ತುಲಾಭಾರ ಸೇವೆಯ ವೇಳೆ ನಡೆದ ಘಟನೆಗೆ ಪೇಜಾವರ ಶ್ರೀಗಳ ಸ್ಪಷ್ಟನೆ

Upayuktha
0


ನವದೆಹಲಿ: ಪೇಜಾವರ ಮಠಾಧೀಶರಾದ ಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ 60ನೇ ಜನ್ಮ ವರ್ಧಂತಿ ಸಂದರ್ಭದಲ್ಲಿ ಭಕ್ತರು ಆಯೋಜಿಸಿದ್ದ ತುಲಾಭಾರ ಸೇವೆಯ ವೇಳೆ ತಕ್ಕಡಿಯ ಮೇಲ್ಭಾಗ ಕುಸಿದು ಶ್ರೀಗಳ ತಲೆಯ ಮೇಲೆ ಬಿದ್ದ ಘಟನೆ ನಡೆದಿದೆ.


ಆದರೆ ಅದೃಷ್ಟವಶಾತ್‌ ಯಾವುದೇ ಗಾಯಗಳಿಲ್ಲದೆ ಶ್ರೀಗಳು ಪಾರಾಗಿದ್ದಾರೆ. ಈ ಬಗ್ಗೆ ಸ್ವತಃ ಅವರೇ ವಿಡಿಯೋ ಸಂದೇಶ ನೀಡಿದ್ದು, ಭಕ್ತರು ಯಾವುದೇ ರೀತಿಯಲ್ಲಿ ಆತಂಕಪಡುವ ಅಗತ್ಯವಿಲ್ಲ. ತಾವು ಕ್ಷೇಮವಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

 


ಕೆಲವು ಮಾಧ್ಯಮಗಳಲ್ಲಿ ಶ್ರೀಗಳ ಜನ್ಮವರ್ಧಂತಿ ಸಂದರ್ಭದ ಕಾರ್ಯಕ್ರಮಗಳ ವರದಿಗಿಂತಲೂ ಈ ಋಣಾತ್ಮಕ ಘಟನೆಯ ವರದಿಗಳೇ ಮೇಲುಗೈ ಸಾಧಿಸಿದ್ದು ಈಗಿನ ಮಾಧ್ಯಮಗಳ ಆದ್ಯತೆ ಏನು ಎಂಬುದನ್ನು ಮತ್ತೊಮ್ಮೆ ಋಜುವಾತು ಪಡಿಸಿದೆ. ಅದೇನೇ ಇರಲಿ, ತಾವು ಯಾವುದೇ ಅಪಾಯವಿಲ್ಲದೆ ಪಾರಾಗಿರುವುದಾಗಿ ಶ್ರೀಗಳು ಸ್ವತಃ ಸ್ಪಷ್ಟಪಡಿಸುವ ಮೂಲಕ ಭಕ್ತರ ಆತಂಕಗಳನ್ನು ದೂರ ಮಾಡಿರುವುದು ಸ್ವಾಗತಾರ್ಹ ಸಂಗತಿಯಾಗಿದೆ.

Post a Comment

0 Comments
Post a Comment (0)
To Top