ಮಂಗಳೂರು: ಕೂಟ ಮಹಾಜಗತ್ತು (ರಿ) ಸಾಲಿಗ್ರಾಮದ ಮಂಗಳೂರು ಅಂಗಸಂಸ್ಥೆ ವತಿಯಿಂದ ಡಿಸೆಂಬರ್ 3 ರ ಭಾನುವಾರ ನಡೆಸಲು ಉದ್ದೇಶಿಸಿರುವ ನರಸಿಂಹ ಯಜ್ಞದ ಪೂರ್ವಭಾವಿಯಾಗಿ ನರಸಿಂಹ ಜಪ ದೀಕ್ಷೆಯ ಸಂಕಲ್ಪ ಕಾರ್ಯಕ್ರಮ ಭಾನುವಾರ ಪಾಂಡೇಶ್ವರದ ಗುರುನರಸಿಂಹ ಸಭಾ ಭವನದಲ್ಲಿ ನಡೆಯಿತು.
ವೇದಮೂರ್ತಿ ಶ್ರೀರಂಗ ಐತಾಳ್ ಕದ್ರಿ, ವೇದಮೂರ್ತಿ ಚಂದ್ರಶೇಖರ್ ಐತಾಳ್ ಇವರ ನೇತೃತ್ವದಲ್ಲಿ ಸಮಾಜ ಬಾಂಧವರು ಸಂಕಲ್ಪ ದೀಕ್ಷೆ ತೆಗೆದುಕೊಂಡರು. ಶ್ರೀರಂಗ ಐತಾಳ್ ಮತ್ತು ಜಪಯಜ್ಞದ ಸಂಚಾಲಕರಾದ ಶ್ರೀಧರ ಹೊಳ್ಳ ಅವರು ನರಸಿಂಹ ಜಪ ಯಜ್ಞದ ಉದ್ದೇಶ ಹಾಗೂ ಮಾಹಿತಿಯನ್ನು ನೀಡಿದರು.
ಸಮಾಜದ ಸಂಘಟನೆ, ಐಕ್ಯತೆ, ಶ್ರೇಯಸ್ಸು, ಧೀರಕ್ಷೆಗಾಗಿ ಕೂಟ ಸಮಾಜದ ಪ್ರತಿಯೊಬ್ಬರೂ ಇಂದಿನಿಂದ ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆಯ ವೇಳೆಗೆ ಕನಿಷ್ಠ 108 ನರಸಿಂಹ ಜಪ, ಪೂರಕವಾಗಿ ತರ್ಪಣ, ನಮಸ್ಕಾರ ಮಾಡಿ ಅಂತಿಮವಾಗಿ ಡಿಸೆಂಬರ್ 3ರಂದು ನಡೆಯುವ ಶ್ರೀ ಗುರು ನರಸಿಂಹ ಜಪ ಯಜ್ಞದಲ್ಲಿ ಸಮಾಪನ ಮಾಡುವ ಗುರಿಯೊಂದಿಗೆ ಸಂಕಲ್ಪ ಮಾಡಲಾಗಿದೆ.
ಕೂಟ ಮಹಾಜಗತ್ತಿನ ಮಂಗಳೂರು ಅಂಗ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಮಯ್ಯ, ಕಾರ್ಯದರ್ಶಿ ಗೋಪಾಲಕೃಷ್ಣ ಮಯ್ಯ, ಉಪಾಧ್ಯಕ್ಷ ಪ್ರಭಾಕರ ಐತಾಳ್, ಕೃಷ್ಣ ಮಯ್ಯ, ಬಾಲಕೃಷ್ಣ ಐತಾಳ್, ಮಹಿಳಾ ವಿಭಾಗದ ಅಧ್ಯಕ್ಷೆ ಸುಮತಿ ಕೊರಿಯಾ, ಕಾರ್ಯದರ್ಶಿ ಶಶಿಪ್ರಭ ಐತಾಳ್, ಕಾರ್ಯಕ್ರಮ ಸಂಚಾಲಕರಾದ ಯೋಗೀಶ್ ಹೊಳ್ಳ, ರಂಗನಾಥ ಐತಾಳ್, ಪುರೋಹಿತ ವೇ. ಮೂ. ಶಿವರಾಮ ಕಾರಂತ, ವೇ. ಮೂ. ವರ್ಕಾಡಿ ಸುಬ್ರಹ್ಮಣ್ಯ ಮಯ್ಯ ಮೊದಲಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


