ಮಂಗಳೂರು: ಗಂಗಾಧರ್ ಗಾಂಧಿ ಸಾರಥ್ಯದ ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (NSCDF) ಆಶ್ರಯದಲ್ಲಿ ಇಂದು (ನ.5) ಭಾನುವಾರ ಮಂಗಳೂರಿನ ಪುರಭವನದಲ್ಲಿ ಬೆಳಿಗ್ಗೆ 9 ರಿಂದ ರಾತ್ರಿ 9 ರ ತನಕ ಮನ:ಶಾಂತಿಗಾಗಿ ಕನ್ನಡ ಗೀತಗಾಯನ ಕಾರ್ಯಕ್ರಮ ನಡೆಯಲಿದೆ. ಶ್ರೀರಕ್ಷ ಸರ್ಪಂಗಳ, ರಾಣಿ ಪುಷ್ಪಲತಾ ದೇವಿ, ವರ್ಷ, ನೇತ್ರ ಕನ್ನಡದ ಜನಪ್ರಿಯ ಮಾಧುರ್ಯ ಪ್ರಧಾನ ಯುಗಳ ಗೀತೆಗಳಿಗೆ ಗಂಗಾಧರ್ ಗಾಂಧಿಯೊಂದಿಗೆ ಧ್ವನಿಯಾಗಲಿದ್ದಾರೆ.
ನಿರಂತರ 12 ಗಂಟೆಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮವನ್ನು ರೇಷ್ಮಾ ಶೆಟ್ಟಿ ಗೊರೂರು, ಬಬಿತಾ ಲತಿಶ್, ಪ್ರತಿಮಾ ಹಾಸನ್ ಮತ್ತು ರೇಖಾ ಸುದೇಶ್ ರಾವ್ ನಿರ್ವಹಿಸಲಿದ್ದಾರೆ.
ಲೋಕಾಯುಕ್ತ ವಿಶೇಷ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ, ಡಾ. ಸುರೇಶ್ ನೆಗಳಗುಳಿ, ಗಡಿನಾಡ ಕನ್ನಡತಿ ಡಾ. ವಾಣಿಶ್ರೀ ಕಾಸರಗೋಡು, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಯು.ಆರ್. ಶೆಟ್ಟಿ, ಡಾ. ಆನಂದ ಬಂಜನ್, ಲೇಖಕ, ಕವಿ ಶಿವ ಪ್ರಸಾದ್ ಕೊಕ್ಕಡ, ಕವಿ, ಗಾಯಕ ಗುರುಪ್ರಸಾದ್ ಎಂ. ಆರ್., ಸಾಮಾಜಿಕ ಕಾರ್ಯಕರ್ತೆರಾದ ಕೊಡಗಿನ ಬಿ.ಕೆ.ಭಾಗೀರಥಿ, ಮಂಗಳೂರಿನ ಹರಿಣಾಕ್ಷಿ ಮತ್ತು ಛಾಯಾ ಗ್ರಾಹಕ ಸುರೇಂದ್ರ ಕಾರ್ಯಕ್ರಮದಲ್ಲಿ ಇರುತ್ತಾರೆ.
ಇಡೀ ಕಾರ್ಯಕ್ರಮ NSCDF ಉಪಾಧ್ಯಕ್ಷೆ ಮಮತಾ ಕೊತ್ಯನ್ ಮುಂಬಯಿ NSCDF ಪ್ರಧಾನ ಕಾರ್ಯದರ್ಶಿ ದಿನಕರ ಡಿ. ಬಂಗೇರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು NSCDF ಅಧ್ಯಕ್ಷ ಹಾಗೂ ಕಾರ್ಯಕ್ರಮದ ಪ್ರಧಾನ ಗಾಯಕ ಗಂಗಾಧರ್ ಗಾಂಧಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ