ಮೇಕೇರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ದಂತ ತಪಾಸಣೆ

Chandrashekhara Kulamarva
0


ಮಡಿಕೇರಿ: ಇಲ್ಲಿಗೆ ಸಮೀಪದ ಮೇಕೇರಿಯ ಸ್ವಾಗತ ಯುವಕ ಸಂಘದ ನೇತೃತ್ವದಲ್ಲಿ ಮೇಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ದಂತ ತಪಾಸಣೆಯನ್ನು ಇತ್ತೀಚೆಗೆ ನಡೆಸಲಾಯಿತು. 


ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ದಂತ ಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ॥ ದೀಪಾರವರು ಮಕ್ಕಳ ದಂತ ತಪಾಸಣೆ ನಡೆಸಿದರು.


ಇದೇ ಸಂದರ್ಭ ಹಲ್ಲಿನ ಮಹತ್ವ, ಉಂಟಾಗಬಹುದಾದ ಸಮಸ್ಯೆಗಳು, ಬ್ರಶ್ ಮಾಡುವ ವಿಧಾನಗಳ ಬಗ್ಗೆ ವೈದ್ಯರು ಮಕ್ಕಳಿಗೆ ಮಾಹಿತಿ ನೀಡಿದರು. ಹಲ್ಲಿನ ಗಂಭೀರ ಸಮಸ್ಯೆಯಿರುವ ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ಕರೆ ತರುವಂತೆ ತಿಳಿಸಲಾಯಿತು. ಮೇಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ದಂತ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಂಡರು.



ಶಿಬಿರದಲ್ಲಿ ಸ್ವಾಗತ ಯುವಕ ಸಂಘದ ಅಧ್ಯಕ್ಷರಾದ ಟಿ.ಎನ್. ಉಮೇಶ್, ಕಾರ್ಯದರ್ಶಿ ಪವನ್, ಖಜಾಂಚಿ ಭವನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಲತೀಶ್, ಗ್ರಾ.ಪಂ. ಸದಸ್ಯರಾದ ಸುಶೀಲಾ ಮಧು, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸಬಿತ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ದಂತ ತಪಾಸಣೆಯ ನಂತರ ಶಾಲಾ ಮಕ್ಕಳಿಗೆ ಟೂತ್ ಬ್ರಶ್ ಹಾಗೂ ಟೂಥ್ ಪೇಸ್ಟ್ ಅನ್ನು ಉಚಿತವಾಗಿ ನೀಡಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top