ಮಹಾಬಲ ಭಟ್ಟರಿಗೆ ಸಂಸ್ಕೃತ ಭಾಷಾ ಪ್ರಸಾರ ಪುರಸ್ಕಾರ

Upayuktha
0

ಪಣಜಿ: ಮುಂಬಯಿ ಮಹಾನಗರದ ಮುಳುಂಡದಲ್ಲಿರುವ ಮಹಾರಾಷ್ಟ್ರ ಸೇವಾ ಸಂಘ ದಿವಂಗತ ಉದ್ಧವರಾವ್ ತ್ರಿವಿಕ್ರಮ ಆಠಲೆ ಸ್ಮರಣಾರ್ಥ ಪ್ರತಿವರ್ಷ ನೀಡುವ ಸಂಸ್ಕೃತ ಭಾಷಾ ಪ್ರಸಾರ ಪುರಸ್ಕಾರ ಈ ವರ್ಷ ಗೋವಾದ ಸೇಂಟ್ ಝೇವಿಯರ್ಸ್ ಉಚ್ಚ ಮಾಧ್ಯಮಿಕ ವಿದ್ಯಾಲಯದ ಅಧ್ಯಾಪಕ ಮಹಾಬಲ ಭಟ್ಟ ಅವರಿಗೆ ಲಭಿಸಿದೆ.


ಪ್ರಶಸ್ತಿಯು ಅಭಿನಂದನಾ ಪತ್ರ, ಫಲಕ ಹಾಗೂ ರೂ.21,000 ನಗದನ್ನು ಒಳಗೊಂಡಿದೆ. ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಂಬಯಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಡಾ. ಲಲಿತಾ ನಾಮಜೋಶಿ ಗಣ್ಯರ ಸಮ್ಮುಖದಲ್ಲಿ ಮಹಾಬಲ ಭಟ್ ರವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಸಂಘದ ಅಧ್ಯಕ್ಷ ಚಂದ್ರಶೇಖರ ವಝೆ, ಖ್ಯಾತ ಲೇಖಕ ಪ್ರಭಾಕರ ಭಾತಖಂಡೆ, ಪ್ರಸಾದ ಗೋಡ್ಸೆ ಹಾಗೂ ಅದಿತಿ ಮಾಧವನ್ ವೇದಿಕೆಯಲ್ಲಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top