ಪಣಜಿ: ಕರ್ನಾಟಕ ರಕ್ಷಣಾ ವೇದಿಕೆ ಗೋವಾ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಗೋವಾ ವಾಸ್ಕೊ ರೈಲ್ವೆ ಕಮ್ಯುನಿಟಿ ಹಾಲ್‍ನಲ್ಲಿ ನವೆಂಬರ್ 26 ರಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ "ಹೊರನಾಡು ಗೋವಾ ರಾಜ್ಯೋತ್ಸವ-2023" ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಮಾರಂಭವನ್ನು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ ಸಾವಂತ್ ಉದ್ಘಾಟಿಸಲಿದ್ದಾರೆ. ರಾಜ್ಯಸಭಾ ಸದಸ್ಯ ಸದಾನಂದ ಶೇಟ್ ತಾನಾವಡೆ ಸಾಂಸ್ಕೃತಿಕ ಸಮ್ಮೇಳನ ಉಧ್ಘಾಟಿಸಲಿದ್ದಾರೆ. ಕರ್ನಾಟಜಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಭುವನೇಶ್ವರಿಯ ಭಾವಚಿತ್ರವನ್ನು ಅನಾವರಣಗೊಳಿಸಲಿದ್ದಾರೆ. ವಾಸ್ಕೊ ಮುರಗಾಂವ ಕ್ಷೇತ್ರದ ಶಾಸಕ ಸಂಕಲ್ಪ ಅಮೋಣಕರ್ ರವರು ಸಾಂಸ್ಕøತಿಕ ಸಮಾವೇಶವನ್ನು ಉಧ್ಘಾಟಿಸಲಿದ್ದಾರೆ. ವಾಸ್ಕೊ ಶಾಸಕ ದಾಜಿ ಸಾಲಕರ್ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ದೇವರಹಿಪ್ಪರಗಿ ಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ್ ಸ್ಮರಣಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ದೀ ಪ್ರಾಧಿಕಾರದ ಕಾರ್ಯದರ್ಶಿ ಯಶವಂತಕುಮಾರ್ ಸಮೇಳನಾಧ್ಯಕ್ಷರನ್ನು ಸನ್ಮಾನಿಸುವರು. ವಾಸ್ಕೊ ಎಂಎಂಸಿ ನಗರಸಭೆ ಅಧ್ಯಕ್ಷ ಗಿರೀಶ್ ಬೋರಕರ್ ಕಲಾವಿರನ್ನು ಸನ್ಮಾನಿಸಲಿದ್ದಾರೆ. ಕರ್ನಾಟಕ ರಕ್ಷಣಾವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣಕುಮಾರ್ ಶೆಟ್ಟಿ ಪ್ರವಾಸಿ ತಾಣಗಳ ಮಾಹಿತಿ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಹೆಡ್ಲೆಂಡ್ ಸಡಾದ ಸಮರ್ಥ ದುಂಡೇಶ್ವರ ಯೋಗಾಶ್ರಮದ ಪ್ರಕಾಶ ಮಹಾರಾಜರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ- ಜಿಎಚ್‍ಆರ್‍ಡಿಸಿ ಉಪಾಧ್ಯಕ್ಷ ದೀಪಕ್ ನಾಯ್ಕ, ಚಿಕಲಿ ಪಂಚಾಯಕ ಅಧ್ಯಕ್ಷ ಕಮಲಾಪ್ರಸಾದ ಯಾದವ್, ಸಾಂಕವಾಳ ಪಂಚಾಯತ ಉಪಾಧ್ಯಕ್ಷ ಗಿರೀಶ್ ಪಿಳ್ಳೆ, ಎಂಎಂಸಿ ವಾಸ್ಕೊ ಮಾಜಿ ಉಪಾಧ್ಯಕ್ಷ ಅಮೇಯ ಚೋಪಡೆಕರ್, ಸಾಂಕ್ವಾಳ ಪಂಚಾಯತ ಸದಸ್ಯ ವೆಲೆಂಟೊ ರೋಡ್ರಿಗಸ್, ಎಂಎಂಸಿ ವಾಸ್ಕೊ ಮಾಜಿ ಅಧ್ಯಕ್ಷ ನಂದದೀಪ ರಾವತ್, ಸಮಾಜ ಸೇವಕ ವಿಶಾಲ ನಾಯ್ಕ, ಬಿಜೆಪಿ ಗೋವಾ ಕರ್ನಾಟಕ ಸೆಲ್ ಕನನ್ವೀನರ್ ಮುರಳಿ ಮೋಹನ್ ಶೆಟ್ಟಿ, ಭಾಜಪಾ ದಕ್ಷಿಣ ಭಾರತದ ಅಧ್ಯಕ್ಷ ರಾಜು ನಾಂಬಿಯಾರ್, ಸಮಾಜ ಸೇವಕ ಆರಿಶ್ ಖಾದರ್ ಉಪಸ್ಥಿತರಿರುವರು.
ಗೌರವಾನ್ವಿತ ಅಥಿತಿಗಳಾಗಿ- ವಾಸ್ಕೊ ನಗರಸಭೆ ಸದಸ್ಯ ದಾಮೋದರ ಮಧು ನಾಯ್ಕ, ಸಮಾಜ ಸೇವಕ ಅವಿನಾಶ ನಾಯ್ಕ, ಭಾರತ ಸ್ವಾಭಿಮಾನ ಟ್ರಸ್ಟನ ಸಂರಕ್ಷಕ ಸದಸ್ಯ ರಾಘವ ಶೆಟ್ಟಿ, ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್ ರೆಡ್ಡಿ, ಸಮಾಜ ಶೇವಕ ರಾಜೇಶ್ ಶೆಟ್ಟಿ, ಸಮಾಜ ಸೇವಕ ನವೀನ ಶೆಟ್ಟಿ, ಬಾಳಾಚಾರಿ, ಉಪಸ್ಥಿತರಿರುವರು.
ವಿಶೇಷ ಅತಿಥಿಗಳಾಗಿ- ಸಮಾಜ ಸೇವಕ ಬಾಲನ ಚೋಡಣಕರ್, ಪೊಂಡಾ ಕನ್ನಡ ಸಂಘದ ಅಧ್ಯಕ್ಷ ರತ್ನಾಕರ ಪೂಜಾರಿ, ಉದ್ಯಮಿ ಸದಾಶಿವ ಶೆಟ್ಟಿ, ಗೋವಾ ರಾಜ್ಯ ಎಸ್‍ಸಿ ಎಸ್‍ಟಿ ಅಧ್ಯಕ್ಷ ದೀಪಕ್ ಕಟ್ಟೀಮನಿ, ಸಮಾಜ ಸೇವಕ ದ್ಯಾಮಣ್ಣ ಹರಿಜನ, ಕುಮಾರಸ್ವಾಮಿ ಹಿರೇಮಠ, ಗೋಪಾಲ ಪಲ್ಲಡ ಉಪಸ್ಥಿತರಿರುವರು.
ವಿಶೇಷ ಆಹ್ವಾನಿತರಾಗಿ- ಗೋವಾ ಕನ್ನಡ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ, ಕಾರ್ಯದರ್ಶಿ ಅರುಣಕುಮಾರ್, ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪಡದಯ್ಯ ಹಿರೇಮಠ, ಸಾಖಳಿ ಶಿವಶಕ್ತಿ ಕನ್ನಡ ಸಂಘದ ಅಧ್ಯಕ್ಷ ಶ್ರೀಮಂತರಾವ್ ಗೋಕಾವಿ, ಮಡಗಾಂವ ಮಹಿಳಾ ಮಂಡಳದ ಅಧ್ಯಕ್ಷೆ ಜಯಶ್ರೀ ಹೊಸ್ಮನಿ, ವಾಸ್ಕೊ ಕನ್ನಡ ಸಂಘದ ಅಧ್ಯಕ್ಷ ಬಿ.ಆರ್.ಜಗ್ಗಲ್, ರಾಷ್ಟ್ರೀಯ ವರದಿಗಾರ ಅನೀಲ್ ಸನದಿ, ಕಸಾಪ ಗೋವಾ ರಾಜ್ಯ ಕಾರ್ಯದರ್ಶಿ ಪ್ರಕಾಶ ಭಟ್, ವಾಸ್ಕೊ ಪಂಚಶೀಲ ಬುದ್ಧ ವಿಹಾರದ ಉಪಾಧ್ಯಕ್ಷ ಶಂಕರ ಸತ್ಪಾಲ್, ಶ್ರೀ ಶಿವಶರಣ ಹಡಪದ ಅಪ್ಪಣ್ಣ ಅಭಿವೃದ್ಧಿ ಸೇವಾ ಸಂಘದ ಸಂಗಮೇಶ ಹಡಪದ, ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ದಿನ್ನಿ, ಪರ್ವರಿ ಕನ್ನಡ ಸಂಘದ ಅಧ್ಯಕ್ಷ ಗಂಗಯ್ಯ ಹಿರೇಮಠ, ನಿಜಶರಣ ಅಂಬಿಗ ಚೌಡಯ್ಯ ಗೋವಾ ಸಂಘಟನೆ ಕಾರ್ಯದರ್ಶಿ ನಿಪ್ಪ ಹಳಬರ್ ಉಪಸ್ಥಿತರಿರುವರು.
ಈ ಎಲ್ಲ ಕಾರ್ಯಕ್ರಮಗಳಿಗೆ ಕನ್ನಡಿಗರು ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಗೋವಾ ರಾಜ್ಯಾಧ್ಯಕ್ಷ ಮಂಜು ನಾಟೀಕರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ