ಮದ್ಯವ್ಯಸನದಿಂದ ಮಾನಸಿಕ ವಿಹ್ವಲತೆ: ವಿವೇಕ್ ವಿನ್ಸೆಂಟ್ ಪಾಯ್ಸ್

Upayuktha
0



ಉಜಿರೆ: ಮದ್ಯವ್ಯಸನದಿಂದ ಮಾನಸಿಕ ವಿಹ್ವಲತೆ ಸೃಷ್ಟಿಯಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್'ನ ಪ್ರಾದೇಶಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯ್ಸ್  ತಿಳಿಸಿದರು.



ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 76ನೇ ಜನ್ಮ ದಿನಾಚರಣೆಯ ಪ್ರಯುಕ್ತ ಶನಿವಾರ ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು 'ಸ್ವಾಸ್ಥ್ಯ ಸಂಕಲ್ಪ' ಕುರಿತು ಮಾತನಾಡಿದರು.



ಮಾನಸಿಕ ರೋಗವೋ ಅಥವಾ ಮಾನಸಿಕ ರೋಗ ಮದ್ಯಪಾನಕ್ಕೆ ಕಾರಣವೋ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಮದ್ಯಪಾನ ಮತ್ತು ಮಾದಕ ವಸ್ತುಗಳ ಚಟ ದೊಡ್ಡ ರೋಗ. ದುಶ್ಚಟಗಳನ್ನು ನಮ್ಮನ್ನು ಮಸಣಕ್ಕೆ ದೂಡುತ್ತವೆ. ಒಂದು ಸಿಗರೇಟು ಜೀವನವನ್ನೇ ಕಿತ್ತುಕೊಳ್ಳಬಹುದು. ಕೊಟ್ಟಿದ್ದೆಲ್ಲವನ್ನೂ ಸ್ವೀಕರಿಸುವ ಶರೀರವು ಕಾರ್ಖಾನೆಯಿದ್ದಂತೆ. ಆದ್ದರಿಂದ ಒಳ್ಳೆಯ ಆಹಾರ ಕ್ರಮ ರೂಢಿಸಿಕೊಳ್ಳಿ ಎಂದು ಕಿವಿ ಮಾತುಗಳನ್ನಾಡಿದರು.



ಕೆಟ್ಟ ಮೇಲೆ ಬುದ್ಧಿ ಬಂದರೂ ಕೆಟ್ಟವರಾಗಿಯೇ ಉಳಿಯುತ್ತಾರೆ. ಸಹವಾಸ ದೋಷ, ಒತ್ತಡ, ಕುತೂಹಲ ಇವೆಲ್ಲವೂ ದುಶ್ಚಟಗಳಿಗೆ ದಾರಿ ಮಾಡಿಕೊಡುತ್ತವೆ. ದಾರಿ ತಪ್ಪಿಸುವವರು ಹಲವರಿದ್ದರೂ ದಾರಿ ತೋರುವವರು ಕೆಲವರು ಮಾತ್ರ. ಆದ್ದರಿಂದ ಜಾಗರೂಕರಾಗಿ ದುಶ್ಚಟಗಳಿಂದ ದೂರವಿರಿ ಎಂದರು.



ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ್ ಪಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸಮಾಜಮುಖಿ ಕೆಲಸಗಳ ಕುರಿತು ತಿಳಿಸುವ ಉದ್ದೇಶದಿಂದ ಜನ್ಮದಿನವನ್ನು ಆಚರಿಸಲಾಗುತ್ತಿದೆ ಎಂದರು.



ಸಮಾಜ ಕಾರ್ಯ ವಿಭಾಗದ ಸಹಾಯಕ ಅಧ್ಯಾಪಕಿ ಡಾ. ಧನೇಶ್ವರೀ ಸ್ವಾಗತಿಸಿ, ವಿಭಾಗದ ಮುಖ್ಯಸ್ಥ ಡಾ. ರವಿಶಂಕರ್ ಕೆ. ಆರ್ ವಂದಿಸಿದರು. ವಿದ್ಯಾರ್ಥಿಗಳಾದ ರವೀಂದ್ರ ದೇವಾಡಿಗ ಮತ್ತು ತೇಜಸ್ವಿನಿ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top