ಭಾಷೆಗಳ ಅಭಿವೃದ್ಧಿಯಲ್ಲಿ ಭಾಷಾಭಿಮಾನಿಯ ಪಾತ್ರ

Upayuktha
0

ಭಾಷೆಗಳು ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗ.ಭಾಷೆಗಳೇ ಬದುಕಿಗೆ ಜೀವನಾಡಿ,ಸಂವಹನ ನಡೆಸುವ ಏಕೈಕ ಮಾಧ್ಯಮ.ಭಾಷೆಗಳು ಕಾಲದಿಂದ ಕಾಲಕ್ಕೆ ತಮ್ಮದೇ ಆದ ಪಥವನ್ನು ಬದಲಿಸುತ್ತ,ವ್ಯಾಪ್ತಿಯನು ವಿಸ್ತರಿಸುತ್ತ ಆಧುನಿಕತೆಗೆ ತಕ್ಕಂತೆ ಭಾಷೆಗಳು ರೂಪವನ್ನು ಧರಿಸುತ್ತಿವೆ.ದೇಶದ ಅಭಿವೃದ್ಧಿಯಲ್ಲಿ ವ್ಯಕ್ತಿಯ ಪಾತ್ರವೂ ಎಷ್ಟು ಮುಖ್ಯವೋ ಭಾಷೆಗಳ ಅಭಿವೃದ್ಧಿಯಲ್ಲಿ ಭಾಷಾಭಿಮಾನಿಗಳ ಪಾತ್ರ ಅಷ್ಟೇ ಮುಖ್ಯ.


ಭಾಷೆಗಳ ಅಭಿವೃದ್ಧಿ ಎಂದರೆ ಭಾಷೆಗಳು ಕಾಲಕ್ಕೆ ಅನುಗುಣವಾಗಿ ರೂಪುರೇಷೆ ವೈವಿಧ್ಯಮಯ ತಂತ್ರಜ್ಞಾನದಡಿಯಲಿ ಬಳಕೆಯಾಗುತ ಕಾಲಕ್ಕೆ ತಕ್ಕಂತೆ ತನ್ನ ಕೀರ್ತಿಯನ್ನು ಹೆಚ್ಚಿಸಿಕೊಳ್ಳುವುದು ಎಂದರ್ಥ.ಪ್ರತಿಯೊಬ್ಬರಿಗೂ ತಮ್ಮದೇ ಆದ ಹೆತ್ತ ತಾಯನಾಡಿನ ಭಾಷೆಯ ಬಗ್ಗೆ ತುಂಬಾ ಅಭಿಮಾನವಿರುತ್ತದೆ.ಅಲ್ಲದೆ ಅದರ ಬಗ್ಗೆ ತಿಳುವಳಿಕೆಯು ಇರುತ್ತದೆ.ಅಲ್ಲದೆ ಯಾವ ರೀತಿಯಲ್ಲಿ ಪದ ಪ್ರಯೋಗ ಮಾಡಬೇಕೆಂಬ ಜ್ಞಾನವು ಸದಾ ಇರುತ್ತದೆ.


ಭಾಷಾಭಿಮಾನಿಗೆ ನನ್ನ ಭಾಷೆಯು ಎಂಬ ಗರ್ವವೂ ಇರುತ್ತದೆ.ತನ್ನನ್ನು ಪೊರೆಯುವ ಜೀವದ ಭಾಷೆ ಎಂಬ ಅಭಿಲಾಷೆ, ಅಲ್ಲದೆ ಬಾಳಿಗೆ ಉಸಿರಾಗಿರುವ ಭಾಷೆ ಎಂಬುದು ಪ್ರತಿಯೊಬ್ಬರಲ್ಲಿಯೂ ಒಡಮೂಡಿರುತ್ತದೆ.ತನ್ನ ಅಭಿಪ್ರಾಯ ಯೋಚನೆಗಳನ್ನು ಸ್ವತಂತ್ರವಾಗಿ ಸರಳವಾಗಿ ವ್ಯಕ್ತಪಡಿಸಲು ಪ್ರಮುಖವಾದದ್ದು ನಿರ್ದಿಷ್ಟವಾದ ಭಾಷೆ ಉದಾ:ಕರ್ನಾಟಕದ ಜನತೆಯ ಭಾಷೆ ಕನ್ನಡ, ತಮಿಳುನಾಡಿನ ಜನರ ಭಾಷೆ ತಮಿಳು ಹೀಗೆ ಪ್ರತಿಯೊಂದು ರಾಜ್ಯವು ತಮ್ಮದೇ ಆದ ನಿರ್ದಿಷ್ಟ ಭಾಷೆಯನ್ನಾಗಿ ಅಳವಡಿಸಿಕೊಂಡಿವೆ.


ಯಾವುದೇ ಭಾಷೆಯು ಸ್ವಾಸ್ಥ ರೀತಿಯಲ್ಲಿ ಅಭಿವೃದ್ಧಿಯಾಗಬೇಕಾದರೆ ಭಾಷಾಭಿಮಾನಿಗಳು ಪ್ರತಿನಿತ್ಯ ಜೀವನದಲ್ಲಿ, ವ್ಯವಹಾರದಲ್ಲಿ ಅಷ್ಟೇ ಅಲ್ಲದೆ ಉದ್ಯೋಗದ ಸ್ಥಳಗಳಲ್ಲಿ ತಮ್ಮ ತಮ್ಮ ಭಾಷೆಗಳನು ಮಾತನಾಡುತ್ತಾ ಇತರರಲ್ಲಿ ಅದರ ವ್ಯಾಮೋಹವನ್ನು ಬಿತ್ತಬೇಕು ಆದರೆ ಅದು ಒಳ್ಳೆಯ ಮಾರ್ಗದಿ ಸಾಗಬೇಕೆ ಹೊರತು ಸಂಘರ್ಷಕ್ಕೆ ಕಾರಣವಾಗಬಾರದು.ಪರಸ್ಪರ ಒಬ್ಬರಿಗೊಬ್ಬರು ಭಾಷೆಗಳನ್ನು ತಿಳಿಯುತ ತಮ್ಮ ಭಾಷೆಗಳ ಕೀರ್ತಿಯನ್ನು ಎತ್ತಿ ಹಿಡಿಯಬಹುದು.ಹಾಗೂ ಇತರರನ್ನು ಭಾಷೆ ಅಯಸ್ಕಾಂತದಂತೆ ಸೆಳೆಯಬೇಕೆಂದರೆ ಆ ಭಾಷೆಯನ್ನು ವ್ಯಕ್ತಪಡಿಸುವ ಶೈಲಿಯು ಬಹಳ ಮುಖ್ಯ.ಹಾಗಾಗಿ ಭಾಷಾಭಿಮಾನಿ ಭಾಷೆಯನ್ನು ಬಳಸುವ ರೀತಿಯು ಸ್ಥಿತಿಗತಿಯನ್ನು  ತಿಳಿಸುತ್ತದೆ.


ಭಾಷೆಗಳ ಅಭಿವೃದ್ಧಿಯಲ್ಲಿ ಭಾಷಾಭಿಮಾನಿಯ ಪಾತ್ರವನ್ನು ಅತ್ಯಂತ ಸರಳವಾಗಿ ಈ ಕೆಳಗಿನ ಅಂಶಗಳಿಂದ ತಿಳಿಯಬಹುದು

1.ತನ್ನಯ ಭಾಷೆಯ ಬಗ್ಗೆ ಅಪಾರ ಗೌರವವಿರಬೇಕು

2.ಅಭಿಪ್ರಾಯಗಳನ್ನು ವ್ಯಕ್ತಪಡಿಸುವಲ್ಲಿ ತನ್ನ ಭಾಷೆಯನ್ನೇ ಬಳಸಬೇಕು

3.ಮನೆಯಲ್ಲಿ ಸತತವಾಗಿ ಒಂದೇ ಭಾಷೆ ಬಳಸಬೇಕು

4.ಭಾಷೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಆಯೋಜಿಸಬೇಕು

5.ಭಾಷಾವಾರು ಇತಿಹಾಸವನ್ನು ಅರಿತಿರಬೇಕು

6.ದಿನನಿತ್ಯ ವ್ಯವಹಾರದಲ್ಲಿ ಅಳವಡಿಸಿಕೊಳ್ಳುವುದು

7.ಸ್ಪಷ್ಟವಾಗಿ ಭಾಷೆಯ ಜ್ಞಾನವನ್ನು ಅರಿತಿರಬೇಕು

8.ಹೆತ್ತತಾಯಿಯಂತೆ ಭಾಷೆಯನ್ನು ಪ್ರೀತಿಸಬೇಕು

9.ಇತರ ಭಾಷೆಗಳನ್ನು ಅರಿತು ತನ್ನ ಭಾಷೆಯನು ಮರೆಯಬಾರದು

10.ಭಾಷೆಯ ಗಟ್ಟಿತನ,ಅದರ ಉಳಿವಿಗಾಗಿ ಶ್ರಮಿಸಬೇಕು.


ಒಟ್ಟಿನಲ್ಲಿ ಭಾಷೆಯು ಅಭಿವೃದ್ಧಿಯಾಗಬೇಕಾದರೆ ಭಾಷಾಭಿಮಾನಿಯ ಪಾತ್ರವು ಅಗಾಧವಾಗಿದೆ.ಉಳಿಸಿ ಬೆಳೆಸುವುದು ಬಹಳ ಮುಖ್ಯವಾಗಿದೆ.ಪ್ರಸ್ತುತ ದಿನಗಳಲ್ಲಿ  ಇತರ ಭಾಷೆಗಳ ವ್ಯಾಮೋಹದಲ್ಲಿ ಮುಳುಗಿದ ಜನ ತಮ್ಮ ಭಾಷೆಯನ್ನು ತಾವೇ ಮರೆಯುತ್ತಿದ್ದಾರೆ.ಆದ್ದರಿಂದ ಭಾಷೆಗಳನ್ನು ಉಳಿಸಿ ಪೊರೆಯುವಲ್ಲಿ ಭಾಷಾಭಿಮಾನಿಯ ಪಾತ್ರ ಅಗಮ್ಯ.

-ಅವಿನಾಶ ಸೆರೆಮನಿ

                                                                               

                                                                          

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top