ಶಿಕ್ಷಣ ಕ್ಷೇತ್ರದಲ್ಲೇ ಹೊಸ ಅಲೆಯನ್ನು ಮೂಡಿಸಿದ ಪುತ್ತೂರಿನ ಪ್ರತಿಭೆ- ದುರ್ಗಾಪರಮೇಶ್ವರ ಭಟ್

Upayuktha
0


ದೇಶದಲ್ಲಿ ಅನೇಕ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ಪೋಷಕ ವರ್ಗವು ಸದಾ ಹುಡುಕುತ್ತಲೇ ಇರುತ್ತವೆ. ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ ವಿದ್ಯಾವಂತರನ್ನಾಗಿ ಮಾಡುವ ಸಂಸ್ಥೆಗಳ ಕಡೆಗೆ ಪಾಲಕರು ಹೆಚ್ಚು ಆಕರ್ಷಿತರಾಗಿರುತ್ತಾರೆ.

ಈಗಿನ ಕಾಲದಲ್ಲಿ ತಂದೆ- ತಾಯಿ ಇಬ್ಬರೂ ಹೊರ ಜಗತ್ತಿನಲ್ಲಿ ದುಡಿಯಲೇ ಬೇಕಿರುವುದರಿಂದ ಮಗುವಿನ ಸಮಗ್ರ ಬೆಳವಣಿಗೆ ಬಗ್ಗೆ ಹೆಚ್ಚಿನ ಗಮನ ಕೊಡಲಾಗುವುದಿಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಿಗೂ ಸೀಮಿತವಾದ ಅವಕಾಶ ಮತ್ತು ಉದ್ಯೋಗ ಒತ್ತಡದ ಮಧ್ಯೆ ಕೇವಲ ಮಗುವಿನ ಬೌದ್ಧಿಕ ಮತ್ತು ದೈಹಿಕ ಭಾಗಕ್ಕೆ ಮಾತ್ರವೇ ಒತ್ತು ಕೊಡುವುದನ್ನು ಗಮನಿಸುತ್ತೇವೆ.



ಬಿ.ಎಡ್ ನಲ್ಲೂ ಚೈಲ್ಡ್ ಸೈಕಾಲಜಿಗೆ ಹೆಚ್ಚಿನ ಒತ್ತು ಇಲ್ಲದಿರುವುದರಿಂದ ಶಿಕ್ಷಕರು ಕೆಲವೊಮ್ಮೆ ಮಾನಸಿಕ ಮತ್ತು ಅಧ್ಯಾತ್ಮಿಕ ಭಾಗಕ್ಕೆ ಒತ್ತು ಕೊಡುವುದನ್ನು ಮರೆಯುವರು. ಇದರಿಂದ ಮಗುವಿನ ಜೀವನವು ಯಾಂತ್ರಿಕವಾಗಿ ಬಿಡುತ್ತದೆ.

ದುಶ್ಚಟಗಳಿಗೆ ಬಲಿಯಾಗುವುದು, ಮಾನಸಿಕವಾಗಿ ಕುಗ್ಗುವುದು, ಮೆದುಳಿನ ಸಾಮರ್ಥ್ಯವನ್ನು ಕಳೆದುಕೊಳ್ಳುವುದು, ಸಂಸ್ಕಾರ ಹೀನರಾಗಿ ಬೆಳೆದು ಸಮಾಜಕ್ಕೆ ಕಂಟಕವಾಗುವುದನ್ನು ನಾವೆಲ್ಲರೂ ಕಾಣುತ್ತಿದ್ದೇವೆ.



ಈ ನಿಟ್ಟಿನಲ್ಲಿ ಪುತ್ತೂರಿನ ಶ್ರೀ ದುರ್ಗಾಪರಮೇಶ್ವರ ಭಟ್ ಇವರು ಮಕ್ಕಳ ಸಮಗ್ರ ಬೆಳವಣಿಗೆ ಕುರಿತು ಹೆಚ್ಚಿನ ಸಂಶೋಧನೆಗಳನ್ನು ನಡೆಸಿ, ಅನುಭವದ ಆಧಾರದ ಮೇಲೆ ಚೈಲ್ಡ್ ಸೈಕಾಲಜಿ ಮತ್ತು ಮಕ್ಕಳ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿಗಾಗಿ ಶ್ರಮಿಸಿ ಪ್ರಸಿದ್ಧರಾಗುತ್ತಿದ್ದಾರೆ. ಅನೇಕ ಪಾಲಕರು ಇವರ ಮಾರ್ಗದರ್ಶನದಲ್ಲಿ ತಮ್ಮ ಮಗುವಿನ ಉನ್ನತ ಭವಿಷ್ಯವನ್ನು ಕಾಣುತ್ತಿದ್ದಾರೆ.


ಸಂಶೋಧನೆ ಮತ್ತು ಅನುಭವದ ಆಧಾರದಲ್ಲಿ ಮಕ್ಕಳ ಮಾನಸಿಕ ಖಿನ್ನತೆಗೆ, ಸಮಸ್ಯೆಗೆ, ವ್ಯಕ್ತಿತ್ವ ವಿಕಸನಕ್ಕೆ, ಹೆತ್ತವರ ಮತ್ತು ಮಕ್ಕಳ ನಡುವಿನ ಸಮಸ್ಯೆಗಳಿಗೆ, ಹುಟ್ಟಿದ ಮಗುವಿನಿಂದ ಹಿಡಿದು ದೊಡ್ಡವರ ವರೆಗೂ ಮಕ್ಕಳ ಪೋಷಣೆ ಕುರಿತಾದಂತೆ ಆಪ್ತ ಸಮಾಲೋಚನೆ ನಡೆಸುತ್ತಿದ್ದಾರೆ.


ಬೆಂಗಳೂರಿನ ಹೆಚ್ಚಿನ ಶಾಲೆಗಳಲ್ಲಿ ಹಾಗೂ ಆನ್ಲೈನ್ ಮೂಲಕ ಇವರ ಸಂಪರ್ಕ ದೊರೆಯುತ್ತಿದೆ. ಮಗುವಿನ ಮನಸ್ಸಿಗೆ ಸ್ಫೂರ್ತಿ ತುಂಬಿ ಕ್ಷಣ ಮಾತ್ರದಲ್ಲಿ ಮಕ್ಕಳನ್ನು ತಯಾರು ಮಾಡುವ ಇವರು ತಮ್ಮ ಮಡದಿಯೊಂದಿಗೆ ಮಕ್ಕಳಿಗೆ ಹಾಗೂ ಹೆತ್ತವರಿಗೆ ತಲುಪುತ್ತಿದ್ದಾರೆ.


ಮಕ್ಕಳ ಆಯಾ ವಯಸ್ಸಿಗೆ ಅನುಗುಣವಾಗಿ ತಮ್ಮ ಅನುಭವದ ಆಧಾರದಲ್ಲಿ ಮಾರ್ಗದರ್ಶನ ಮತ್ತು ಪರಿಹಾರವನ್ನು ನೀಡುತ್ತಿದ್ದಾರೆ. ಶಾಲೆಗಳಲ್ಲಿ ಮಕ್ಕಳಿಗೂ -ಹೆತ್ತವರಿಗೂ ಸಂಸ್ಕಾರವನ್ನು ನೀಡುವ ಮಹತ್ತರ ಯೋಜನೆಗಳಲ್ಲಿ ಇವರ ಸಾಧನೆ ಅಪಾರವಾಗಿದೆ. ಅನೇಕ ಶಾಲೆಗಳಲ್ಲಿ ಮಕ್ಕಳ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿಗಾಗಿ ತಮ್ಮ ಶ್ರೀಮತಿಯವರೊಂದಿಗೆ ಇವರು ಭಾಗವಹಿಸುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಮೂಡಿಸುತ್ತಿದ್ದಾರೆ. ವಿಶೇಷವಾದ ಬೇಡಿಕೆಯುಳ್ಳ ಪುತ್ತೂರಿನ ಪ್ರತಿಭೆ ಸಮಾಜಕ್ಕೆ ಮಾದರಿ.


- ಟೀಮ್ ಪ್ರೇರಣಾ

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top