ನಾ ಮೀಟುವ ಪ್ರತಿ ತರಂಗಗಳು,
ನಿನ ಕರ್ಣ ಸೇರಲೇ ಹುಟ್ಟಿದಂತಿವೆ..
ಜೀವವೀಣೆ ನುಡಿಸುವ ಬೆರಳುಗಳು,
ನಿನ ತಾಕಲೆಂದೇ ತವಕಿಸಿವೆ...
ನನ್ನಲಿರುವ ಪ್ರತಿ ಭಾವಗಳು,
ಒಡೆಯನ ಹೃದಯ ಸೇರಲು ಹಾತೊರೆದಿವೆ...
ಕಾಣುವ ಪ್ರತಿ ಕನಸುಗಳು,
ನಿದಿರೆಯಲಿ ಛೇಡಿಸಿ, ಇನಿಯನ ಸಾಮೀಪ್ಯ ಬಯಸಿವೆ...
ಈ ಬಂಧಕೆ ದೃಷ್ಟಿಯಾದೀತು ಎನ್ನುವ ತವಕ,
ಏಕೆಂದರೆ ನನಗಿಂತ ನಿನ್ನನೇ ಪ್ರೀತಿಸಿರುವೆ....
ಆದರೂ, ಇಷ್ಟೆಲ್ಲಾ ಭಾವಹೊತ್ತ ಬಯಕೆಗಳಿಗೆ,
ನನಸಾಗುವುದೇ ಎಂಬ ಸವಾಲುಗಳಿವೆ....??!!!!
- ಜ್ಯೋತಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ