ನ. 18 ರಂದು ಹಂಪಿಯಲ್ಲಿ ಅಖಿಲ ಭಾರತ 3ನೇ ಗುರುಕುಲ ಕಲಾ ಸಮ್ಮೇಳನ

Upayuktha
0

ಗುರುಕುಲ ಸಾಹಿತ್ಯ ಕೇಸರಿ ಪ್ರಶಸ್ತಿಯನ್ನು ಸಂತೋಷ್ ರಾವ್ ಪೆರ್ಮುಡ ಅವರ ಜೀವಜಗತ್ತಿನ ಮಾಣಿಕ್ಯಗಳು ಪುಸ್ತಕ ಆಯ್ಕೆ



ಹಂಪಿ: ಗುರುಕುಲ ಕಲಾ ಪ್ರತಿಷ್ಠಾನ ಕೇಂದ್ರ ಸಮಿತಿ ತುಮಕೂರು ವತಿಯಿಂದ ನವೆಂಬರ್ 18  ಶನಿವಾರದಂದು ಅಖಿಲ ಭಾರತ  3ನೇ ಗುರುಕುಲ ಕಲಾ ಸಮ್ಮೇಳನ ವಿಜಯನಗರ ಜಿಲ್ಲೆ ಹಂಪಿಯಲ್ಲಿ  ನಡೆಯಲಿದೆ. 



ಈ ವೇಳೆ ಕವಿಗೋಷ್ಠಿ, ವಿಚಾರಗೋಷ್ಠಿ, ಸಮಾಜದ ವಿವಿಧ ಕ್ಷೇತ್ರಗಳ ಸಾಧಕರು ಮತ್ತು ವಿವಿಧ ವಿಭಾಗಗಳಲ್ಲಿ ಪುಸ್ತಕಗಳನ್ನು ಬರೆದವರನ್ನು   ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 



ಈ ಕಾರ್ಯಕ್ರಮದಲ್ಲಿ ಗುರುಕುಲ ಸಾಹಿತ್ಯ ಕೇಸರಿ (ಪುಸ್ತಕ ಪ್ರಶಸ್ತಿ-ಪ್ರಕಟಿತ) ಪ್ರಶಸ್ತಿಯನ್ನು ಪಟ್ರಮೆ ಗ್ರಾಮ ಬೆಳ್ತಂಗಡಿ ತಾಲೂಕಿನ ಸಂತೋಷ್ ರಾವ್ ಪೆರ್ಮುಡ ಇವರು ಬರೆದಿರುವ ಜೀವಜಗತ್ತಿನ ಮಾಣಿಕ್ಯಗಳು ಪುಸ್ತಕವನ್ನು ಆಯ್ಕೆ ಸಮಿತಿಯು ಆಯ್ಕೆ ಮಾಡಿರುತ್ತದೆ ಎಂದು ಗುರುಕುಲ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಹುಲಿಯೂರುದುರ್ಗ ಲಕ್ಷ್ಮೀನಾರಾಯಣ್, ಸ್ಥಾಪಕ ಕಾರ್ಯಧ್ಯಕ್ಷರಾದ ಡಾ. ಶಿವರಾಜ್ ಗೌಡರವರು  ಹಾಗೂ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷರಾದ  ವೆಂಕಟೇಶ್ ಬಡಿಗೇರ್ ಮತ್ತು ಸರ್ವ ಪದಾಧಿಕಾರಿಗಳು ತಿಳಿಸಿರುತ್ತಾರೆ. 



ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ನಡೆಯುವ ಅದ್ದೂರಿ ಕಾರ್ಯಕ್ರಮದಲ್ಲಿ ಇವರಿಗೆ ಗುರುಕುಲ ಸಾಹಿತ್ಯ ಕೇಸರಿ (ಪುಸ್ತಕ ಪ್ರಶಸ್ತಿ-ಪ್ರಕಟಿತ) ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಪುಸ್ತಕವನ್ನು ಬೆಂಗಳೂರಿನ ಆಗಮ್ಯ ಪ್ರಕಾಶನದ ರವಿಚಂದ್ರ ರಾವ್ ಇವರು ಪ್ರಕಟಿಸಿರುತ್ತಾರೆ. ಈ ಪುಸ್ತಕದಲ್ಲಿ ಇಂದಿನ ಆಧುನಿಕತೆ ಮತ್ತು ಅಭಿವೃದ್ದಿಯ ಧಾವಂತದಲ್ಲಿ ನಶಿಸಿ ಹೋಗುತ್ತಿರುವ ಹಾಗೂ ಮುಂದೊಂದು ದಿನ ಈ ಜೀವಿಗಳು ಭೂಮಿಯಲ್ಲಿ ಬದುಕಿದ್ದವು ಎಂದು ಹೇಳಬೇಕಾಗಿ ಬರಬಹುದಾದ ಜೀವಸಂಕುಲಗಳ ಬಗ್ಗೆ ಮತ್ತು ಅವುಗಳು ವಿನಾಶದ ಅಂಚಿಗೆ ಬರಲು ಕಾರಣಗಳ ಬೆಳಕುಚೆಲ್ಲಲಾಗಿದೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top