ಕಾಸರಗೋಡು: ಸುಕ್ಷೇತ್ರ ಮೈಲಾರದ ವಿವಿಧ ಸಂಘಟನೆಗಳು ನೀಡುವ 'ಮೈಲಾರ ಬಸವಲಿಂಗ ಶರಣಶ್ರೀ' ಪ್ರಶಸ್ತಿಗೆ ಕಾಸರಗೋಡಿನ ವೈದ್ಯೆ, ಸಾಹಿತಿ, ಸಂಘಟಕಿ ಡಾ. ವಾಣಿಶ್ರೀ ಕಾಸರಗೋಡು ಆಯ್ಕೆಯಾಗಿದ್ದಾರೆ.
ಹಾವೇರಿ ಜಿಲ್ಲೆಯ ಮೈಲಾರದ ಶರಣ ಜಯಪ್ರಕಾಶ ನಾರಾಯಣ ಕಲಾಮಂದಿರದಲ್ಲಿ ನ.27ರಂದು ನಡೆಯುವ ಕರ್ನಾಟಕ ಸಂಭ್ರಮ 50 ಹಾಗೂ ಕರ್ನಾಟಕ ಗ್ರಾಮೀಣ ನುಡಿಹಬ್ಬ 2023ರ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಕರ್ನಾಟಕ ಗ್ರಾಮೀಣ ಯುವ ಕನ್ನಡ ಸಾಹಿತ್ಯ ಕ್ರಿಯಾ ಸಮಿತಿ, ವಿಜಯನಗರ/ಬಳ್ಳಾರಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಹೂವಿನ ಹಡಗಲಿ ತಾಲೂಕು ಘಟಕ ಮತ್ತು ಗ್ರಾ. ಪಂ. ಮೈಲಾರ ಸಂಯುಕ್ತವಾಗಿ ಈ ಕಾರ್ಯಕ್ರಮ ಆಯೋಜಿಸಿವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ