ಸುರತ್ಕಲ್: ಪ್ರಸಕ್ತ ಸಂದರ್ಭದಲ್ಲಿ ನಿರಂತರ ವೈದ್ಯಕೀಯ ತಪಾಸಣೆಯ ಮೂಲಕ ಆರೋಗ್ಯ ಕ್ಷಮತೆಯನ್ನು ಕಾಪಾಡಿಕೊಳ್ಳಬೇಕೆಂದು ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಹಿರಿಯ ಅಧಿಕಾರಿ ಹಬರ್ಟ್ ಮಾರಿಯಾ ಪಿರೇರಾ ನುಡಿದರು.
ಅವರು ಸುರತ್ಕಲ್ ರೋಟರಿ ಕ್ಲಬ್, ಇನ್ನರ್‍ವೀಲ್ ಕ್ಲಬ್ ಮತ್ತು ಗೋವಿಂದ ದಾಸ ಕಾಲೇಜಿನ ಯುವ ರೆಡ್‍ಕ್ರಾಸ್ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶಗಳ ಸಹಭಾಗಿತ್ವದಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಡಾ.ಇಶಾ ಎಂ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ರೋಟರಿ ಕ್ಲಬ್ ಸುರತ್ಕಲ್‍ನ ಅಧ್ಯಕ್ಷ ಯೋಗೀಶ್ ಕುಳಾಯಿ ಶುಭ ಹಾರೈಸಿದರು. ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ರೋಟರಿ ಕ್ಲಬ್‍ನ ಕಾರ್ಯದರ್ಶಿ ರಮೇಶ್ ರಾವ್ ಎಂ. ಸ್ವಾಗತಿಸಿದರು. ಇನ್ನರ್‍ವೀಲ್ ಕ್ಲಬ್ ಸುರತ್ಕಲ್‍ನ ಅಧ್ಯಕ್ಷೆ ಸಾವಿತ್ರಿ ರಮೇಶ್ ಭಟ್ ವಂದಿಸಿದರು. ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪಪ್ರಾಂಶುಪಾಲ ರಮೇಶ್ ಭಟ್ ಎಸ್.ಜಿ., ಯುವ ರೆಡ್‍ಕ್ರಾಸ್‍ನ ಸಂಯೋಜಕರಾದ ಪೂರ್ಣಿಮಾ ಎಂ. ಗೋಖಲೆ, ಅಶ್ವಿನ್ ಎಂ, ಸುರತ್ಕಲ್ ರೋಟರಿ ಕ್ಲಬ್‍ನ ನಿರ್ದೇಶಕ ಮೋಹನ್ ರಾವ್, ಇನ್ನರ್‍ವೀಲ್ ಕ್ಲಬ್‍ನ ಕಾರ್ಯದರ್ಶಿ ಮಾಲತಿ ಸಚ್ಚಿದಾನಂದ, ಶೈಲಾ ಮೋಹನ್, ಶುಭಾ ಜಗದೀಶ್ ಉಪಸ್ಥಿತರಿದ್ದರು. ಕೆ.ಎಂ.ಸಿ. ವೈದ್ಯರಾದ ಡಾ. ಶ್ರೇಯಾ, ಡಾ. ಅಂಕುರ್, ಡಾ. ಸೋನಾಲಿ, ಡಾ. ಅಲ್ಯೂ, ಡಾ.ಜೋವನಾ, ಡಾ. ಲಕ್ಷ್ಮಿಪ್ರಿಯಾ, ಡಾ. ಶುಭಾಂಗಿ, ಡಾ. ದಿಯಾ ಶಿಬಿರ ನಡೆಸಿಕೊಟ್ಟರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ