ಡಾ ಸುರೇಶ ನೆಗಳಗುಳಿ ಅವರಿಗೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

Upayuktha
0


ಮಂಗಳೂರು: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ) ಬೆಂಗಳೂರು, ಇದರ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಮಂಗಳೂರಿನ ಮಂಗಳಾ ಆಸ್ಪತ್ರೆಯ ಆಯುರ್ವೇದ ಹಾಗೂ ಮೂಲವ್ಯಾಧಿ ಕ್ಷಾರ ಚಿಕಿತ್ಸಾ ತಜ್ಞ ಮತ್ತು ಬರಹಗಾರ ಡಾ ಸುರೇಶ ನೆಗಳಗುಳಿ ಇವರಿಗೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.


ನವೆಂಬರ್ 19 ಭಾನುವಾರದಂದು ಶಿವಮೊಗ್ಗದ ಕರ್ನಾಟಕ ಸಭಾಭವನದಲ್ಲಿ ಕರ್ನಾಟಕ ಮರು ನಾಮಕರಣದ ಸುವರ್ಣ ಸಂಭ್ರಮದ ನಿಮಿತ್ತ ಏರ್ಪಡಿಸಲಾಗಿದ್ದ ಪಂಚ ಭಾಷಾ ಕವಿಗೋಷ್ಠಿಯಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು.



ವೇದಿಕೆ ಅಧ್ಯಕ್ಷ ಕೊಟ್ರೇಶ್ ಉಪ್ಪಾರ್, ಜಿಲ್ಲಾಧ್ಯಕ್ಷೆ ಡಾ ಹಸೀನಾ ಕೆ ಹೆಚ್, ರಂಜಾನ್ ದರ್ಗಾ, ನಾಗರಾಜ್ ದೊಡ್ಮನಿ, ಖ್ಯಾತ ಗಜಲ್ ಕವಿ ಸಿದ್ಧರಾಮ‌ ಹೊನ್ಕಲ್, ಮಂಗಳೂರಿನ‌ ನ್ಯಾಯವಾದಿ, ಕವಯಿತ್ರಿ ವೇದಿಕೆಯ ಉಪಾಧ್ಯಕ್ಷೆ ಶ್ರೀಮತಿ ಪರಿಮಳಾ ಮಹೇಶ್, ಉಳುವಂಗಡ ಕಾವೇರಿ ಉದಯ, ಬಿ.ಎಂ ಬಶೀರ್, ನಾಗೇಶ್ ಎಂ ಅನ್ವೇಕರ, ಉಳ್ಳಾಲದ ಆರಕ್ಷಕ ಇಲಾಖೆಯ ಮನ್ಸೂರ್ ಮುಲ್ಕಿ, ಲತಾ ಎಂ ಕೆ ತುರುವೇಕೆರೆ, ಜೆ ಜಿ ನರಸಿಂಹ ಮೂರ್ತಿ ಮತ್ತಿತರ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top