ಪೇಜಾವರ ಶ್ರೀ- 60: ಡಿಸೆಂಬರ್ 16ರಂದು ಉಡುಪಿಯಲ್ಲಿ ಬೃಹತ್ ಅಭಿವಂದನ ಸಮಾರಂಭ

Upayuktha
0

ಪರ್ಯಾಯ ಶ್ರೀ ಕೃಷ್ಣಾಪುರ ಶ್ರಿ ಗೌರವಾಧ್ಯಕ್ಷತೆ, ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ಸಮಿತಿ 




ಉಡುಪಿ: ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ 60 ಸಂವತ್ಸರಗಳು ತುಂಬಿರುವ ಹಿನ್ನೆಲೆಯಲ್ಲಿ ಶ್ರೀಗಳಿಗೆ ಬೃಹತ್ ಅಭಿವಂದನಾ ಸಮಾರಂಭ ಹಾಗೂ ದಿನಪೂರ್ತಿ ಕಾರ್ಯಕ್ರಮಗಳನ್ನು ಉಡುಪಿಯಲ್ಲಿ ಆಯೋಜಿಸಲು ಭಕ್ತವೃಂದ ತೀರ್ಮಾನಿಸಿದೆ.


ಇದಕ್ಕಾಗಿ ಪರ್ಯಾಯ ಶ್ರೀ ಕೃಷ್ಣಾಪುರ ಶ್ರೀಗಳ ಗೌರವಾಧ್ಯಕ್ಷತೆಯಲ್ಲಿ ಹಾಗೂ ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ಅಭಿವಂದನ ಸಮಿತಿಯನ್ನು ರಚಿಸಲಾಗಿದೆ. ಸಮಾರಂಭದ ರೂಪುರೇಷೆ ಹಾಗೂ ಕಾರ್ಯಕ್ರಮಗಳ ಆಯೋಜನೆ ಬಗ್ಗೆ ಪೂರ್ವಭಾವಿ ಸಭೆ ಇಂದು (ನ.18) ಉಡುಪಿಯ ಅಜ್ಜರಕಾಡು ಗೋವಿಂದ ಕಲ್ಯಾಣಮಂಟಪದಲ್ಲಿ ನಡೆಯಿತು.


ಇಂದಿನ ಸಭೆಯಲ್ಲಿ ಅನೇಕ ಗಣ್ಯರು, ದೇವಸ್ಥಾನಗಳ ಧರ್ಮದರ್ಶಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ನೂರಾರು ಮಂದಿ ಉಪಸ್ಥಿತರಿದ್ದರು. ಈ ಸಮಾರಂಭದ ಮೂಲಕ ದೇಶಕ್ಕೇ ಒಂದು ದಿವ್ಯ ಸಂದೇಶ ಕೊಡೋಣ ಎಂದು ಶಾಸಕರು ಸೇರಿದಂತೆ ಗಣ್ಯರು ಆಶಯ ವ್ಯಕ್ತಪಡಿಸಿದರು.

 


ಗಣ್ಯರಾದ ಗುರ್ಮೆ ಸುರೇಶ್ ಶೆಟ್ಟಿ, ಪ್ರಮೋದ್ ಮಧ್ವರಾಜ್, ಮಂಜುನಾಥ ಉಪಾಧ್ಯ, ಜಯಕರಶೆಟ್ಟಿ ಇಂದ್ರಾಳಿ, ದಿನೇಶ್ ಪುತ್ರನ್, ಸುಬ್ರಹ್ಮಣ್ಯ ಭಟ್, ಎಂ ರಘುರಾಮ ಆಚಾರ್ಯ, ಸೂರ್ಯನಾರಾಯಣ ಉಪಾಧ್ಯಾಯ ಕುಂಭಾಸಿ, ಶ್ರೀರಮಣ ಉಪಾಧ್ಯಾಯ, ದಿನಕರಬಾಬು ಜಯ ಸಿ ಕೋಟ್ಯಾನ್, ದಯಾನಂದ ಸುವರ್ಣ ಯೋಗೀಶ್ ಶೆಟ್ಟಿ ಕಾಪು, ಕಾಪು ವಾಸುದೇವ ಶೆಟ್ಟಿ ಸಾಧು ಸಾಲ್ಯಾನ್ ವಿಷ್ಣುಮೂರ್ತಿ ಆಚಾರ್ಯ, ಗುರುದಾಸ್ ಶೆಣೈ, ರವಿ ರಾವ್, ಸೌರಭ್ ಶೆಟ್ಟಿ, ಬಾಲಾಜಿ ರಾಘವೇಂದ್ರ ಆಚಾರ್ಯ, ವೀಣಾ ಶೆಟ್ಟಿ, ಕೃಷ್ಣಮೂರ್ತಿ ಆಚಾರ್ಯ, ಲಕ್ಷ್ಮೀ ಮಂಜುನಾಥ್, ಶ್ರೀಶ ಕೊಡವೂರು, ಕೃಷ್ಣರಾವ್ ಕೊಡಂಚ ಯೋಗೀಶ್ ಸಾಲ್ಯಾನ್, ಶ್ರೀಕಾಂತ್ ಉಪಾಧ್ಯಾಯ, ರಾಘವೇಂದ್ರ ಕಿಣಿ, ಕೃಷ್ಣ ದೇವಾಡಿಗ, ಪದ್ಮನಾಭ ಭಟ್, ಕಿರಣ್ ಕುಮಾರ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಬಿ ಉಮೇಶ್ ರಾವ್, ಪ್ರೊ ಹರೀಶ್ ಜೋಶಿ, ಅಜಿತ್ ಕೊಡವೂರು, ಶ್ರೀಧರ ಭಟ್, ಸತೀಶ್ ಕುಮಾರ್, ಪ್ರಶಾಂತ್ ಹೆಗ್ಡೆ, ಕಮಲಾಕ್ಷ ಹೆಬ್ಬಾರ್, ಪ್ರಸಾದ್ ಭಟ್ ಪೇತ್ರಿ, ಸೇರಿದಂತೆ ನೂರಾರು ಮಂದಿ ಸಮಾಲೋಚನಾ ಸಭೆಯಲ್ಲಿ ಉಪಸ್ಥಿತರಿದ್ದರು. ಮಾಯಾ ಕಾಮತ್ ಪ್ರಾರ್ಥನೆಗೈದರು, ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top