ನಿಧಿಶ ಹೆಚ್. ಅವರಿಗೆ ಡಾಕ್ಟರೇಟ್ ಪದವಿ

Upayuktha
0

ಕಾರ್ಕಳ: ನಿಟ್ಟೆಯ ಜಸ್ಟೀಸ್ ಕೆ.ಎಸ್. ಹೆಗ್ಡೆ ಉದ್ಯಮಾಡಳಿತ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ನಿಧಿಶ ಹೆಚ್ ಅವರು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಂಶೋಧನಾ ಕೇಂದ್ರದಲ್ಲಿ ಸಂಶೋಧನೆ ನಡೆಸಿ ಮಂಡಿಸಿದ 'ಡಿಟರ್ಮಿನೆಂಟ್ಸ್ ಓಫ್ ಬಿಸಿನೆಸ್ ಮಾಡೆಲ್ಸ್ ಇನ್ ಸೋಶಿಯಲ್ ಎಂಟರ್ ಪ್ರೈಸಸ್: ಆನ್ ಆಂತ್ರಪ್ರಿನೋರಿಯಲ್ ಪರ್ಸ್ಪೆಕ್ಟಿವ್' ಎಂಬ ಮಹಾಪ್ರಬಂದಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ದಯಪಾಲಿಸಿದೆ. ಅವರು ನಿಟ್ಟೆ ಉದ್ಯಮಾಡಳಿತ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಕೆ. ಶಂಕರನ್ ಅವರ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂದವನ್ನು ಮಂಡಿಸಿದ್ದರು. ಇವರು ಹೊಸಬೆಟ್ಟುವಿನ ಹೆಚ್ ಯಜ್ಞೇಶ್ ಮತ್ತು ಶ್ರೀಮತಿ ಹೆಚ್ ವೈ ಗಾಯತ್ರಿ ದಂಪತಿ ಅವರ ಪುತ್ರ.



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top