ಮಂಗಳೂರು: 'ಐಸಿಐಸಿಐ ಬ್ಯಾಂಕ್‍ನಿಂದ ಡಿಜಿಟಲ್ ರೂಪಾಯಿ' ಹೆಸರಿನ ಬ್ಯಾಂಕ್‍ನ ಡಿಜಿಟಲ್ ರೂಪಾಯಿ ಅಪ್ಲಿಕೇಷನ್ ಬಳಸಿಕೊಂಡು ಯಾವುದೇ ವರ್ತಕರ ಕ್ಯೂಆರ್ ಕೋಡ್‍ಗೆ ಹಣ ಪಾವತಿಸುವ ಸೌಲಭ್ಯವನ್ನು ಐಸಿಐಸಿಐ ಬ್ಯಾಂಕ್ ಆರಂಭಿಸಿದೆ.
ತನ್ನ ಡಿಜಿಟಲ್ ರೂಪಾಯಿ ಆ್ಯಪ್ ಮತ್ತು ಯುಪಿಐ ಅನ್ನು ಪರಸ್ಪರ ಕಾರ್ಯಸಾಧ್ಯಗೊಳಿಸುವ ಮೂಲಕ ಈ ಹೊಸ ಅನುಕೂಲತೆಯನ್ನು ಕಲ್ಪಿಸಿದೆ.ಈ ಸೌಲಭ್ಯವು ವ್ಯಾಪಾರಿ ಮಳಿಗೆಗಳಲ್ಲಿ ಇರುವ ಯುಪಿಐ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಲು ಮತ್ತು ಡಿಜಿಟಲ್ ರೂಪಾಯಿ ಆ್ಯಪ್ ಮೂಲಕ ಸುಲಭವಾಗಿ ಹಣ ಪಾವತಿಸಲು ಗ್ರಾಹಕರಿಗೆ ಅವಕಾಶ ಒದಗಿಸುತ್ತದೆ ಎಂದು ಐಸಿಐಸಿಐ ಬ್ಯಾಂಕ್‍ನ ಮಚರ್ಂಟ್ ಇಕೊಸಿಸ್ಟಮ್‍ನ ಮುಖ್ಯಸ್ಥ ಬಿಜಿತ್ ಭಾಸ್ಕರ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ವ್ಯಾಪಾರಿಗಳು ತಮ್ಮ ಯುಪಿಐ ಕ್ಯೂಆರ್ ಕೋಡ್‍ನಲ್ಲಿ ಡಿಜಿಟಲ್ ರೂಪಾಯಿ ಪಾವತಿಗಳನ್ನು ಸ್ವೀಕರಿಸಲು ಸಹಾಯ ಮಾಡುತ್ತದೆ. ಇದು ಕಡ್ಡಾಯ ಆನ್-ಬೋಡಿರ್ಂಗ್ ಕಾರ್ಯವಿಧಾನದ ಅಗತ್ಯವನ್ನು ತೆಗೆದುಹಾಕುತ್ತದೆ. ಇದು ಡಿಜಿಟಲ್ ರೂಪಾಯಿಯ ಬಳಕೆಯನ್ನು ವಿಸ್ತರಿಸುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) 2022ರ ಡಿಸೆಂಬರ್ ನಲ್ಲಿ ಪ್ರಾರಂಭಿಸಿದ ಡಿಜಿಟಲ್ ಕರೆನ್ಸಿಯ ಪ್ರಾಯೋಗಿಕ ಯೋಜನೆಯ ಮೊದಲ ಪ್ರಯತ್ನದಲ್ಲಿ ಭಾಗವಹಿಸಲು ಐಸಿಐಸಿಐ ಬ್ಯಾಂಕ್ ಅನ್ನು ಆಯ್ಕೆ ಮಾಡಲಾಗಿತ್ತು. ಬ್ಯಾಂಕ್ ಈಗ ದೇಶದಾದ್ಯಂತ 80 ನಗರಗಳಲ್ಲಿ ಈ ಸೌಲಭ್ಯವನ್ನು ಜಾರಿಗೊಳಿಸಿದೆ ಎಂದು ವಿವರಿಸಿದ್ದಾರೆ.
'ಐಸಿಐಸಿಐ ಬ್ಯಾಂಕ್‍ನಿಂದ ಡಿಜಿಟಲ್ ರೂಪಾಯಿ' ಅಪ್ಲಿಕೇಷನ್, ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಸಾಧನಗಳಿಗೆ ಲಭ್ಯವಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


