ಮಂಗಳೂರು: ಕೆನರಾ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೊಡಿಯಾಲ್ ಬೈಲ್ ಇದರ ಹಿರಿಯ ಪ್ರಬಂಧಕರಾಗಿರುವ ಚೇತನ್ ಕುಮಾರ್ ಅವರು ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದು, ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಂದುಗೂಡಿಸುವ ಕನಸು ಕಂಡ ಹಿರಿಯ ಚೇತನರನ್ನು ಸ್ಮರಿಸಿಕೊಂಡರು.
ಭಾಷಾಭಿಮಾನವಿದ್ದರೆ ಮಾತ್ರ ನಮ್ಮ ಅಸ್ತಿತ್ವಕ್ಕೆ ಬೆಲೆ ಇರುವುದು. ಅತ್ಯಂತ ಪ್ರಾಚೀನ ಭಾಷೆಯಾದ ಕನ್ನಡಕ್ಕೆ ಉಳಿಯುವ ಸಾಮರ್ಥ್ಯವಿದೆ ಎಂದರು. ಕನ್ನಡ ಮಾಧ್ಯಮದಲ್ಲಿ ಓದಿದ ತಮ್ಮ ವಿದ್ಯಾರ್ಥಿ ದೆಸೆಯನ್ನು ನೆನಪಿಸಿಕೊಂಡ ಅವರು ಸಮಯ ಹಾಗೂ ಹಣದ ಸದುಪಯೋಗದ ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲೆ ಪ್ರೇಮಲತಾ ವಿ ಅಧ್ಯಕ್ಷತೆ ವಹಿಸಿದ್ದು ನಮ್ಮ ನಾಡು ನುಡಿಯ ಬಗ್ಗೆ ಅಭಿಮಾನ ಇರಬೇಕೆಂದರು. ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಅನಿಲ ಅವರು ಮಾತನಾಡಿ ಭಾಷೆಯನ್ನು ಕಲಿಯಲು ನಿರಂತರ ಪ್ರಯತ್ನ ಇರಬೇಕು ಮಾತೃ ಭಾಷೆಯನ್ನು ಮುಖ್ಯವಾಗಿ ಮನೆಯಲ್ಲಿ ಬಳಸುವ ಮೂಲಕ ಭಾಷೆಯನ್ನು ಗಟ್ಟಿಗೊಳಿಸಬಹುದು ಎಂದರು.
ಆಡಳಿತ ಅಧಿಕಾರಿ ಡಾ. ದೀಪ್ತಿ ನಾಯಕ್ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಶ್ರೀಮತಿ ವಾಣಿ ಯು ಎಸ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಶೈಲಜಾ ಪುದುಕೋಳಿ ವಂದಿಸಿದರು. ಎಂ.ಕಾಂ ವಿದ್ಯಾರ್ಥಿ ಪರಶುರಾಮ ಯು ನಿರೂಪಿಸಿದರು. ವಿದ್ಯಾರ್ಥಿಗಳಾದ ಅಭಿಷೇಕ್ ಪಾಟೀಲ್, ಅನಂತ ಕೃಷ್ಣ, ಶ್ರಾವ್ಯ ಭಕ್ತ, ಕು. ಅಮೃತ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಿಂದ ಕನ್ನಡ ಗೀತ ಗಾಯನ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


