ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಇಂದು ಸಂಜೆ ಗೋ ತುಲಾಭಾರ

Upayuktha
0

ಸಾಂದರ್ಭಿಕ ಚಿತ್ರ



ಬೆಂಗಳೂರು: ಕತ್ತರಿಗುಪ್ಪೆ ಮುಖ್ಯರಸ್ತೆಯಲ್ಲಿರುವ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನಾಳೆ (ನ.10) ಸಂಜೆ 5 ಗಂಟೆಯಿಂದ ಗೋವತ್ಸ ದ್ವಾದಶೀ ಪ್ರಯುಕ್ತ ಗೋ ತುಲಾಭಾರ ಕಾರ್ಯಕ್ರಮವು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ದಿವ್ಯ ಸನ್ನಿಧಿಯಲ್ಲಿ ನಡೆಯಲಿದೆ.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ವಿದ್ವಾಂಸರು ಹಾಗೂ ಪ್ರವಚನಕಾರರಾದ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ವಹಿಸಲಿದ್ದಾರೆ. ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ, ಗೋ ತಜ್ಞ ಶೈಲೇಶ್ ಹೊಳ್ಳ ಮತ್ತು ಗೋ ಸಂರಕ್ಷಕ ಮಹೇಂದ್ರ ಮೊನಟ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಮಧ್ಯಾಹ್ನ 1 ಗಂಟೆಯಿಂದ ಸಂಜೆ 5ರ ವರೆಗೆ ಗೋ ಸಂಬಂಧಿ ಬೊಂಬೆಗಳ ಪ್ರದರ್ಶನ, ವಸ್ತು ಪ್ರದರ್ಶನ, ಗೋವಿನ ಮಹತ್ವ ಸಾರುವ ವೀಡಿಯೋ ಪ್ರದರ್ಶನ ಹಾಗೂ ಅನೇಕ ಗೋ ತಳಿಗಳ ಮಹತ್ವಗಳ ಮಾಹಿತಿ ಕಾರ್ಯಕ್ರಮ ಇರುತ್ತದೆ. ಇವುಗಳ ವೀಕ್ಷಣೆಗೆ ಹಲವು ಶಾಲೆಗಳ ಮಕ್ಕಳು ಬರಲಿದ್ದಾರೆ.


ಸಂಜೆ 5ರಿಂದ  5:30ರ ವರೆಗೆ ಭಜನಾ ತಂಡಗಳ ಸ್ತುತಿಪೂರ್ವಕ ಲಕ್ಷಣಯುಕ್ತ ದೇಸೀ ಗೋವುಗಳ ಮೆರವಣಿಗೆ, 5:30ರಿಂದ 6:00ರ ವರೆಗೆ ಗೋಪೂಜೆ, ಸಾಮೂಹಿಕ ಗೋ ಗಾಯತ್ರೀ ಪಾರಾಯಣ ನಡೆಯಲಿದೆ.


ಕೊನೆಯಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದು, ರಾತ್ರಿ 8:00 ಗಂಟೆಗೆ ಗೋ ತುಲಾಭಾರ, ಬಳಿಕ ಸಮಾರೋಪ ನಡೆಯಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 




Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top