ಸ್ವಚ್ಚತೆಯ ಮೂಲಕ ಗ್ರಾ.ಪಂ. ಕಣ್ಣು ತೆರೆಸಿದ ಧ.ಗ್ರಾ. ಯೋಜನೆಯ ಕಲ್ಲಡ್ಕ ಶೌರ್ಯ ವಿಪತ್ತು ತಂಡ

Upayuktha
0


ಕಲ್ಲಡ್ಕ: ಕಾಂಕ್ರೀಟ್ ರಸ್ತೆಯ ಸುತ್ತಮುತ್ತ ಗಿಡಗಳು ಗಂಟೆಗಳು ಬೆಳೆದು ನಿಂತು ಶಾಲಾ ಮಕ್ಕಳು ನಡೆದು ಕೊಂಡು ಹೋಗಲು ಭಯಪಡುತ್ತಿದ್ದ, ನೋಡಲು ಕಾಲು ದಾರಿಯಾಗಿ ಕಾಣುತ್ತಿದ್ದ ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ಪೂಪಾಡಿ ಕಲ್ಲು -  ನಾರಂಕೋಡಿ ರಸ್ಥೆಯ ಎರಡು ಬದಿಯಲ್ಲಿ ಬೆಳೆದ ಗಿಡಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ಶೌರ್ಯ ವಿಪತ್ತು ತಂಡದವರಿಗೆ ಕಡಿದು ಸ್ವಚ್ಚತೆ ಮಾಡಿದರು.



ಈ ಬಗ್ಗೆ ಸ್ಥಳೀಯರು ಅನೇಕ ಬಾರಿ ಪಂಚಾಯತ್ ಗೆ ಮನವಿ ನೀಡಿದರೂ ಸ್ಪಂದಿಸದೆ ಯಾವುದೇ ಕ್ರಮಗೊಂಡಿರಲಿಲ್ಲ. ಕಡೆಗೆ ಸ್ಥಳೀಯರಾದ ಮಹಮ್ಮದ್ ಹಮೀದ್ ಹಾಗೂ ಚರಣ್ ಇವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ಶೌರ್ಯ ವಿಪತ್ತು ತಂಡದವರಿಗೆ ಮನವಿ ನೀಡಿದರು. ತಕ್ಷಣ ಕಾರ್ಯಪ್ರವೃತ್ತರಾದ ಶೌರ್ಯ ತಂಡದವರು ಶ್ರಮದಾನದ ಮೂಲಕ ಈ ಸೇವಾ ಕಾರ್ಯ ನಡೆಸಿದರು.



ಈ ರಸ್ತೆಯ ಒಂದು ಭಾಗವು ಬೋಳಂತೂರು ಗ್ರಾಮಕ್ಕೆ ಸೇರಿದ್ದು ಇನ್ನೊಂದು ಬದಿಯು ಗೋಳ್ತಮಜಲು ಗ್ರಾಮ ಪಂಚಾಯತಿಗೆ ಸೇರಿದ್ದು ಎರಡ್Y ಪಂಚಾಯತಿನವರು ತಮಗೆ ಸಂಬಂಧ ಪಡೆದ ರೀತಿಯಲ್ಲಿ ರಸ್ತೆ ರಿಪೇರಿಗೆ ಮೀನಮೇಷ ಎಣಿಸುತ್ತಿದ್ದರು. ಶೌರ್ಯ ತಂಡದ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.



ಈ ಸ್ವಚ್ಛತಾ ಕಾರ್ಯದಲ್ಲಿ ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷ ತುಳಸಿ ಕೊಳಕೀರು, ಶೌರ್ಯ ವಿಪತ್ತು ತಂಡದ ಅಧ್ಯಕ್ಷ ಮಾಧವ ಸಾಲಿಯಾನ್ ಕುದುರೆಬೆಟ್ಟು, ತಂಡದ ಸಂಯೋಜಕ ವಿದ್ಯಾ, ಕಲ್ಲಡ್ಕ ಒಕ್ಕೂಟ ಸೇವಾ ಪ್ರತಿನಿಧಿ ಗಣೇಶ್, ಶೌರ್ಯ ತಂಡ ಸದಸ್ಯರುಗಳಾದ, ವೆಂಕಪ್ಪ ಜಿ, ಮೌರೀಶ್, ರವಿಚಂದ್ರ ಜೋಗಿ, ರಮೇಶ್ ಕುದ್ರೆಬೆಟ್ಟು, ಸಂತೋಷ್ ಬೊಳ್ಪೋಡಿ, ಚಿನ್ನಾ ಕಲ್ಲಡ್ಕ, ಸತೀಶ್ ಮೇಸ್ತ್ರಿ,ಧನಂಜಯ ಕೊಳಕೀರು, ಸ್ಥಳೀಯರಾದ ಹಮೀದ್, ಚರಣ್ ಮೊದಲಾದವರು ಪಾಲ್ಗೊಂಡಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top