ರಾಷ್ಟ್ರೀಯತೆ ಮೈಗೂಡಿಸಿಕೊಳ್ಳದ ಜಮೀರ್ ಸಂವಿಧಾನಕ್ಕೂ ಬೆಲೆ ನೀಡದ ಸಚಿವ: ಡಾ.ಭರತ್ ಶೆಟ್ಟಿ ವೈ

Upayuktha
0


ಮಂಗಳೂರು: ಎಪಿಜೆ ಅಬ್ದುಲ್ ಕಲಾಂ ಅವರಂತಹ ಶ್ರೇಷ್ಟರನ್ನು ರಾಷ್ಟ್ರಪತಿ ಮಾಡಿದ ಬಿಜೆಪಿ, ಸಂವಿಧಾನಾತ್ಮಕ ಹುದ್ದೆಯನ್ನು ಹೊಂದಿರುವ ಶಾಸಕ ಯು.ಟಿ ಖಾದರ್ ಅವರಿಗೂ, ಭಾರತೀಯ ಜನತಾ ಪಾರ್ಟಿ ಗೌರವವನ್ನು ಕೊಡುತ್ತದೆ. ಜಾತಿ ಮತ ಭೇದವನ್ನು  ಪರಿಗಣಿಸಿಲ್ಲ. ಕಾಂಗ್ರೆಸ್‌ನ ವಲಸೆ ನಾಯಕ  ಸಚಿವ  ಜಮೀರ್ ಅಹ್ಮದ್ ಸದಾ ತನ್ನ ಕೋಮಿನ ಜನರನ್ನು ಹಿಂದುಗಳ ವಿರುದ್ಧ ಎತ್ತಿಕಟ್ಟಿ   ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೋಮುವಾದಿ ಎಂದು ಬಹಿರಂಗವಾಗಿದೆ ಎಂದು ಡಾ. ಭರತ್ ಶೆಟ್ಟಿ ಟೀಕಿಸಿದ್ದಾರೆ.


ಬಿಜೆಪಿ‌ಯು ಶಾನ್ವಾಝ್, ಅಬ್ಬಾಸ್ ನಕ್ವಿ‌ ಅವರಂತಹವರಿಗೆ ಸಚಿವ ಸ್ಥಾನ ನೀಡಿ ಗೌರವಿಸಿದೆ. ಅವರೆಲ್ಲಾ ದೇಶದ ಸಂವಿಧಾನ, ರಾಷ್ಟ್ರೀಯತೆಯಲ್ಲಿ ನಂಬಿಕೆಯುಳ್ಳ ರಾಷ್ಟ್ರವಾದಿ ಚಿಂತಕರು, ನಿಮ್ಮಂತೆ ಜಾತಿ ಓಲೈಕೆಯ ಸಂಕುಚಿತ ಮನಸ್ಸಿನ ನಾಯಕರಲ್ಲ. ರಾಷ್ಟ್ರೀಯತೆ ಏನೆಂಬುದೇ ನಿಮಗೆ ತಿಳಿದಿಲ್ಲ ಎಂದು ಡಾ.ಭರತ್ ಶೆಟ್ಟಿ ವೈ ತಿರುಗೇಟು ನೀಡಿದ್ದಾರೆ.


ಆದರೆ ತೆಲಂಗಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ಅತಿಯಾದ ಮುಸ್ಲಿಂ ಒಲೈಕೆಗೆ ಮುಂದಾಗಿರುವ ಜಮೀರ್ ಅಹ್ಮದ್ ಪ್ರಚಾರ ಬದಲು ತಮ್ಮ ಜಾತಿಯೇ ಮೇಲು ಎಂದು ಬಿಂಬಿಸುವ ಯತ್ನ ನಡೆಸಿದ್ದಾರೆ. ಚಾಮರಾಜಪೇಟೆ, ಹುಬ್ಬಳ್ಳಿ ಮೈದಾನದ ಗಣೇಶೋತ್ಸವ ವಿವಾದದ ತುಪ್ಪ ಸುರಿದ, ಟಿಪ್ಪು ಜಯಂತಿಗೆ ಕುಮ್ಮಕ್ಕು, ಅಪರಾಧ ಕೃತ್ಯ ನಡೆಸಿದವರಿಗೆ ಬೆಂಬಲ ಇಂತಹ ಕೆಲಸ ಕಾರ್ಯಗಳಿಗೆ ಒತ್ತು ನೀಡುವ ಜಮೀರ್ ಅಹ್ಮದ್‌ರಿಂದ ಬೇರೆ ಏನು ನಿರೀಕ್ಷಿಸಲು ಸಾಧ್ಯವಿಲ್ಲ. ಬಿಜೆಪಿ ಕೋಮುವಾದಿ ಪಕ್ಷ ಎಂದು ಹೇಳಿಕೆ ಕೊಡುವ ಕಾಂಗ್ರೆಸ್ ನಾಯಕರು ತಮ್ಮ ಪಕ್ಷವೇ ಹೆಚ್ಚು ಕೋಮುವಾದಿ ನಾಯಕರನ್ನು ಹೊಂದಿದೆ ಎಂಬುದನ್ನು ಒಪ್ಪಿಕೊಳ್ಳುವ ಕಾಲ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top