ನೂತನ ತಂತ್ರಜ್ಞಾನಗಳನ್ನು ಸವಾಲಾಗಿ ಸ್ವೀಕರಿಸಿ ಸಾಧನೆ ಮಾಡಬೇಕು: ಅನುಶ್ರೀ ರಾಜ್

Upayuktha
0



ಮಂಗಳೂರು: ಕೃತಕ ಬುದ್ಧಿಮತ್ತೆ ಶಾಖೆಯು ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದ್ದು ವಿದ್ಯಾರ್ಥಿಗಳು ನೂತನ ತಂತ್ರಜ್ಞಾನಗಳನ್ನು ತಿಳಿದುಕೊಂಡು ಅದನ್ನು ಸವಾಲಾಗಿ ಸ್ವೀಕರಿಸಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡಬೇಕು ಎಂದು ಮಂಗಳೂರು ಬೀರಿಯ  ಸಂತ ಅಲೋಶಿಯಸ್ ನಿರ್ವಹಣೆ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಮಾಹಿತಿ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕಿ ಅನುಶ್ರೀ ರಾಜ್ ನುಡಿದರು. 



ಅವರು ಗೋವಿಂದ ದಾಸ ಕಾಲೇಜಿನ ಕಂಪ್ಯೂಟರ್ ಅಸೋಸಿಯೇಶನ್‍ನ 2023-24ನೇ ಸಾಲಿನ ಕಾರ್ಯ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅವರು ವಿದ್ಯಾರ್ಥಿಗಳಿಗೆ ಎ.ಐ ಕ್ರಾಂತಿ: ಕೃತಕ ಬುದ್ಧಿಮತ್ತೆಯ ಸಂಭಾವ್ಯತೆಯನ್ನು ಅನಾವರಣಗೊಳಿಸುವುದರ ಬಗ್ಗೆ ಮಾಹಿತಿ ನೀಡಿದರು.



ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಪ್ರೊ. ರಮೇಶ್ ಭಟ್ ಎಸ್.ಜಿ., ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಪ್ರೊ. ಹರೀಶ ಆಚಾರ್ಯ ಪಿ. ಶುಭ ಹಾರೈಸಿದರು. ಕಂಪ್ಯೂಟರ್ ಅಸೋಸಿಯೇಶನ್‍ನ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು.



ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥೆ ಗೀತಾ ಕೆ., ಕಂಪ್ಯೂಟರ್ ಸೈನ್ಸ್ ಅಸೋಸಿಯೇನ್ ಸಂಯೋಜಕಿ ಬಬಿತಾ ನವೀನ್‍ಚಂದ್ರ, ಉಪನ್ಯಾಸಕಿಯರಾದ ಶೈಲಜಾ ಹೆಚ್., ವೀಣಾ ಕೆ., ವಿದ್ಯಾ ಸಿ. ಪಾಟೀಲ್, ಪೂರ್ಣಿಮಾ ಗೋಖಲೆ, ಕಂಪ್ಯೂಟರ್ ತರಬೇತಿದಾರ ನಿತೇಶ್ ಉಪಸ್ಥಿತರಿದ್ದರು. ಭುವನ್ ಸ್ವಾಗತಿಸಿ ಶ್ರದ್ಧಾ ವಂದಿಸಿದರು. ದಿಶಾಲಿ ಕಾರ್ಯಕ್ರಮ ನಿರೂಪಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top