ನಿಟ್ಟೆ: ಸಮುದಾಯ ಸಂಪರ್ಕ ಕಾರ್ಯಕ್ರಮದ ಭಾಗವಾಗಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನ ಓರಾ ಕ್ಲಬ್ ಮತ್ತು ಆಥರ್-ಕ್ರಾಫ್ಟ್ ಕ್ಲಬ್ ನ ವಿದ್ಯಾರ್ಥಿಗಳು ಕಾರ್ಕಳದ ವಿಜೇತಾ ವಿಶೇಷ ಶಾಲೆಯ ಮಕ್ಕಳಿಗೆ ಪುಸ್ತಕಗಳನ್ನು ತಯಾರಿಸಲು ಉಪಯುಕ್ತವಾಗುವ 111 ಕಾಗದದ ಬಂಡಲ್ಗಳನ್ನು ಹಸ್ತಾಂತರಿಸಿದರು.
ಕ್ಲಬ್ ನ ವಿದ್ಯಾರ್ಥಿಗಳು ಪರೀಕ್ಷೆಯ ಉತ್ತರ ಪುಸ್ತಕದ ಬಳಕೆಯಾಗದ ಭಾಗಗಳನ್ನು ಸಂಗ್ರಹಿಸಿ ಮರುಬಳಕೆ ಮಾಡಿ ವಿಜೇತಾ ಶಾಲೆಗೆ ದಾನ ಮಾಡಿದರು. ಆಥರ್-ಕ್ರಾಫ್ಟ್ ಕ್ಲಬ್ ಅಧ್ಯಕ್ಷ ಅಮೋಘ್ ಶೇಟ್, ಓರಾ ಕ್ಲಬ್ ಉಪಾಧ್ಯಕ್ಷೆ ರಶ್ಮಿ ಸದಸ್ಯರಾದ ಪವಿತ್ರಾ ಅಮೀನ್, ಪೂಜಿತ್ ಕೆ.ಜೆ., ವಿಜೇತಾ ಭಟ್, ಸುಮೇಧಾ ಎಸ್.ಕಿಣಿ, ಪ್ರೀತಲ್ ದಯಾನಂದ ಮುಂತಾದವರು ಈ ಯೋಜನೆಯಲ್ಲಿ ಭಾಗವಹಿಸಿದ್ದರು.
ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲುಂಕರ್, ಕ್ಯಾಂಪಸ್ ನಿರ್ವಹಣೆ ಮತ್ತು ಅಭಿವೃದ್ಧಿ ನಿರ್ದೇಶಕ ಯೋಗೀಶ್ ಹೆಗ್ಡೆ, ಮುಖ್ಯ ವಾರ್ಡನ್ ಮತ್ತು ಮಾನವಿಕ ವಿಭಾಗದ ಮುಖ್ಯಸ್ಥ ಡಾ.ವಿಶ್ವನಾಥ್, ಕೌನ್ಸೆಲಿಂಗ್, ವಿದ್ಯಾರ್ಥಿ ಕಲ್ಯಾಣ, ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ಭರತ್ ಜಿ.ಕುಮಾರ್ ಮತ್ತು ಸಾಸ್ಕೆನ್ ಟೆಕ್ನಾಲಜೀಸ್ನ ಗುರುರಾಜ್ ರಾವ್, ಕೌನ್ಸಿಲರ್ ಅಂಕಿತ್ ಕುಮಾರ್ ಅವರ ಉಪಸ್ಥಿತಿಯಲ್ಲಿ ಸಣ್ಣ ಔಪಚಾರಿಕ ಸಮಾರಂಭದ ನಂತರ ಪತ್ರಿಕೆಗಳನ್ನು ವಿಜೇತಾ ಶಾಲೆಗೆ ಕಳುಹಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ