ಮಂಗಳೂರು: ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾನಿಲಯದ ಬೆಂಗಳೂರು ಮತ್ತು ಭೋಪಾಲ್ ಕ್ಯಾಂಪಸ್‍ನಲ್ಲಿ ಲಭ್ಯವಿರುವ ವಿವಿಧ ಕೋರ್ಸ್‍ಗಳ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎರಡು ವರ್ಷ ಅವಧಿಯ ಎಂಎ ಶಿಕ್ಷಣ, ಎಂಎ ಅಭಿವೃದ್ಧಿ, ಎಂಎ ಸಾರ್ವಜನಿಕ ಆರೋಗ್ಯ ಮತ್ತು ಎಂಎ ಅರ್ಥಶಾಸ್ತ್ರ ಸ್ನಾತಕೋತ್ತರ ಕೋರ್ಸ್‍ಗಳು ಮತ್ತು ನಾಲ್ಕು ವರ್ಷ ಅವಧಿಯ ವಸತಿ ಸಹಿತ ಬಿಎ ಆನರ್ಸ್, ಬಿಎಸ್ಸಿ ಆನರ್ಸ್ ಮತ್ತು ಬಿಎಸ್ಸಿ ಬಿಇಡಿ ದ್ವಿಪದವಿ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.
ಅರ್ಜಿ ಸಲ್ಲಿಸಲು ಈ ತಿಂಗಳ 22 ಕೊನೆಯ ದಿನವಾಗಿದ್ದು, ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆ ಡಿಸೆಂಬರ್ 24ರಂದು ನಡೆಯಲಿದೆ. 2024ರ ಜನವರಿಯಲ್ಲಿ ವೈಯಕ್ತಿಕ ಸಂದೇಶವಿದ್ದು, ಫೆಬ್ರುವರಿಯಲ್ಲಿ ಪ್ರವೇಶಪತ್ರ ರವಾನಿಸಲಾಗುವುದು. ಕ್ಷೇತ್ರ ಅಧ್ಯಯನ, ಇಂಟರ್ನ್‍ಶಿಪ್ ಅವಕಾಶ, ಕ್ಷೇತ್ರಾಧಾರಿತ ಮಾರ್ಗದರ್ಶಿತ ಪ್ರಾಜೆಕ್ಟ್‍ಗಳನ್ನು ಸಂಯೋಜಿಸಲಾಗಿದೆ. ಕಾರ್ಯಾಗಾರ, ಸೆಮಿನಾರ್‍ಗಳು ಮತ್ತು ಅತಿಥಿ ಉಪನ್ಯಾಸಗಳ ಮೂಲಕ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ವಿವರಗಳಿಗೆ outreach@apu.edu.in ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ