ಮೂಡುಬಿದಿರೆ : ಭಾರತೀಯ ಜೈನ್ ಮಿಲನ್, ಮೂಡುಬಿದಿರೆ ಮತ್ತು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮುಡುಬಿದಿರೆ ತಾಲೂಕು ಘಟಕ ಇವರ ಜಂಟಿ ಸಹಯೋಗದಲ್ಲಿ ಜೈನ್ ಮಿಲನ್ ಇದರ ನವೆಂಬರ ತಿಂಗಳ ಮಾಸಿಕ ಸಭೆಯು ಮೂಡುಬಿದಿರೆ ಜೈನ್ ಮಿಲನ್ ಅಧ್ಯಕ್ಷರಾದ ಆನಡ್ಕ ದಿನೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಮೂಡುಬಿದಿರೆ ಜೈನ ಪ್ರೌಢ ಶಾಲಾ ಸಭಾಂಗಣದಲ್ಲಿ ನ.26ರಂದು ನೆರವೇರಿತು.
ಸಂಪತ್ ಸಾಮ್ರಾಜ್ಯ, ಪುಪ್ಪರಾಜ ಶೆಟ್ಟಿ, ಜಯರಾಜ ಕಂಬಳಿ, ಶ್ವೇತಾ ಜೈನ್, ಮಂಜುಳಾ ಅಭಯಚಂದ್ರ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ.ಸಾ.ಪ.ದ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷರಾದ ಕೆ.ವೇಣುಗೋಪಾಲ ಶೆಟ್ಟಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇದರ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಕುಲಸಚಿವರಾಗಿದ್ದ ಡಾ.ಬಿ.ಪಿ.ಸಂಪತ್ ಕುಮಾರ್ ಅವರು “ಜೈನ ಕವಿಗಳ ಜೀವನದೃಷ್ಟಿ ಎಂಬ ಕುರಿತು ಉಪನ್ಯಾಸ ನೀಡಿದರು. ಜೈನ್ ಮಿಲನ್ ವಲಯ – 8ರ ಜೊತೆ ಕಾರ್ಯದರ್ಶಿ, ನೋಟರಿ ಹಾಗೂ ವಕೀಲರಾದ ಶ್ರೀಮತಿ ಶ್ವೇತಾ ಜೈನ್ ಅವರು ಈ ವರ್ಷದ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರಕ್ಕೆ ಭಾಜನರಾಗಿರುವುದಕ್ಕಾಗಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಅನಂತ ವೀರ ಜೈನ್ ಕಾರ್ಯಕ್ರಮ ನಿರೂಪಿಸಿದರು. ಶಶಿಕಾಂತ ವೈ ಸ್ವಾಗತಿಸಿ ರಾಜೇಶ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ