ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

Upayuktha
0

ರಂಗನಾಥಪುರ-ಹರಪನಹಳ್ಳಿ ಕ್ರಾಸ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಡಾಲು ರವಿ, ಉಪಾಧ್ಯಕ್ಷರಾಗಿ ಅರವಿಂದ್ 




ಕೆ.ಆರ್.ಪೇಟೆ: ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ರಂಗನಾಥಪುರ- ಹರಪನಹಳ್ಳಿ ಕ್ರಾಸ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಡಾಲು ರವಿ, ಉಪಾಧ್ಯಕ್ಷರಾಗಿ ಅರವಿಂದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.



ನೂತನವಾಗಿ ಪ್ರಾರಂಭಿಸಲಾಗಿರುವ ರಂಗನಾಥಪುರ-ಹರಪನಹಳ್ಳಿ ಕ್ರಾಸ್ ಪ್ರಾಥಮಿಕ‌ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನವಾಗಿ ಆಡಳಿತ ಮಂಡಳಿಯನ್ನು ಇದೇ ಮೊದಲ ಭಾರಿಗೆ ಅಸ್ತಿತ್ವಕ್ಕೆ ತರಲಾಯಿತು. 


ಅಧ್ಯಕ್ಷರಾಗಿ ಡಾಲು ರವಿ ಮತ್ತು ಉಪಾಧ್ಯಕ್ಷರಾಗಿ ಅರವಿಂದ್ ಅವರನ್ನು ಸಂಘದ ನಿರ್ದೇಶಕರು ಅವಿರೋಧವಾಗಿ ಆಯ್ಕೆ ಮಾಡಿದರು.


ಸಂಘದ ಆವರಣದಲ್ಲಿ  ಬೆಂಬಲಿಗರು ಮತ್ತು ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಸಂಘದ ನೂತನ ಅಧ್ಯಕ್ಷರಾದ ಮನ್ಮುಲ್ ನಿರ್ದೇಶಕ ಕೆ.ರವಿ (ಡಾಲು ರವಿ) ನಾನು ಎರಡನೇ ಬಾರಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾಗಿ ತಾಲೂಕಿನ ಹಾಲು ಉತ್ಪಾದಕರ ಏಳಿಗೆಗೆ ಶ್ರಮಿಸಿದ್ದೇನೆ ಎಂಬುವ ಆತ್ಮವಿಶ್ವಾಸ ನನಗಿದೆ, ಅದೇ ರೀತಿ ನನ್ನ ರಾಜಕೀಯ ಕ್ಷೇತ್ರಕ್ಕೆ ಶಕ್ತಿ ತುಂಬಿದ ರಂಗನಾಥಪುರ ಕ್ರಾಸ್ ಗ್ರಾಮದ ನೂತನ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನನ್ನ ಹೋಬಳಿಯ ಹಿರಿಯ ಮುಖಂಡರು ಹಾಗೂ ಆತ್ಮೀಯರ ಸಹಕಾರದೊಂದಿಗೆ ಅವಿರೋಧವಾಗಿ ಇಂದು ಅಧ್ಯಕ್ಷ ಸ್ಥಾನಕ್ಕೆ ತಾವು ಎಲ್ಲರೂ ಸೇರಿ ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ ಎಂದರು.



ಸಹಕಾರ ಕ್ಷೇತ್ರದಲ್ಲಿ ಮಾತ್ರ ಇಂದಿನಿಂದಲೂ ರಾಜಕೀಯಕ್ಕೆ ಆಸ್ಪದ ನೀಡದೆ ಆ ಮಾದರಿಯಲ್ಲೇ ನನ್ನ ಅಧಿಕಾರದ ಅವಧಿಯಲ್ಲಿ ರಾಜಕೀಯ ಬೆರೆಸದೆ ನೂತನ ಸಂಘದ ಶ್ರೇಯೋಭಿವೃದ್ಧಿಗೆ ನನ್ನೆಲ್ಲಾ ಆಡಳಿತ ಮಂಡಳಿಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೈತರಿಗೆ ಎಲ್ಲಾ ರೀತಿಯಿಂದಲೂ ಸಹಾಯ ಸಹಕಾರ ಕೊಟ್ಟು ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಮತ್ತು ಸರ್ಕಾರ ಕೊಡುತ್ತಿರುವ ಎಲ್ಲಾ ಯೋಜನೆಗಳನ್ನು ರೈತರಿಗೆ ಮುಟ್ಟುವಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ಹರಪನಹಳ್ಳಿ ಕ್ರಾಸ್ ಬಳಿ ಮಾಜಿ ಸ್ಪೀಕರ್ ಕೃಷ್ಣ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.



ಈ ಸಂದರ್ಭದಲ್ಲಿ ಸಂಘದ ನೂತನ ಉಪಾಧ್ಯಕ್ಷ ಅರವಿಂದ್ ನಿರ್ದೇಶಕರಾದ ಗುಂಡೂರಾವ್, ವೆಂಕಟೇಶ್, ಮಂಜೇಗೌಡ, ವೇದಾವತಿ, ಗೀತಾಶ್ರೀಧರ್, ನಾಗೇಶ್, ಗೌಡಮಂಜು, ಜಯಣ್ಣ, ಚಂದ್ರಶೇಖರ್, ಹಿರಿಯ ಮುಖಂಡರಾದ ಹೋಟೆಲ್ ಶಿವಣ್ಣ, ಹಾದನೂರು ಪರಮೇಶ್, ಗ್ರಾ.ಪಂ ಮಾಜಿ ಅಧ್ಯಕ್ಷ ಹುಬ್ಬನಹಳ್ಳಿ ಕುಮಾರಸ್ವಾಮಿ, ಸಂತೆಬಾಚಹಳ್ಳಿ ಮೋಹನ್, ಕೈಗೋನಹಳ್ಳಿ ಕುಮಾರ್, ಸಂತೇಬಾಚಳ್ಳಿ ಕೃಷಿ ಪತ್ತಿನ ಸಹಕಾರ ಸಹಕಾರ ಸಂಘದ ಅಧ್ಯಕ್ಷ ಉದಯಕುಮಾರ್, ಉಪಾಧ್ಯಕ್ಷ ಸುರೇಶ್ ನಿರ್ದೇಶಕರಾದ ಕೃಷ್ಣ, ಅನಿತಾ ಸಣ್ಣನಿಂಗೇಗೌಡ, ಮಹದೇವಪ್ಪ ಚಂದ್ರಶೇಖರ್ ಕುಮಾರಸ್ವಾಮಿ, ಹರೀಶ್, ಸಣ್ಣಪ್ಪ, ಸುಕನ್ಯ ಸೋಮಯ್ಯ, ಮುಖಂಡರಾದ ಪರಮೇಶ್ (ಪಚ್ಚಿ) ಹಡೇನಳ್ಳಿ ಮಹದೇವ್, ಸುರೇಶ್, ಸಂತೆಬಾಚಹಳ್ಳಿ ಹರೀಶ್, ಮಾಳಗೂರು ಜಗದೀಶ್, ಐನೋರಹಳ್ಳಿ ಮಂಜು, ನಾಯಕನ ಹಳ್ಳಿ ಮಂಜುನಾಥ್, ಮಾವಿನಕಟ್ಟೆ ಕೊಪ್ಪಲು ಚೇತನ್, ಗೊರವಿ ಮಂಜೇಗೌಡ, ರಂಗನಾಥಪುರ ಶ್ರೀನಿವಾಸ್, ಅಂಗಡಿ ಕುಮಾರ್, ಗಣೇಶ್, ಬಸ್ ಸಣ್ಣಪ್ಪ, ನಾಯ್ಕನಹಳ್ಳಿ ಕುಮಾರ್, ಮಾಳಗೂರು ಹರೀಶ್, ಸೇರಿದಂತೆ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top