ಹಸುವನ್ನು ನಾವು ಲಕ್ಷ್ಮಿಗೆ ದೇವಿಗೆ ಹೋಲಿಸುತ್ತೇವೆ, ಮಾತೃ ಸ್ವರೂಪವಾದ ಪ್ರತಿಯೊಂದು ವಿಶೇಷವು ನಮಗೆ ಲಕ್ಷ್ಮಿ. ಭೂ ಮಾತೆ ಆಗಿರಬಹುದು, ಕಾಮದೇನು ಆಗಿರಬಹುದು ದೀಪಾವಳಿ ದಿನ ಅಮರ ಗೋವರ್ಧನ ಪೂಜೆ ನಡೆಯುತ್ತದೆ. ಶ್ರೀ ಕೃಷ್ಣನು ಸ್ವತಃ ಗೊತ್ತಿಲ್ಲದ ಜನರಲ್ಲಿ ಗೋವನ್ನು ಪೂಜಿಸಲು ಪ್ರೇರೇಪಿಸುವನು ಮತ್ತು ದೇವರಾಜ ಇಂದ್ರನ ಅಹಂಕಾರವನ್ನು ನಾಶ ಮಾಡಿದನು ಎನ್ನುವ ನಂಬಿಕೆ ಇದೆ.
ಗೋಪೂಜೆ ವಿಧಾನ:
ಗೋವರ್ಧನ ಪೂಜೆಯನ್ನು ಮಾಡಲು ಮೊದಲನೇಯದಾಗಿ ಮನೆಯ ಅಂಗಳದಲ್ಲಿ ಗೋವಿನ ಸಗಣಿಯಿಂದ ಗೋವರ್ಧನನ ಅರ್ಥವಾಗುವ ಚಿತ್ರವನ್ನು ತಯಾರಿಸಲಾಗುತ್ತದೆ.
ದೀಪಾವಳಿಯ ಭಾಗವಾಗಿ ಗೋಪೂಜೆಯನ್ನು ಮಾಡಲಾಗುತ್ತದೆ.
ದೀಪಾವಳಿಯು ಹೆಸರೇ ಸೂಚಿಸುವಂತೆ ಬೆಳಕಿನ ಹಬ್ಬಗಳ ಸರಣಿಯೆಂದೇ ಹೇಳಬಹುದು.ಗೋವರ್ಧನಗಿರಿಯ ಪೂಜೆಯ ಸಂಕೇತವಾಗಿ ಗೋಮಯವಾದ ಪುಟ್ಟಗಿರಿಯ ಆಕಾರವನ್ನು ನಿರ್ಮಿಸಿ ಪೂಜಿಸುವ ಪದ್ಧತಿಯೂ ಇದೆ. ಒಟ್ಟಿನಲ್ಲಿ ದೀಪಾವಳಿಯಲ್ಲಿ ಶ್ರೀಮನ್ನಾರಾಯಣನು ನರಕಾಸುರ ವಧೆ ಮಾಡಿದ ಮತ್ತು ಬಲಿಯನ್ನು ಉದ್ಧರಿಸಿದ ಕಾರಣ ವಿಷ್ಣು ಪೂಜೆ, ಬಲೀಂದ್ರ ಪೂಜೆ, ಮಹಾಲಕ್ಷ್ಮೀ ಪೂಜೆ, ಮಹಾದೇವನ ಪೂಜೆ, ಧನದ ದೇವನಾದ ಕುಬೇರನ ಪೂಜೆ, ಯಮನ ಪೂಜೆ, ಗೋಪೂಜೆ, ಗೋವರ್ಧನ ಗಿರಿ ಪೂಜೆ ಎಲ್ಲವೂ ಇರುತ್ತದೆ.
ಗೋವುಗಳು ಲಕ್ಷ್ಮಿ ದೇವಿಯ ರೂಪವಾಗಿರುವುದರಿಂದ ಈ ದಿನದ ಪೂಜೆ ಗೋವುಗಳಿಗೆ ಮಾಡುತ್ತಾರೆ. ಗೋಪೂಜೆಯ ದಿನದಂದು ಮನೆಯಲ್ಲಿನ ಹಸುಗಳಿಗೆ ಸ್ನಾನ ಮಾಡಿಸಿ, ಗೋವುಗಳನ್ನು ಅಲಂಕರಿಸಿ ಪೂಜೆಯನ್ನು ಮಾಡಿ ವಿಶೇಷ ಖಾದ್ಯಗಳನ್ನು ಅವುಗಳಿಗೆ ನೀಡುವ ಮೂಲಕ ಗೋಪೂಜೆಯನ್ನು ಪೂರ್ಣಗೊಳಿಸಲಾಗುತ್ತದೆ. ಮನೆಯಲ್ಲೆ ಗೋವಿದ್ದರೆ ಅತಿ ಶುಭಕರ ಇದಾದ ನಂತರ ವೀಳ್ಯದೆಲೆ ಕುಂಕುಮ ಇಟ್ಟು ದೀಪ ಹಚ್ಚಿ ಪೂಜಿಸಲಾಗುತ್ತದೆ.
ದಂತಕತೆಯ ಪ್ರಕಾರ ಶ್ರೀ ಕೃಷ್ಣನು ಗೋತುಲದ ಜನರಿಗೆ ಹಸುವನ್ನು ಪೂಜಿಸಲು ಆಗಿದ್ದನ್ನು ಇದು ಭಗವಾನ್ ಇಂಧನ ಕೋಪಕ್ಕೆ ಕಾರಣವಾಯಿತು. ಕೋಪದಿಂದ ಇಂದ್ರನು ಗೋಕುಲ ಜನರಿಗೆ ಸಮಸ್ಯೆಗಳನ್ನು ನೀಡಲು ಮುಂದಾದನು ಪ್ರವಾಹದಿಂದ ಗೋ ಕಂದ ಜನರನ್ನು ಪ್ರಾಣಿ ಪಕ್ಷಿಗಳನ್ನು ರಕ್ಷಿಸಲು ಶ್ರೀ ಕೃಷ್ಣ ತನ್ನ ಚಿರು ಬೆರಳಿನಲ್ಲಿ ಗೋವರ್ಧನ ಪರ್ವತವನ್ನು ಎತ್ತಿ ಹಿಡಿದನು. ಸತಸತತವಾಗಿ ಪರ್ವತಗಳನ್ನು ಎತ್ತಿ ಹಿಡಿದು ಅಲ್ಲಿ ಜನರನ್ನು ರ ಸಂರಕ್ಷಿಸಿದನು ಈ ಕಾರಣಕ್ಕಾಗಿ ಗೋವರ್ಧನ ಪೂಜೆಯ ಸಮಯದಲ್ಲಿ ಆಧಾರ್ ಆರಾಧಕರು ಹಸಿವೆ ಸಗಣಿಯಿಂದ ಈ ಪರ್ವತವನ್ನು ರಚಿಸಿ ಅದಕ್ಕೆ ಏಳು ಬಾರಿ ಪ್ರದಕ್ಷಿಣೆ ಮಾಡುತ್ತಾರೆ.
-ಕಮಲಾಕ್ಷ
ಪ್ರಥಮ ಜೆ.ಎಂ.ಸಿ ವಿಭಾಗ
ವಿವೇಕಾನಂದ(ಸ್ವಾಯತ)ಕಾಲೇಜ್ ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ