ತಾಯಿ ಎಂದರೆ ಎಂದೆಂದಿಗೂ ಒಂದು ಕುಟುಂಬದಲ್ಲಿ ವಾತ್ಸಲ್ಯವನ್ನು ಹುಟ್ಟಿಸುವವಳು. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ತಾಯಿಯ ಪಾತ್ರ ಬಹಳ ದೊಡ್ಡದಾಗಿರುತ್ತದೆ. ತಾಯಿ ಇಲ್ಲದ ಜೀವನವನ್ನು ಊಹಿಸಲು ಅಸಾಧ್ಯ. ಅವಳು ಅತ್ತೆಯ ಮುದ್ದಿನ ಸೊಸೆಯಾಗಿ, ಗಂಡನ ಪ್ರೀತಿಯ ಮಡದಿಯಾಗಿ, ಮಕ್ಕಳ ಅಕ್ಕರೆಯ ಅಮ್ಮ ನಾಗಿ , ಹೀಗೆ ಹಲವಾರು ಪಾತ್ರಗಳನ್ನ ವಹಿಸುತ್ತಾಳೆ. ತನ್ನ ಅತ್ತೆಗಾಗಲಿ,ಗಂಡನಿಗಾಲಿ ಅಥವಾ ಮಕ್ಕಳಿಗಾಗಲಿ ತನ್ನ ಕೈಲಾಗುವಷ್ಟು ಎಲ್ಲ ಸೇವೆ ಮಾಡುತ್ತಾಳೆ. ಒಂದು ಕುಟುಂಬವನ್ನು ಹೇಗೆ ಸಮಾನವಾಗಿ ಕೊಂಡೊಯ್ಯಬೇಕು ಎಂಬ ಸೂತ್ರ ತಿಳಿದಿರುವುದು ಒಂದು ತಾಯಿಗೆ ಮಾತ್ರ. ತನ್ನವರಿಂದಲೇ ತನಗೆ ಎಷ್ಟೇ ನೋವಾದರೂ ಅದನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು, ತನ್ನಿಂದ ತನ್ನ ಮನೆಯವರಿಗೆ ನೋವಾಗಬಾರದು ಎಂಬ ಕಾಳಜಿಯಿಂದ ಅದನ್ನು ತನ್ನ ಮನಸ್ಸಿನಲ್ಲಿಯೆ ಇಟ್ಟುಕೊಂಡು ಕೊರಗುತ್ತಾಳೆ.
ಒಂದು ಹೆಣ್ಣು ಕಷ್ಟದಿಂದಲೇ ನಡೆದು ಬಂದಿರುತ್ತಾಳೆ. ಅದರಲ್ಲೂ ಮದುವೆಯಾದ ಮೇಲೆ ಇಡೀ ಕುಟುಂಬದ ಜವಾಬ್ದಾರಿಯು ಅವಳ ಹೆಗಲ ಮೇಲೆ ಬೀಳುತ್ತದೆ. ಹೊಸ ಜಾಗ,ಹೊಸ ಜನಗಳಿದ್ದರೂ ಅವಳು ಯಾವುದಕ್ಕೂ ಕುಗ್ಗದೇ ಅವರನ್ನೆಲ್ಲ ಹೇಗೆ ಸಮಾನವಾಗಿ ಕೊಂಡೋಯ್ಯವುದು ಎಂಬುವುದು ತಿಳಿಯುತ್ತಾಳೆ. ತನ್ನ ಗಂಡನ ಮನೆಯವರು ಎಷ್ಟೇ ಹೀಯಾಳಿಸಿದರು, ತನ್ನ ತವರು ಮನೆಗೆ ತಿಳಿಸದೆ ತನ್ನಿಂದಾಗುವಷ್ಟು ನೋವನ್ನು ಸಹಿಸುತ್ತಾಳೆ.
ಒಂದು ಹೆಣ್ಣು ಪರಿಪೂರ್ಣವಾಗುವುದು ತಾಯ್ತನದಿಂದ ಮಾತ್ರ ಎಂಬ ಮಾತಿದೆ, ಅವಳು ತನ್ನ ಮಗುವಿನ ಆಗಮನಕ್ಕಾಗಿ ಒಂಬತ್ತು ತಿಂಗಳು ಎಷ್ಟೆ ಕಷ್ಟ ಬಂದರೂ ಅದನ್ನು ಲೆಕ್ಕಿಸದೆ ಮಗುವಿನ ಆರೋಗ್ಯದ ಕಡೆ ಅವಳ ಗಮನ ಕಾದಿರುತ್ತದೆ. ಬರಿ ಒಂಬತ್ತು ತಿಂಗಳು ಮಾತ್ರ ಅವಳ ಕಾಳಜಿಯಲ್ಲ, ಅವಳ ಕೊನೆ ಉಸಿರು ಇರುವವರೆಗೂ ಅವಳಿಗೆ ತನ್ನ ಮಗುವಿನ ಮೇಲೆ ಅತೀಯಾದ ಪ್ರೀತಿ, ಕಾಳಜಿ ಇದ್ದೇ ಇರುತ್ತದೆ. ತಾಯಿ ತನ್ನವರ ಕಷ್ಟಗಳಿಗೆ ತಡೆಗೋಡೆಯಾಗಿ ನಿಂತು ಕಷ್ಟಗಳು ಬರದಂತೆ ಅವರನ್ನು ರಕ್ಷಿಸುತ್ತಾಳೆ.ತನಗಲ್ಲದೆ ತನ್ನವರಿಗೋಸ್ಕರ ಸಾಗಿಸುವ ಅವಳ ಜೀವನವನ್ನು ಕೇಳುವವರು ಯಾರು ಇಲ್ಲ. ಹಗಲು, ರಾತ್ರಿಗಲೆನ್ನದೆ ತನ್ನ ಮನೆ ಮಕ್ಕಳ ಸಂತೋಷಕ್ಕಾಗಿ ದುಡಿಯುವ ಆ ನಲ್ಮೆಯ ಜೀವದ ಬಗ್ಗೆ ಏಕೆ ಯಾರು ಗಮನ ಹರಿಸುತ್ತಿಲ್ಲಾ? ಅವಳ ನಿಸ್ವಾರ್ಥ ಪ್ರೀತಿ, ಕಾಳಜಿಗಳನ್ನು ಹಿಂದಿರುಗಿಸಲು ನಮ್ಮಿಂದ ಸಾಧ್ಯವೇ?
ತಾಯಿಯನ್ನು ಬರಿ ನಮ್ಮ ಕೆಲಸಗಳಿಗೆ ಬೇಕಾದ ವಸ್ತುವಂತೆ ಉಪಯೋಗಿಸುವುದಲ್ಲ, ಅವಳು ನಮಗೆ ನೀಡುವಂತಹ ಅಪಾರವಾದ ಪ್ರೀತಿ, ಕಾಳಜಿಯ ಋಣ ತೀರಿಸಲು ನಮಗೆ ಸಾಧ್ಯವಿಲ್ಲ, ಈಗಿನ ಕಾಲದ ಮಕ್ಕಳಿಗೆ ತಾಯಿಯ ಮೇಲೆಯಿರುವ ಪ್ರೀತಿ, ಗೌರವ ದಿನೇ ದಿನೇ ಕಡಿಮೆಯಾಗುತ್ತಿದೆ . ತಾಯಿಯ ಆರೋಗ್ಯ ಕ್ಷೇಮ ವಿಚಾರಿಸಲು ಕೂಡ ಬರುವುದಿಲ್ಲ. ತನ್ನ ಹೆತ್ತ ತಾಯಿಯನ್ನು ಕೊಲ್ಲುವಷ್ಟು ಕೆಟ್ಟ ಮನಸ್ಸಿನ ದುಷ್ಟ ಮಕ್ಕಳು ಕೂಡ ನಮ್ಮ ಪ್ರಪಂಚದಲ್ಲಿದ್ದಾರೆ ಎಂಬುದು ವಿಪರ್ಯಾಸ . ತನ್ನವರಿಗೇನೆ ತೊಂದರೆಯಾದರು ಮೊದಲು ಓಡಿ ಬರುವುದೇ ತಾಯಿ. ಆದರೆ ಅದೇ ತಾಯಿಯ ಆರೋಗ್ಯದಲ್ಲಿ ಏರುಪೆರಾದರೂ ಅವಳನ್ನ ನೋಡುವವರು ಯಾರು ಇಲ್ಲ ಎಂದರೆ ಹೀಗೆ... ತನಗಲ್ಲದೆ ತನವರಿಗೋಸ್ಕರ ತನ್ನ ಈಡೀ ಜೀವನವನ್ನು ನಡೆಸಿದ ಆ ಮಹಾತಾಯಿಯ ಪ್ರೀತಿ ಅರ್ಥವಾಗುದು ಯಾವಾಗ? ನಾವು ಎಂದಿಗೂ ನಮಗಾಗಿ ಬದುಕು ನಡೆಸಿದ ನಮ್ಮ ತಾಯಿಯನ್ನು ಯಾವುದೇ ಸಂಧರ್ಭದಲ್ಲೂ ಬಿಟ್ಟು ಕೊಡಬಾರದು, ಅವಳ ಜೊತೆ ಜೊತೆಗೆ ಅವಳಿಗೆ ಪ್ರೀತಿ, ಕಾಳಜಿ ನೀಡುತ್ತಾ ಅವಳ ಮುಖದಲ್ಲಿ ನಗುವನ್ನು ಚೆಲ್ಲಿಸುತ್ತಾ ಸಾಗಬೇಕು. ಅವಳು ನಮಗಾಗಿ ಪಟ್ಟಕಷ್ಟಗಳನ್ನು ನೆನೆದು ಇನ್ನು ಉಳಿದಿರಿವ ಜೀವನದಲ್ಲಾದರೂ ಅವಳನ್ನು ಮಹಾರಾಣಿಯಾಗಿಯಂತೆ ನೋಡಿಕೊಂಡು ನಮ್ಮ ಜೀವನವನ್ನು ಹಸನಾಗಿಸಬೇಕು.
ತಾಯಿಗಿಂತ ಮಿಗಿಲಾದ ದೇವರು ಬೇರೆ ಯಾರು ಇಲ್ಲವೆಂದು ಪ್ರತಿಯೊಬ್ಬರೂ ಅರಿಯಬೇಕು. ತಾಯಿಯ ಸ್ಥಾನವನ್ನು ಮತ್ಯಾರಿಂದಲೂ ನೀಡಲು ಸಾಧ್ಯವಿಲ್ಲ ಎಂಬ ಮಾತನ್ನು ಸತ್ಯವನ್ನು ತಿಳಿದು ಅವಳನ್ನು ಗೌರವದಿಂದ ಕಾಣೋಣ.
-ಆಶ್ರಿತ
ಪ್ರಥಮ ಬಿಎ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ