ಮಂಗಳೂರು : ವೈದ್ಯ ಸಾಹಿತಿ ಡಾ|| ಮುರಲೀ ಮೋಹನ್ ಚೂಂತಾರು ಇವರ 14ನೆಯ ಕೃತಿ ‘ಧನ್ವಂತರಿ ಭಾಗ ಎರಡು’ ವೈದ್ಯಕೀಯ ಲೇಖನಗಳ ಸಂಗ್ರಹ, ಧನ್ವಂತರಿ ಜಯಂತಿಯ ದಿನವಾದ ನ.10 ಶುಕ್ರವಾರದಂದು ಸಂಜೆ 7 ಘಂಟೆಗೆ ನಗರದ ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜಿನ ಶಂಕರಶ್ರೀ ಸಭಾಭವನದಲ್ಲಿ ಹಿರಿಯ ಖ್ಯಾತ ವೈದ್ಯರಾದ ಡಾ|| ಚಕ್ರಪಾಣಿ ಅವರಿಂದ ಲೋಕಾರ್ಪಣೆಗೊಳ್ಳಲಿದೆ ಎಂದು ಕೃತಿಕರ್ತ ಹಾಗೂ ಕಸಾಪ ಮಂಗಳೂರು ತಾಲೂಕು ಇದರ ಕಾರ್ಯದರ್ಶಿ ಡಾ|| ಚೂಂತಾರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಮಂಗಳೂರು ಹವ್ಯಕ ಸಭಾ ಇದರ ಸಹಕಾರದೊಂದಿಗೆ ಶ್ರೀ ಭಾರತೀ ಕಾಲೇಜು, ಮಂಗಳೂರು ಮತ್ತು ಲಯನ್ಸ್ ಕ್ಲಬ್ ಮಂಗಳೂರು ಇದರ ಸಹಭಾಗಿತ್ವದಲ್ಲಿ ಜರುಗಲಿದ್ದು, ಕಸಾಪ ಮಂಗಳೂರು ತಾಲೂಕು ಇದರ ಅಧ್ಯಕ್ಷರಾದ ಶ್ರೀ ಮಂಜುನಾಥ ರೇವಣಕರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಪುಸ್ತಕದ ವಿಮರ್ಶೆಯನ್ನು ಖ್ಯಾತ ಸಾಹಿತಿ ವಿಮರ್ಶಕ ಪ್ರೊ. ಶಿಕಾರಿಪುರ ಕೃಷ್ಣಮೂರ್ತಿ ಇವರು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ|| ಕಿಶನ್‍ರಾವ್ ಬಾಳಿಲ ಇವರು ಭಾಗವಹಿಸಲಿದ್ದಾರೆ. ಮಂಗಳೂರು ಹವ್ಯಕ ಸಭಾ ಇದರ ಅಧ್ಯಕ್ಷರಾದ ಶ್ರೀಮತಿ ಗೀತಾ ಗಣೇಶ್, ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಲಯನ್ ಸೀನಾ ಪೂಜಾರಿ, ಭಾರತೀ ಕಾಲೇಜಿನ ಖಜಾಂಚಿ ಶ್ರೀ ಉದಯ ಶಂಕರ್ ನೀರ್ಪಾಜೆ ಅವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ಜರುಗಿಲಿದ್ದು, ಎಲ್ಲರಿಗೂ ಮುಕ್ತ ಆಹ್ವಾನವಿದೆ ಎಂದು ಕಾರ್ಯಕ್ರಮ ಸಂಯೋಜಕರು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ