ರೇಡಿಯೊ ಮಣಿಪಾಲದಲ್ಲಿ ನಮಸ್ತೇ ಕರುನಾಡಿಗೆ ಕಾರ್ಯಕ್ರಮ

Upayuktha
0


ಮಣಿಪಾಲ: ಮಣಿಪಾಲ ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ 90.4 Mhz ಸಮುದಾಯ ಬಾನುಲಿ ಯಲ್ಲಿ ರಾಜ್ಯೋತ್ಸವ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ನಮಸ್ತೇ ಕರುನಾಡಿಗೆ ಮಾಲಿಕೆಯಲ್ಲಿ ಮೂಡಿಬರಲಿವೆ. ಈ ವಿಶೇಷ ಮಾಲಿಕೆಯು  ಇಂದು ನವೆಂಬರ್ 1 ರಂದು ಬುಧವಾರ ದಿನವಿಡೀ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಯುಕ್ತಾ ಹೊಳ್ಳ ಕುಂದಾಪುರ ಹಾಗೂ ಶಿಕ್ಷಕರಾದ ಉದಯ್ ಕೋಟ ಮತ್ತು ನಿಗಮ್ ಸಮಧುರ ಕನ್ನಡ ಗೀತೆಗಳಿಗೆ ದನಿಯಾಗಲಿದ್ದಾರೆ.


ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಕನ್ನಡ ಪುಸ್ತಕ ಸಂಗ್ರಹಣೆಯಲ್ಲಿ ತೊಡಗಿರುವ ಗೃಹಿಣಿ ಪ್ರತಿಭಾ ಆಚಾರ್ಯ ಕುಂಜಿಬೆಟ್ಟು ಹಾಗೂ ಉಪನ್ಯಾಸಕಿ ವಸುಧಾ ಅಡಿಗ ನೀಲಾವರ ಭಾಗವಹಿಸಲಿದ್ದಾರೆ. ನವೆಂಬರ್ 2 ರಂದು ಮಧ್ಯಾಹ್ನ 12 ಗಂಟೆಯಿಂದ ಇದರ ಮರುಪ್ರಸಾರವಿರುವುದು.


ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal ಮತ್ತು ಐಫೋನ್ ನ https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್‌ಲೋಡ್ ಮಾಡಿ ಈ ಕಾರ್ಯಕ್ರಮ ಕೇಳಬಹುದಾಗಿದೆ ಎಂದು ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top