ಅರಕಲಗೊಡು ಅರಸೀಕಟ್ಟೆ ಅಮ್ಮದೇವಾಲಯ ಸಮಿತಿಯಿಂದ ಕನ್ನಡ ರಾಜ್ಯೋತ್ಸವ ಸಾಧಕರಿಗೆ ಸನ್ಮಾನ

Upayuktha
0



ಹಾಸನ: ಅರಕಲಗೊಡು ತಾಲ್ಲೂಕು ಶ್ರೀ ಅರಸೀಕಟ್ಟೆ ಅಮ್ಮದೇವಾಲಯದ ಆವರಣದಲ್ಲಿ ಶ್ರೀ ಅರಸೀಕಟ್ಟೆ ಅಮ್ಮದೇವಾಲಯ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಕನ್ನಡರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧಕ್ಷೇತ್ರದ ಸಾಧಕರನ್ನು  ಮಾಜಿ ಶಾಸಕರು ಮತ್ತು ಶ್ರೀ ಅರಸೀಕಟ್ಟೆ ಅಮ್ಮದೇವಾಲಯ ಸಮಿತಿ ಅಧ್ಯಕ್ಷರು ಶ್ರೀ ಎ.ಟಿ.ರಾಮಸ್ವಾಮಿಯವರು ತಾಲ್ಲೂಕಿನ ವಿವಿಧ ಮಠಗಳ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಸನ್ಮಾನಿಸಿ ಗೌರವಿಸಿ ಪುರಸ್ಕರಿಸಿದರು. 


ಹಾಸನ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿಅಧ್ಯಕ್ಷರು ಬಿ.ಎನ್.ರಾಮಸ್ವಾಮಿ, ಸಾಹಿತ್ಯ ಸೇವೆಗಾಗಿ ಗೊರೂರು ಅನಂತರಾಜು, ಜನಪದ ಗಾಯಕ ಅರಕಲಗೊಡು ದೇವಾನಂದ್ ವರಪ್ರಸಾದ್,  ಹೊಳೆನರಸೀಪುರದ ಜನಸೇವೆಯ ಆಟೋಚಾಲಕರು ಹನುಮಂತು ಮತ್ತು ಅರಕಲಗೊಡು ತಾ. ಗಂಗೂರುಗ್ರಾಮದಲ್ಲಿ ತಮ್ಮ ನಿವೃತ್ತಿ ಹಣದಲ್ಲಿ ಅನಾಥಾಶ್ರಮ ಸ್ಥಾಪಿಸಿ ಸಮಾಜಸೇವೆಯ ಸಾಧಕಿ ಗೀತಾರವರನ್ನು ಸನ್ಮಾನಿಸಲಾಯಿತು. ಗಂಗಾವತಿ ಪ್ರಾಣೇಶ್‍ತಂಡದವರ ಹಾಸ್ಯಕಾರ್ಯಕ್ರಮ ನೆರೆದ ಸಾವಿರಾರು ಪ್ರೇಕ್ಷಕರನ್ನು ರಂಜಿಸಿತು. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top