ಪುತ್ತೂರು: ನಾಟ್ಯರಂಗ ಪುತ್ತೂರು ಕಲಾವಿದೆಯರು ಅರ್ಪಿಸುವ 'ನೃತ್ಯ ಹರ್ಷ' ಕಾರ್ಯಕ್ರಮ ನವೆಂಬರ್ 19ರಂದು ಭಾನುವಾರ ಸಂಜೆ 6:15ರಿಂದ ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ.
ಮಂಗಳೂರಿನ ಸನಾತನ ನಾಟ್ಯಾಲಯದ ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾ ಮಣಿಶೇಖರ್ ಅವರು ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಲೆಯ ಆಡಳಿತ ಮಂಡಳಿ ಸದಸ್ಯೆ ಡಾ. ಆಶಾ ಗೌರವ ಉಪಸ್ಥಿತರಿರುತ್ತಾರೆ.
ಹಿಮ್ಮೇಳದಲ್ಲಿ ನಟುವಾಂಗ, ನಿರ್ದೇಶನವನ್ನು ವಿದುಷಿ ಮಂಜುಳಾ ಸುಬ್ರಹ್ಮಣ್ಯ ನಿರ್ವಹಿಸಲಿದ್ದಾರೆ. ಹಾಡುಗಾರಿಕೆಯಲ್ಲಿ ಪವಿತ್ರಾ ವಿನಯ್ ಮಯ್ಯ, ಮೃದಂಗದಲ್ಲಿ ಚಂದ್ರಶೇಖರ ಗುರುವಾಯನಕೆರೆ ಹಾಗೂ ಕೊಳಲು ವಾದನದಲ್ಲಿ ಕೃಷ್ಣ ಗೋಪಾಲ ಪುಂಜಾಲಕಟ್ಟೆ ಸಹಕರಿಸಲಿದ್ದಾರೆ.
ಪ್ರಸಾಧನ- ಶಿವರಾಮ ಕಲ್ಮಡ್ಕ, ಬೆಳಕಿನ ನಿರ್ವಹಣೆ- ಪೃಥ್ವಿನ್ ಉಡುಪಿ, ಧ್ವನಿ ಮತ್ತು ಬೆಳಕು- ಅಶ್ವತ್ಥ್ ಸೌಂಡ್ಸ್ ಮತ್ತು ಲೈಟ್ಸ್ ಪುತ್ತೂರು ನಿರ್ವಹಿಸುತ್ತಾರೆ.
ನಾಟ್ಯರಂಗದ ಕಲಾವಿದೆಯರಾದ ಅವನಿ ಬೆಳ್ಳಾರೆ, ಕೀರ್ತನಾ ವರ್ಮ, ಮೇಧಾ ಭಟ್, ಶರ್ವಿನಾ ಶೆಟ್ಟಿ, ಪ್ರಜ್ಞಶ್ರೀ ನೃತ್ಯ-ಹರ್ಷವನ್ನು ಪ್ರಸ್ತುತಪಡಿಸಲಿದ್ದಾರೆ. ನಾಟ್ಯರಂಗದ ನೃತ್ಯ ಗುರುಗಳು ಹಾಗೂ ಪೋಷಕರು, ಕಲಾವಿದರಾದ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಕಾರ್ಯಕ್ರಮದ ಸಮಗ್ರ ನಿರ್ವಹಣೆ ಮಾಡಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ