳಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಪಂ ಸಿಇಓ ದಿಢೀರ್ ಭೇಟಿ, ಪರಿಶೀಲನೆ

Upayuktha
0


ಸಿಂಧನೂರು: ಸಿಂಧನೂರು ತಾಲ್ಲೂಕಿನ ಜವಳಗೇರಾ ಹಾಗೂ ಆರ್.ಎಚ್ ಕ್ಯಾಂಪ್ ನಂ2 ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾಯಚೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಇವರು ದಿಢೀರ್ ಆಗಿ ಭೇಟಿ ನೀಡಿ ಆರೋಗ್ಯ ಕೇಂದ್ರದಲ್ಲಿ ಇರುವ ಸೌಲಭ್ಯಗಳು, ಸಿಬ್ಬಂದಿ ವರ್ಗ ಮತ್ತು ಹೆರಿಗೆ ವಾರ್ಡ್‌ಗೆ ತೆರಳಿ ತಾಯಿ ಮಗುವಿನ ಆರೋಗ್ಯವನ್ನು ವಿಚಾರಿಸಿದರು. ಇದೇ ಗ್ರಾಮದಲ್ಲಿ ನಡೆಯುತ್ತಿದ್ದ ಜೆಜೆಎಂ ಕಾಮಗಾರಿಯನ್ನು ಸಹ ಸ್ವತಃ ವೀಕ್ಷಿಸಿ ಕಾಮಗಾರಿಯನ್ನು ಕಾಮಗಾರಿಯನ್ನು ಗುಣಮಟ್ಟದಿಂದ ಕೂಡಿರುವಂತೆ ಮತ್ತು ಗುಣಮಟ್ಟದಿಂದ ಕೂಡಿರುವಂತೆ ಕಾಮಗಾರಿ ಕೈಗೊಳ್ಳುವಂತೆ ಜೆ.ಇ ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.


ಇದೇ ಸಮಯದಲ್ಲಿ ಸಿ.ಇ.ಒ ರವರು ಪತ್ರಕರ್ತರ ಜೊತೆಗೆ ಮಾತನಾಡಿ, ಬೇರೆ ತಾಲ್ಲೂಕಿನ ಕಾಮಗಾರಿ ಹಾಗೂ ಅಭಿವೃದ್ಧಿಯನ್ನು ನೋಡಿದಾಗ ಸಿಂಧನೂರು ತಾಲ್ಲೂಕಿನಲ್ಲಿ ನಡೆದಿರುವ ಕಾಮಗಾರಿಗಳು, ಅಭಿವೃದ್ಧಿ ಕಾರ್ಯ ಗಳು ತೃಪ್ತಿಕರವಾಗಿ ಎಂದು ಹೇಳಿದರು. ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿಗಳಾದ ಶಶಿಧರ್ ಕುರೇರ ತಾಲೂಕ ಪಂಚಾಯತ ಇ.ಒ ಚಂದ್ರಶೇಖರ್, ಸಿ.ಡಿ.ಪಿ.ಓ ಲಿಂಗನಗೌಡ ಆರ್.ಎಚ್. ಕ್ಯಾಂಪ್ ನಂ.02 ಪಿಡಿಒ ಶ್ರೀಮತಿ ಪೂರ್ಣಿಮಾ ಗ್ರಾ.ಪಂ ಅಧ್ಯಕ್ಷರಾದ ರಹಮದತ್ ಪಾಷಾ ಸೇರಿದಂತೆ ಜಿಲ್ಲಾ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಹಾಜರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top