ಶ್ರೀಕೃಷ್ಣ ಯುವಕ ಮಂಡಲ ಸಂಭ್ರಮ: ಶಿಕ್ಷಕಿ ಶಾಂತಾ ಪುತ್ತೂರು ಅವರಿಗೆ ಗೌರವ ಸಮ್ಮಾನ

Upayuktha
0


ಪುತ್ತೂರು: ಶ್ರೀ ಕೃಷ್ಣ ಯುವಕ ಮಂಡಲ (ರಿ) ಸಿಟಿಗುಡ್ಡೆ ನೆಹರು ನಗರ ಪುತ್ತೂರು ಇದರ 2ನೇ ವರ್ಷದ ಶ್ರೀಕೃಷ್ಣ ಯುವಕ ಮಂಡಲ ಸಂಭ್ರಮ ಕಾರ್ಯಕ್ರಮ ನ. 26 ರಂದು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಹಾಲ್ ನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಬಹುಮುಖ ಪ್ರತಿಭೆ ನೆಲೆಯಲ್ಲಿ ಬೊಳುವಾರು ನಿವಾಸಿ ಸರಕಾರಿ ಪ್ರೌಢಶಾಲೆ ಕಬಕದ ಶಿಕ್ಷಕಿ ಶಾಂತಾ ಪುತ್ತೂರುರವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಶ್ರೀಮತಿ ಅನ್ನಪೂರ್ಣ ಪ್ರಭಾರ ಮುಖ್ಯ ಶಿಕ್ಷಕಿ ಸರಕಾರಿ ಪ್ರೌಢಶಾಲೆ ಆರ್.ಎಂ.ಎಸ್.ಎ.ವಿಟ್ಲ, ಸಭಾಧ್ಯಕ್ಷರಾದ ರೆ।ಫಾ।ವಿಜಯ ಹಾರ್ವಿನ್ ಸಂಚಾಲಕರು ಸುದಾನ ವಸತಿಯುತ ಶಾಲೆ ನೆಹರುನಗರ ಪುತ್ತೂರು, ಮುಖ್ಯ ಅತಿಥಿಗಳಾದ ವಂದನೀಯ ಲಾರೆನ್ಸ್ ಮಸ್ಕರೇನಸ್ ಪ್ರಧಾನ ಧರ್ಮಗುರುಗಳು ಮಾಯ್ ದೆ ದೇವುಸ್ ಚರ್ಚ್ ಪುತ್ತೂರು, ಭಾರತೀಯ ವಾಯುಸೇನೆಯ್ ನಿವೃತ್ತ ಸಾರ್ಜಂಟ್ ಗಣೇಶ್. ಡಿ.ಎಸ್, ಉಪನ್ಯಾಸಕ ಎನ್.ಕೆ.ರಾಮಚಂದ್ರ ಭಟ್  ಪುತ್ತೂರು, ವಾಸು ನಾಯ್ಕ ನಿಸರ್ಗ ಗಣೇಶ್ ಭಾಗ್ ಪುತ್ತೂರು, ಶ್ರೀಕೃಷ್ಣ ಯುವಕ ಮಂಡಲದ ಅಧ್ಯಕ್ಷ ಬಿ.ರಾಜೀವ ಗೌಡ, ಹಿರಿಯ ಕವಿ ನಿವೃತ್ತ  ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ, ಆಮಂತ್ರಣ ಪರಿವಾರದ ಸಂಸ್ಥಾಪಕ ವಿಜಯ ಕುಮಾರ್ ಜೈನ್, ರಕ್ತದಾನಿ, ಸಮಾಜಸೇವಕ   ನವೀನ್ ಉಪಸ್ಥಿತರಿದ್ದರು. ಕಲಾವಿದ ಕೃಷ್ಣಪ್ಪ ಸ್ವಾಗತಿಸಿದರು. ಕವಯಿತ್ರಿ ಅಪೂರ್ವ ಕಾರಂತ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top