ಪುರಾತನ ವಸ್ತು ಸಂಗ್ರಹ ಕೊಠಡಿ, ವೈದ್ಯಕೀಯ ಶಿಬಿರ, ಗೋಷ್ಠಿಗಳ ಉದ್ಘಾಟನೆ: ಗುರುನಮನ
ಕೊಣಾಜೆ: ವಿದ್ಯೆಯೊಂದಿಗೆ ಮನುಷ್ಯನಿಗೆ ಸಂಸ್ಕಾರ ಕೊಡುವಲ್ಲಿ ವಿದ್ಯಾಸಂಸ್ಥೆಗಳ ಪಾತ್ರ ಮಹತ್ತರವಾದುದು. ವಿದ್ಯೆ ಕೌಶಲದ ಜೊತೆಗೆ ಉದ್ಯೋಗಶೀಲತೆ, ಪ್ರಯೋಗಶೀಲತೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಶಕ್ತಿ ಶಿಕ್ಷಣ ಸಂಸ್ಥೆಗಳಿರಬೇಕು. ಮುಡಿಪು ಭಾರತೀ ಶಾಲೆ ಈ ನಿಟ್ಟಿನಲ್ಲಿ ಊರಿನ ಒಂದು ಆದರ್ಶ ಶಾಲೆಯಾಗಿದೆ ಎಂದು ನಿಟ್ಟೆ ವಿವಿ ನಿಕಟಪೂರ್ವ ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಹೇಳಿದರು.
ಅವರು ಮುಡಿಪುವಿನ ಶ್ರೀ ಭಾರತೀ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದ ಎರಡನೇ ದಿನವಾದ ಭಾನುವಾರ ಪುರಾತನ ವಸ್ತು ಸಂಗ್ರಹ ಕೊಠಡಿ, ವೈದ್ಯಕೀಯ ಶಿಬಿರ, ಗೋಷ್ಠಿಗಳ ಉದ್ಘಾಟನೆ, ಗುರುನಮನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವಿವಿಧ ಗೋಷ್ಠಿಗಳನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಜಿ.ವಿ.ಜೋಷಿ, ಸಮಾರಂಭದಲ್ಲಿ ವಿವಿಧ ಮಹತ್ವಪೂರ್ಣ ಗೋಷ್ಠಿಗಳನ್ನು ಏರ್ಪಡಿಸುವ ಮೂಲಕ ಈ ಶಾಲೆಯ ಮೌಲ್ಯ ಮತ್ತು ಮಹತ್ವತೆಯನ್ನು ಹೆಚ್ಚಿಸಿದೆ. ಭಾರತೀ ಶಾಲೆ ನಂದಾದೀಪವಾಗಿ ಬೆಳೆಯಲಿ ಎಂದರು.
ಹಳೆ ವಿದ್ಯಾರ್ಥಿ ಹಾಗೂ ನಿವೃತ್ತ ದ.ಕ. ಜಿಲ್ಲಾ ಜಂಟಿ ನಿಯಂತ್ರಕರಾದ ರಾಮದಾಸ್ ಮಾತನಾಡಿ, 1948 ರಲ್ಲಿ ಶಾಲೆ ಆರಂಭವಾದ ವರ್ಷ ಅದು ಸ್ವಾತಂತ್ರ್ಯ ಹೋರಾಟದ ಹಾಗೂ ಸ್ವಾತಂತ್ರ್ಯ ದೊರಕಿದ ಕಾಲಘಟ್ಟವಾಗಿತ್ತು. ಆದ್ದರಿಂದ ಈ ಶಾಲೆಯಲ್ಲಿ ಸ್ವಾತಂತ್ರ್ಯದ ಬೆಳಕು ತುಂಬಿಕೊಂಡಿದೆ ಎಂದರು.
ಮೂಡದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಅವರು ಮಾತನಾಡಿ, ಕೊಡಕ್ಕಲ್ ನಾರಾಯಣ ಭಟ್ ಹಾಗೂ ತನಿಯಪ್ಪ ಮೂಲ್ಯ ಅವರು ಭೂಮಿಯ ದಾನ ಮಾಡುವುದರ ಮೂಲಕ ಅಂದಿನ ಕಾಲದಲ್ಲಿ ಈ ಶಾಲೆಯ ಆರಂಭಕ್ಕೆ ಬುನಾದಿ ಹಾಕಿದ್ದರು. ಇವರನ್ನು ನಾವು ಎಂದಿಗೂ ಮರೆಯಬಾರದು ಎಂದರು.
ಕುರ್ನಾಡು ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಗಣೇಶ್ ನಾಯಕ್ ಕುರ್ನಾಡುಗುತ್ತು ದೀಪ ಪ್ರಜ್ವಲನೆ ಮಾಡಿದರು. ಅಮೃತ ಮಹೋತ್ಸವ ಸಮಿತಿ ಉಪಾಧ್ಯಕ್ಷ ಡಾ.ಅರುಣ್ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
ಪುರಾತನ ವಸ್ತು ಸಂಗ್ರಹ ಕೊಠಡಿಯನ್ನು ಮುಡಿಪು ಸರ್ಕಾರಿ ಪ.ಪೂ.ಕಾಲೇಜು ಪ್ರಾಂಶುಪಾಲ ಪರಮೇಶ್ವರಿ, ವೈದ್ಯಕೀಯ ಶಿಬಿರಗಳನ್ನು ಡಾ.ಸತೀಶ್ ಕುಮಾರ್ ಭಂಡಾರಿ ಬಿ., ರಕ್ತದಾನ ಶಿಬಿರವನ್ನು ಬ್ಲಡ್ ಡೋನರ್ಸ್ ಅಸೋಸಿಯೇಶನ್ ಅಧ್ಯಕ್ಷ ನವಾಜ್ ನರಿಂಗಾನ, ನೆನಪಿನ ನೆರಳು ತರಗತಿ ಕೊಠಡಿಯನ್ನು ಮುಡಿಪು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಅಧ್ಯಕ್ಷ ರಮೇಶ್ ಶೇನವ, ಗ್ರಂಥಾಲಯವನ್ನು ಹಿರಿಯ ಸಾಹಿತಿ ಇರಾ ನೇಮು ಪೂಜಾರಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಉರಗ ತಜ್ಞ ದಿಲೀಪ್ ಕುಮಾರ್, ಕುರ್ನಾಡು ಗ್ರಾಮ ಪಂಚಾಯತಿ ಅಧ್ಯಕ್ಷೆ ಲೋಲಾಕ್ಷಿ, ಮಾಜಿ ಅಧ್ಯಕ್ಷರಾದ ಸೂಫಿ ಕುಂಞಿ, ಹಿರಿಯ ಹಳೆವಿದ್ಯಾರ್ಥಿ ನಿವೃತ್ತ ಸೇನಾನಿ ರಾಮ ಭಟ್, ದಾನಿ ಹುಸೈನ್, ವೈದ್ಯರಾದ ಮಮತಾ ರೈ, ಹಿರಿಯ ಹಳೆ ವಿದ್ಯಾರ್ಥಿನಿ ತೆಕ್ಕುಂಜೆ ವೀಣಾ, ಉದ್ಯಮಿ ಜಗದೀಶ್ ಅಡಪ, ಅಮರನಾಥ ಶೆಟ್ಟಿ ಸರಪಾಡಿ, ಕೆ.ಎಸ್ .ಹೆಗ್ಡೆ ಆಸ್ಪತ್ರೆಯ ವೈದ್ಯರಾದ ಡಾ.ಪುನೀತ್ ಹೆಗ್ಡೆ, ಡಾ.ಅಕ್ಷತಾ, ಡಾ.ನಯನಾ ಗೌರಿ, ಮುರಲೀ ಮೋಹನ ಭಟ್, ಭಾರತೀ ಎಜ್ಯುಕೇಶನ್ ಟ್ರಸ್ಟ್ ಸಂಚಾಲಕ ಕೆ.ಸುಬ್ರಹ್ಮಣ್ಯ ಭಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಶ್ಚಲ್ ಜಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಸ್ಗರ್, ಕೋಶಾಧಿಕಾರಿ ರಾಮಕೃಷ್ಣ ಭಟ್, ಡಾ.ಅರುಣ್ ಪ್ರಸಾದ್ ಅನ್ನಪೂರ್ಣೇಶ್ವರಿ ಕಿಲಾರಿ ಮೊದಲಾದವರು ಉಪಸ್ಥಿತರಿದ್ದರು.
ಭಾರತೀ ಶಿಕ್ಷಣಾಮೃತ, ಭಾರತೀ ಮಹಿಳಾಮೃತ, ಭಾರತೀ ಕಥಾಮೃತ, ಭಾರತೀ ಕವನಾಮೃತ, ಭಾರತೀ ಚುಟುಕು, ಭಾರತೀ ಶಾಲಾಮೃತ, ‘ಅಮೃತಭಾರತಿ-ನಿನ್ನೆ-ಇಂದು-ನಾಳೆ’ ಹೆಸರಿನ ವಿವಿಧ ಗೋಷ್ಠಿಗಳು ಹಳೆ ವಿದ್ಯಾರ್ಥಿಗಳಿಂದ ನಡೆದವು.
ಗುರುನಮನ:
ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಶಿಕ್ಷಕರಾದ ಎಂ.ಕೆ.ಲೀಲಾ, ಎ.ಸುಧಾ, ಎಂ.ರಾಮ ರಾವ್, ಶಶಿಕಲಾ ಜಿ. ಅವರಿಗೆ ಗುರು ನಮನ ನಡೆಯಿತು. ನೇತ್ರ ತಪಾಸಣಾ ಶಿಬಿರ, ನೇತ್ರದಾನ ನೋಂದಣಿ, ವೈದ್ಯಕೀಯ ತಪಾಸಣಾ ಶಿಬಿರ, ಅಂಗಾಂಗ ದಾನ ಮತ್ತು ದೇಹದಾನ ಮಾಹಿತಿ, ರಕ್ತದಾನ ಶಿಬಿರಗಳು ನಡೆದವು. ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ನರಸಿಂಹ ಭಟ್ ಸ್ವಾಗತಿಸಿದರು. ಡಾ.ಅರುಣ್ ಪ್ರಸಾದ್ ವಂದಿಸಿದರು. ಡಾ.ಮಂಜುಳಾ ಶೆಟ್ಟಿ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ