ರಾಷ್ಟ್ರೀಯ ಏಕತೆ ಮತ್ತು ಕೋಮು ಸಾಮರಸ್ಯ: ಕೆನರಾ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ

Chandrashekhara Kulamarva
0


ಮಂಗಳೂರು: ಕೆನರಾ ಕಾಲೇಜಿನ ಮಾನವ ಹಕ್ಕುಗಳ ಸಂಘದ ವತಿಯಿಂದ 'ರಾಷ್ಟ್ರೀಯ ಏಕತೆ ಮತ್ತು ಕೋಮು ಸಾಮರಸ್ಯ 'ಎಂಬ ವಿಷಯದಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.


ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಪ್ರೊ. ಪುಷ್ಪರಾಜ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, "ಬಹುಸ್ವರೂಪಿ ಭಾರತದಂತಹ ಸಮಾಜದಲ್ಲಿ ಜಾತಿ, ಧರ್ಮ, ಪಂಗಡ ಎಂಬ ಭೇದ ಭಾವ ಮರೆತು ನಾವೆಲ್ಲರೂ ಒಗ್ಗಟ್ಟಾಗಿ ಜೀವಿಸಬೇಕು. ವಿವಿಧತೆಯಲ್ಲಿ ಏಕತೆಯ ಈ ದೇಶದಲ್ಲಿ ರಾಷ್ಟ್ರೀಯ ಐಕ್ಯತೆ ಮತ್ತು ಕೋಮು ಸಾಮರಸ್ಯವನ್ನು ಕಾಪಾಡಬೇಕು" ಎಂದು ಹೇಳಿ ಅದಕ್ಕೆ ಸಂಬಂಧಪಟ್ಟಂತೆ ಕೆಲವೊಂದು ಪ್ರಾಯೋಗಿಕ ಉದಾಹರಣೆಗಳನ್ನು ಉಲ್ಲೇಖಿಸಿದರು.


ಮಾನವ ಹಕ್ಕುಗಳ ಸಂಘದ ಸಂಯೋಜಕ ಡಾ.ಗಣೇಶ್ ಶೆಟ್ಟಿ ಅವರು ಸ್ವಾಗತಿಸಿ, ಶ್ರೀಮತಿ ಕೀರ್ತಿ ಆಳ್ವ ವಂದಿಸಿದರು. ಪ್ರಾಂಶುಪಾಲೆ ಡಾ.ಪ್ರೇಮಲತಾ ವಿ ಅವರು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಏಕತೆಯ ಪ್ರತಿಜ್ಞೆಯನ್ನು ಬೋಧಿಸಿದರು. ಐಕ್ಯುಎಸಿ ಸಂಯೋಜಕಿ ಶ್ರೀಮತಿ ಅನುಸೂಯ ಭಾಗವತ್ ಸಂದೇಶವನ್ನು ವಾಚಿಸಿದರು.


إرسال تعليق

0 تعليقات
إرسال تعليق (0)
To Top